25 September 2011

ಪ್ರೇಮಾನ್ವೇಷಣೆ

 
ಈ ಸಂಭಾಷಣೆ, ಮಿಂಚಂಚೆ ಅನ್ವೇಷಣೆ 
ತುಸು ಮೌನ, ಕ್ಷಣ ಗಾನ, 
ತೆರೆದಿಟ್ಟ ಮನದ ತಾಳೆಗರಿ 
ತೇಲಿ ಬಂದ ತೆಪ್ಪದಂತೆ 
ಸೇರಿತಲ್ಲ ಭಾವ ತೀರ 
ಹಾಡಿತೆಲ್ಲ ಹಂಸ ರಾಗ 
ಕುಹೂ ಕುಹೂ ಕೋಗಿಲೆ ||

ಮೊದಮೊದಲು ಮೌನ ಮಿಲನ 
ನಡುನಡುವೆ ಕಾಲ ಹರಣ
ಮುಸ್ಸಂಜೆ, ಮಳೆಬಿಲ್ಲೆ
ಕವಲೊಡೆದ ಪ್ರೇಮ ಕವನ 
ಬಿಗಿ ಹಿಡಿತ, ಎಡೆ ಬಡಿತ 
ತೆರೆದೊಡನೆ ಧುಮುಕೋ ತುಡಿತ||

ಮೊಳಗಿತು ಮೊದಲ ವದನ  
ಬೆರೆತಿತು ಭಾವ ತರಣ 
ಸಿಂಧೂರ ಸುಧೆಯ ಸಮ್ಮಿಲನ 
ಶುರುವಾಯಿತು ಪ್ರೇಮ ಪಯಣ 
ನುಡಿತಿತ್ತು ಮನದ ಕರಣ 
ಬೆಸೆಯಿತು ಬಾಳ ಆವರಣ||




6 comments:

  1. lovely santhosh,

    tumbaa ishta aytu prema kavana,

    bhaavuka agta iddira enu kathe

    ReplyDelete
  2. Guru Sir,

    Thank you. Bhavukate enu illa. Sumne haage ondu prayoga.

    ReplyDelete
  3. ಸಂತೋಷ್..ಡಾ.ಗುರು ಮತ್ತೆ ನಾನು ನಿಮ್ಮಂತೆ.. ಸಮ್ಶೋಧನೆಯಲ್ಲಿ ಆವಿಷ್ಕಾರಕ್ಕೆ ಮೊದಲಿಟ್ಟವರು ಕವನ-ಹರಟೆ ಅಂತ...ಚನ್ನಾಗಿದೆ ನಿಮ್ಮ ಭಾವ ಲಹರಿ ಅದರಲ್ಲೂ
    ಮೊದಮೊದಲು ಮೌನ ಮಿಲನ
    ನಡುನಡುವೆ ಕಾಲ ಹರಣ
    ಮುಸ್ಸಂಜೆ, ಮಳೆಬಿಲ್ಲೆ
    ಕವಲೊಡೆದ ಪ್ರೇಮ ಕವನ
    ಬಿಗಿ ಹಿಡಿತ, ಎಡೆ ಬಡಿತ
    ತೆರೆದೊಡನೆ ಧುಮುಕೋ ತುಡಿತ

    ನಮ್ಮ ಅವಾಗಮನ ಇನ್ನು ನಿರಂತನ...??

    ReplyDelete
  4. Jalanayana,

    Thank you for the comment. Yes, I have been following you and guru on these lines. This is just a trial in a different style. Keep reading.

    ReplyDelete