11 November 2009

ಅಗಲಿದ ಗುರುವಿಗೆ ಭಕ್ತಿ ಪೂರ್ವ ನಮನ

ಪ್ರೊ. ಬಿ. ಎಸ್. ಶೇಷಾದ್ರಿ, ಎಲೆಕ್ಟ್ರೋ ಕೆಮಿಸ್ಟ್ರಿ ವಿಷಯದಲ್ಲಿ ಒಬ್ಬ ಮಹಾನ್ ಭೋದಕ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ೩೦ ವರ್ಷಗಳ ಸೇವೆಸಲ್ಲಿಸಿ, ಆ ವಿಭಾಗದ ಮುಖ್ಯಸ್ತರಾಗಿ ನಿವೃತ್ತಿ ಹೊಂದಿದ ಒಳ್ಳೆಯ ಶಿಕ್ಷಕ.  ದಕ್ಷಿಣ ಭಾರತದಲ್ಲಿ ಎಲೆಕ್ಟ್ರೋ ಕೆಮಿಸ್ಟ್ರಿ ಎಂದರೆ ಮೊದಲಿಗೆ ಎಲ್ಲರ ಬಾಯಿಗೆ ಬರುತ್ತಿದ್ದ ಹೆಸರು ಪ್ರೊ. ಬಿ. ಎಸ್. ಶೇಷಾದ್ರಿ ಅವರದು.  ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಅವರು ನಿವೃತ್ತಿಯ ನಂತರ ವಿಶ್ವೇಶ್ವರಪುರ ಮತ್ತು ಏನ್.ಎಂ.ಕೆ. ಆರ್.ವಿ. ಕಾಲೇಜುಗಳಲ್ಲಿ ಅಥಿತಿ ಉಪನ್ಯಾಸಕರಾಗಿ ಎಂ.ಎಸ್ಸಿ ಗೆ ಭೋದನೆ ಮಾಡುತ್ತಿದ್ದರು.  ಸಾಮಾನ್ಯವಾಗಿ ಉನ್ನತ ಶಿಕ್ಷಣದಲ್ಲಿ ಯಾವುದೊ ಒಂದು ವಿಷಯದಲ್ಲಿ ಪರಿಣತಿ ಪಡೆದು ಅದನ್ನು ಮಾತ್ರ ತಮ್ಮ ಸೇವೆಯುದ್ದಕ್ಕು ಭೋದನೆ ಮಾಡುತ್ತಾ ಬರುತ್ತಾರೆ.  ಆದರೆ ಇವರು ರಸಾಯನ ಶಾಸ್ತ್ರದ ಯಾವ ವಿಭಾಗವಾದರು ಭೋದನೆ ಮಾಡಲು ಸಿದ್ದರಿದ್ದರು ಮತ್ತು ಅನೇಕ ಬಾರಿ ಶಿಕ್ಷಕರ ಕೊರತೆಯಿದ್ದಾಗ ಹಾಗೆ ಬೇರೆ ವಿಷಯವನ್ನು ಭೋದನೆ ಮಾಡಿದ್ದು ಉಂಟು. ನನಗೆ ತಿಳಿದಿರುವ ಪ್ರಕಾರ ಅವರು ಸಂಶೋಧನೆ ಮಾಡುತ್ತಿದ್ದ ಕಾಲದಲ್ಲಿ ಒಂದು ಪಠ್ಯಪುಸ್ತಕವನ್ನು xerox ಮಾಡಿಸಲು ಸೌಲಭ್ಯವಿಲ್ಲದ ಕಾರಣ ೧೩೦೦ ