14 November 2009

ಕನ್ನಡ ನಾಡು



ಅ ಆ ಇ ಈ ಕಲಿಯಿರಿ
ಕನ್ನಡ ನಾಡಲಿ ನೆಲಸಿರಿ
ಭಾಷೆಯ ಸೊಬಗನು ಅರಿಯಿರಿ
ಹಾಡುತ ಕುಣಿಯುತ ನಲಿಯಿರಿ

ನೋಡುತ್ತ ನಾಡ ಸೊಬಗು
ಆಗದಿರು ನೀ ಬೆರಗು
ರಾಜ್ಯಕ್ಕೆ ಅದರ ಮೆರಗು
ಒಡೆದ ಮನಕ್ಕೆ ಅರಗು

ಆನೆ ಮೇಲೆ ಅಂಬಾರಿ
ಒಳಗೆ ರಾಜನ್ ಸವಾರಿ
ಕುಡಿಯೋ ನೀರು ಕಾವೇರಿ
ನಮಗೆ ಅದೇ ಮಾದರಿ

ಕಲೆಗೆ ಅದ್ಭುತ ಸೂರು
ಅತಿಥಿಗೆ ಕೊಡುವ ಕೀರು
ತಂಪಿಗೆ ತೆಂಗಿನ ನೀರು
ಇದುವೇ ನಮ್ಮಯ ಊರು

No comments:

Post a Comment