14 May 2011

ಮೌನ ಸಂಭಾಷಣೆ


ನಮ್ಮೆಲ್ಲರ ದೈನಂದಿನ ಚಟುವಟಿಕೆಗಳಲ್ಲಿ ಹಲವು ಸಂದರ್ಭ, ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ.  ಮನುಷ್ಯನ ನೆನಪು ಮತ್ತು ಮರೆವು ಕೆಲವೊಮ್ಮೆ ವರವಾಗಿ ಮತ್ತು ಕೆಲವೊಮ್ಮೆ ಶಾಪವಾಗಿ ಪರಿಣಮಿಸುವುದುಂಟು.  ಇಂತಹ ಸಂದರ್ಭಗಳು ಬಹುಷಃ ಎಲ್ಲರ ಜೀವನದಲ್ಲೂ ಎದುರಾಗಿರಬಹುದು.  ಇದು ಒಂದು ವಿಷಯ, ವಸ್ತು, ವ್ಯಕ್ತಿ, ವ್ಯಾಪಾರ, ಅಥವ ಪ್ರದೇಶ ಕ್ಕೆ ಸಂಬಂಧಿಸಿರಬಹುದು.  ಇಂತಹ ಸನ್ನಿವೇಶದಲ್ಲಿ ನಮಗೆ ಮುಖ್ಯವಾಗಿ ಬೇಕಾಗುವ ಹೆಸರುಗಳು ಮರೆತು ಹೋಗುವುದು ಹೆಚ್ಚು.  ಇಂತಹುದೇ ಒಂದು ಸನ್ನಿವೇಶ ನಿನ್ನೆ ನನಗೆ ಎದುರಾಯಿತು.  ನಿನ್ನೆ ರಾತ್ರಿ ನನ್ನ ಒಬ್ಬ ಸ್ನೇಹಿತನ ಜೊತೆ ಮಿಂಚಂಚೆಯಲ್ಲಿ ಮೌಕಿಕ ಹರಟೆ ಹೊಡೆಯುತ್ತಿದ್ದೆ.  ಆಗ ಮಾತಿನ ನಡುವೆ ಏನ್. ಐ. ಟಿ. ಕೆ ಯಲ್ಲಿ  ಎಂ. ಎಸ್ಸಿ. ಓದುತ್ತಿದ್ದ ಒಂದು ಸುಂದರ ಹುಡುಗಿಯ ವಿಚಾರ ಪ್ರಸ್ತಾಪವಾಯಿತು.  ನಾನು ನನ್ನ ಸ್ನೇಹಿತ ಇಬ್ಬರೂ ಏನ್. ಐ. ಟಿ. ಕೆ ಯಲ್ಲಿ ಇದ್ದಾಗ ಆಕೆ ನಮ್ಮೆದುರಿನಲ್ಲೇ ಓಡಾಡುತ್ತಿದ್ದಳು.  ಆಕೆಯನ್ನು ಹಲವು ಬಾರಿ ಮಾತನಾಡಿಸಿದ್ದು ಉಂಟು.  ಆದರೆ ನಿನ್ನೆ ನಮ್ಮ ಚರ್ಚೆಯಲ್ಲಿ ಆಕೆಯ ಹೆಸರು ಮಾತ್ರ ನೆನಪಿಗೆ ಬರಲೇಯಿಲ್ಲ.  ಆಕೆಯ ಬಗ್ಗೆ ಹಲವು ವಿಚಾರಗಳು ತಿಳಿದಿದ್ದವು.  ಅದರ ಬಗ್ಗೆಯೂ ಚರ್ಚೆಯಾಯಿತು.  ನಾವು ಆಕೆಯ ಹೆಸರನ್ನು ನೆನಪಿಸಿಕೊಳ್ಳಲು ಹರಸಾಹಸ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ.  ಆಕೆಯ ಹೆಸರನ್ನು ನಾವು ಫೇಸ್ ಬುಕ್, ಆರ್ಕುಟ್, ಇಮೇಲ್ ಗಳಲ್ಲಿ ಹುಡುಕಿದರೂ ಆ ಹೆಸರು ಸಿಗಲಿಲ್ಲ.  ಈ ಹುಡುಕಾಟದ ನಡುವೆ ನಮ್ಮಿಬ್ಬರ ನಡುವೆ ಕೇವಲ ಮೌನ ಸಂಭಾಷಣೆ ಮೂಡಿತ್ತು.  ಕೆಲವೊಮ್ಮೆ ಬರಿಯ ಹೆಸರಿಂದ ನಮಗೆ ಪರಿಚಯವೇಯಿಲ್ಲದ ವ್ಯಕ್ತಿಗಳನ್ನು ಅವರ ವಿವರಗಳನ್ನು ಹುಡುಕಿದ್ದೇವೆ.  ಆದರೆ ಈಕೆಯ ಹೆಸರು ಮಾತ್ರ ಜ್ಞಾಪಕ ಬರಲೇಯಿಲ್ಲ.  ಆಕೆಯ ಹೆಸರನ್ನು  ಜ್ಞಾಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಅವಳ ಮುಖ ಛಾಯೆ ಎದುರಿಗೆ ಮೂಡುತ್ತಿದ್ದರೂ, ಅವಳ ಮಾತು, ನಡವಳಿಕೆ, ಗುಣ ಎಲ್ಲವೂ ಚನ್ನಾಗಿ ಎದುರಿಗೆ ವ್ಯಕ್ತವಾಗುತ್ತಿತ್ತು.  ಅವಳು ಓದಿನಲ್ಲಿ ಜಾಣೆ, ರೂಪದಲ್ಲಿ ರಮಣಿ, ಮಾತಿನಲ್ಲಿ ಮೌನೆ. ಇಷ್ಟಾದರು ಆಕೆಯ ಹೆಸರು ಮಾತ್ರ ನೆನಪು ಬರಲೇಯಿಲ್ಲ.  ಆ ಹೆಸರು ಬಾಯಿ ತುದಿಯಲ್ಲೇ ಇದ್ದರೂ ಹೊರಗೆ ಬರಲು ತಿಣುಕಾಡುತ್ತಿತ್ತು.  ಸುಮಾರು ೪೦ ನಿಮಿಷಗಳ ಸತತ ಪ್ರಯತ್ನದ ನಂತರ ಆ ವೇಳೆಗೆ ಆನ್ ಲೈನ್ ಬಂದಿದ್ದ ಪ್ರಸ್ತುತ ಏನ್. ಐ. ಟಿ. ಕೆ ಯಲ್ಲಿ ಸಂಶೋಧನೆ ಮಾಡುತ್ತಿರುವ ಇನ್ನೊಬ್ಬ ಸ್ನೇಹಿತನನ್ನು ಆಕೆಯ ಹೆಸರು ಏನೆಂದು ಕೇಳಿದಾಗ, ಅವನು ತಕ್ಷಣ ಹೇಳಿದ.  ಆ ಹೆಸರು ತಿಳಿಯುತ್ತಿದ್ದಂತೆ ಮೌನ ಸಂಭಾಷಣೆಯಲ್ಲಿ ಮುಳುಗಿದ್ದ ನಾನು ಮತ್ತು ನನ್ನ ಸ್ನೇಹಿತನಿಗೆ ಅಯ್ಯೋ ಈ ಹೆಸರು ನೆನಪಾಗಲಿಲ್ಲವಲ್ಲ ಎಂದು ನಮ್ಮ ನೆನಪಿನ ಶಕ್ತಿಗೆ ಛೀಮಾರಿ ಹಾಕಿಕೊಂಡೆವು.  ಆ ನಮ್ಮ ವದ್ದಾಟವನ್ನು ಈಗ ನೆನಪಿಸಿಕೊಂಡರೆ ಹಾಸ್ಯಾಸ್ಪದ ಎನಿಸುತ್ತದೆ.  ಆದರೂ ಇಂತಹ ಮಹಾನ್ ಮರೆಗುಲಿಗಳು ಪ್ರತಿಯೊಬ್ಬರಲ್ಲಿ ಇರುವುದು ಸಹಜ ಮತ್ತು ಎಲ್ಲರ ಅನುಭವಕ್ಕೂ ಬಂದಿರುವಂತದ್ದು.      

