02 September 2011

ಮನದ ಮಾಲಿಕೆ

ಹರಿಸಲೇ ನನ್ನ ಈ ಲೇಖನಿ ಬರಹವ
ನುಡಿಸಲೇ ಪದಗಳ ಪಲ್ಲವಿ ಕೊಳಲನ
ಧುಮುಕಿ ಧುಮುಕಿ ಧರೆಗೆ ಇಳಿಯಲಿ
ತಂಪು ತರುವ ತಾವರೆ
ಊರ ತುಂಬಾ ಹರಡುವೆ
ಬಣ್ಣ ಬಣ್ಣದ ಭಾವನೆ

ಕಣ್ಣ ಮುಂದೆ ಕಾಣುತ್ತಿರುವ
ಕೆಂಪು ಕಾಂತಿಯ ಕಿರಣವು
ಕೂಗಲೆಂದು ಹೋಗುತ್ತಿರಲು
ಕೇಳುತಿತ್ತು ಕರುಳಿನ ಕಲರವ
ನುಡಿಯೊಮುತ್ತು ನಲಿದು ಬಂತು
ನೋವು ನೀಗುವ ನಂದನ

ನಿನ್ನೆವರೆಗೂ ನುಡಿಸುತ್ತಿತ್ತು
ನೋವು-ನಲಿವಿನ ನರ್ತನ
ನೆನಪು ಮಾತ್ರ ನೂರು ಇತ್ತು
ನುಂಗಲಾರದೆ ತುತ್ತನ
ನಂಬಿಕೆಯ ಆ ನೆಲೆಯ ಕಂಡು
ಚಿಮ್ಮಿತು ಚೆಲುವ ಚೇತನ

ಸ್ಪೂರ್ಥಿ ತಂದ ಸರಳ ಸೂತ್ರವೂ
ಸೇರಬಯಸಿತು ಸೂರಿಗೆ
ಸಾಲುಗಟ್ಟಿದ ಸೊಬಗ ಸವಿಯಲು 
ಸಾಧು ಸಂತರು ನೆರೆದರು
ಕೂಡಿ ಕಟ್ಟಿದ ಕಾರ್ಯಕ್ಷೇತ್ರವು
ಜ್ಞಾನ ದೇಗುಲವಾಯಿತು.

6 comments:

  1. chennagi moodi bandide kano. Tumba bhavanegalu adagide adralli ansutte, nimge matra adu artavagbahudeno.Tumba chennagide.

    ReplyDelete
  2. Appu,

    Thank you. yes it involves lot of feelings. keep visiting.

    ReplyDelete
  3. Guru Sir,

    Thank you. Keep reading.

    ReplyDelete
  4. kalarava,

    dhanyavaada. matte banni.

    ReplyDelete