22 May 2011

ಕಲ್ಪನೆಯ ಕನ್ನಡಿ

     ಸ್ನೇಹಿತರೆ, ಇಂದು ನನಗೆ ಸುಗ್ಗಿಯ ದಿನ.  ನನ್ನ "ಅಂತರಂಗದ ಆವಿಷ್ಕಾರ" ಎಂಬ ಈ ಅಂಕಣಕ್ಕೆ ೫೦ ರ ಸಂಭ್ರಮ.  ನಿಮ್ಮೆಲ್ಲರ ಶುಭ ಹಾರೈಕೆ, ಉತ್ತೇಜನ, ಪ್ರೋತ್ಸಾಹ ಮತ್ತು ಸಲಹೆಗಳು ಇದಕ್ಕೆ ಕಾರಣ.  ದಿನಾಂಕ ೨೨/೦೯/೨೦೦೯ ರಂದು ನಾನು ಸ್ವಿಡನ್ನಿನ ಸ್ಟಾಕ್ಹೊಮಿನಲ್ಲಿ ಅಥಿತಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಆರಂಭವಾದ ಈ ನನ್ನ ಅಂಕಣ, ಅನೇಕ ಮೈಲಿಗಲ್ಲುಗಳನ್ನು ದಾಟಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಇಬ್ಬರಿಗೆ ನನ್ನ ಕೃತಜ್ಞತೆಗಳನ್ನು ಹೇಳಬಯಸುತ್ತೇನೆ.  ಮೊದಲನೆಯದಾಗಿ ನಾನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದಾಗ ನನ್ನ ಜೊತೆವಾಸಿ ಆಗಿದ್ದ ಮತ್ತು ನನ್ನ ಆತ್ಮೀಯ ಮಿತ್ರರು ಆಗಿರುವ ಶ್ರೀಯುತ ಚಂದ್ರಶೇಖರ್ ಅವರಿಗೆ ನನ್ನ ಪ್ರೀತಿಪೂರ್ವಕ ವಂದನೆಗಳು.  ಕನ್ನಡ ಭಾಷೆಯ ಸೊಗಡು, ವೈವಿದ್ಯತೆ, ಮಾತಿನ ವರ್ಚಸ್ಸು ಮತ್ತು ಭಾಷೆಯ ಬೆಳವಣಿಗೆಗೆ ಅಪಾರ ವತ್ತು ನೀಡಿ ನನ್ನಲ್ಲಿ ಭಾಷಾ ಸಂಪತ್ತನ್ನು ಅವರು ಬೆಳಸಿದರು.  ಇದಕ್ಕಾಗಿ ನಾನು ಅವರಿಗೆ ಸದಾ ಚಿರಋಣಿ.  ಎರಡನೆಯದಾಗಿ ಈಗ ಸ್ವಿಡನ್ನಿನ ಗೊತೆನ್ಬರ್ಗ್ ನಲ್ಲಿ ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿರುವ ಡಾ. ಗುರುಮೂರ್ತಿ ಹೆಗಡೆ ಅವರಿಗೆ ನನ್ನ ಗೌರವಪೂರ್ವಕ ವಂದನೆಗಳು.  ನನಗೆ ಈ ರೀತಿ ಒಂದು ಅಂಕಣ ತೆರೆದು ಅದರಲ್ಲಿ ಲೇಖನಗಳನ್ನು ಪ್ರಕಟಿಸಲು ಹೇಳಿಕೊಟ್ಟವರು ಅವರೇ. ಅವರ ಸಲಹೆ ಮತ್ತು ಮಾರ್ಗದರ್ಶನ ಈ ನಿಟ್ಟಿನಲ್ಲಿ ಮಹತ್ವದ್ದು.  ಇದರ ಜೊತೆಯಲ್ಲಿ ನಿಮ್ಮೆಲ್ಲರ ತುಂಬು ಹೃದಯದ ಅಭಿಮಾನ ಮತ್ತು ಪ್ರೋತ್ಸಾಹ ಮಿಗಿಲಾದದ್ದು.   ಇಂತಹ ಕಲಿಕೆಯ ಹಾದಿಯಲ್ಲಿ ನಾನು ಬರೆದದ್ದಕಿಂತಾ ಕಲಿತದ್ದೇ ಹೆಚ್ಚು.  ಪ್ರತಿಬಾರಿಯೂ ನನ್ನ ಭಾಷಾ ಸಂಪತ್ತು ಮತ್ತು ಭಾಷಾ ಜ್ಞಾನ ವೃದ್ಧಿಯಾಗುತ್ತಿದೆ.  ನಿಮ್ಮ ಅಭಿಮಾನ, ಸಲಹೆ, ಪ್ರೋತ್ಸಾಹವನ್ನು ಸದಾ ಬಯಸುವ.........
        


ಮುಂಗಾರು ಮಳೆಹನಿ ಮಧ್ಯೆ
ಮೌನದ ಮಂಜಿನ ಮುತ್ತು 
ಮೂಡಿತು ಮಧುರ ಮಾತು 
ಮಾಮರದ ಮರೆಯಲಿ ಮಿಂದು 


ಸೂಸಿತು ಸಂಪಿಗೆ ಸೌರಭ 
ಸಾಗಿತು ಸಂಭ್ರಮ ಸಡಗರ 
ಸಿಂಧುವ ಸೇರಲು ಸುಮವು 
ಸುರಿಸಿತು ಸೋನೆಯ ಸೋಜಿಗ 


ಚಿಮ್ಮಿದ ಚಂದದ ಚಂಡಿಗೆ
ಚಾಂದಿನಿ ಚರಣದ ಚುಂಬನ 
ಚಮನದ ಚಾಪೆಯ ಚೂರಲಿ 
ಚಕ್ರವ ಚಾಚಿದ ಚಂದ್ರಮ 


ಅಲೆಗಳ ಅಬ್ಬರ ಆಲಿಸಿ 
ಅದ್ಭುತ ಅಂಕಣ ಆರಿಸಿ  
ಅಗ್ಗದ ಅಂಜನ ಅರಿದರು 
ಅಂದದ ಅಂಬುಜ ಆಯ್ದರು  


ನಿಮ್ಮ ಪ್ರೀತಿಯ 
ಸಂತೋಷ್

13 comments:

  1. congrats, carry on!!!!!!!!!!!!!!!!

    ReplyDelete
  2. Congratulations
    ee sambhrama 100nnu dati centuriya mele century barisali, innoo ollolleya barahagalu ninninda barali endu aashisuttene

    ReplyDelete
  3. nan photo haaki... nin blog post level raise madbitte guru...suuuuper

    ReplyDelete
  4. Congrats Santosh... Keep Writing..

    ReplyDelete
  5. congradulations santhosha, really great achievement.

    ReplyDelete
  6. Subbu,

    Thank you for your good wishes.

    ReplyDelete
  7. Sumi,

    Thanks for the photo and comment.

    ReplyDelete
  8. Pradeep Sir,

    Thank you. Keep visiting.

    ReplyDelete
  9. Carry on santhosh, keep going..

    ReplyDelete