16 November 2009

ಧರಿತ್ರಿ

ಕ್ಷೀರಪತದ ಒಂದು ಬದಿಯಲ್ಲಿ
ಚುಕ್ಕಿ ತಾರೆಯು ನಿನ್ನ ಮುಡಿಯಲ್ಲಿ
ಅಡಗಿಹುದು ಸೌರಮಂಡಲದ ನಡುವಲ್ಲಿ
ಕಾಣುತಿರುವೆ ಜೀವರಾಶಿಯ ನೆಲೆಯಿಲ್ಲಿ

ಬಗೆದಿಹರು ನಿನ್ನ ಎದೆಯನ್ನು
ಹೊರತೆಗೆಯಲು ಚಿನ್ನದ ಗಣಿಯನ್ನು
ಕೊರೆದಿಹರು ಜಲಧಾರೆಯನ್ನು
ಮಾಡಲು ತೈಲದ ಶೇಖರಣೆಯನ್ನು

ಆಡುತಿರುವ ನಿನ್ನ ಉಸಿರಿಗೆ
ತಿರುಗುತಿಹುದು ಚಕ್ರ ವಿದ್ಯುತ್ಪಾದನೆಗೆ
ಧುಮುಕುತ್ತಿರುವ ಕಣ್ಣಿರ ಧಾರೆಗೆ
ದಿಕ್ ಬದಲಿಸಿದರು ಬೆಳೆಯಕಡೆಗೆ

ಹಾರಲು ರಕ್ಕೆಯ ಚಾಚಿದರು
ತೇಲಲು ದೋಣಿಯ ಕಟ್ಟಿದರು 
ಸಾಗಲು ಕುದುರೆಯ ಬಳಸಿದರು 
ಮಡಿಲನು ಸೇರಲು ಮಲಗಿದರು

4 comments:

  1. this is very good...but nange endin yako ardhadalli nillisida haganisitu.continue...al d best

    ReplyDelete
  2. Appu thanks for your comment. If you read it with bit of prasa then you will not feel that it is stopped in the middle.

    ReplyDelete
  3. Howdappa...prasa chennagide..but nange aa "concept"elliyo link tappida haage annistu..but overall chennagi moodi bandide.Shubhavagali.

    ReplyDelete