18 comments:

 1. hahahahahaha super agide maga

  ReplyDelete
 2. Mahesh,

  Thanks you keep visiting.

  ReplyDelete
 3. yarappa aa chaluve?.............

  ReplyDelete
 4. yarappa avlu ninnanna ishtondu attract madiro NITK hudgi??

  ReplyDelete
 5. Subbu,

  Nannanna attract enu maadilla. idu facts aste.

  ReplyDelete
 6. Ravi,

  alla bedi. adu mugida adhyaaya. matte adanna nenapu maadikollola.

  ReplyDelete
 7. Eega gaadi track ge bartha ide. Munduverisi station sikroo sigabahudu.

  ReplyDelete
 8. Yaro Adu? yen Full suspense ha!!!

  ReplyDelete
 9. Nagaraj,

  Station ge naanu baroke munchene gaadi horatu aagide..

  ReplyDelete
 10. Manju,

  Yaru annodu mukhya alla. adu suspense aage irali.

  ReplyDelete
 11. ಚೆನ್ನಾಗಿದೆ.. ಅಷ್ಟು ಚೆಂದದ ಹುಡುಗಿ ಹೆಸರು ಮರೆತು ಹೋಗುವುದೇ ಸಂತೋಷ್...!
  ಅಂದ ಹಾಗೆ ನೀವು ಈ ನಡುವೆ ನನ್ನ ಬ್ಲಾಗ್ ಅಡ್ರೆಸ್ ಮರೆತು ಹೋದಂತಿದೆಯಲ್ಲ... :)
  ದಯವಿಟ್ಟು ಒಮ್ಮೆ ಬಂದು ನಿಮ್ಮ ಅಭಿಪ್ರಾಯ ತಿಳಿಸಿ...

  ReplyDelete
 12. Pradeep Sir,

  kelavomme haage aagutte. I am sorry for not visiting your blog. I will look into it. Thanks for your comments.

  ReplyDelete
 13. Vanishri,

  Hu nenapaayitu. Thank you for the comment. Keep visiting.

  ReplyDelete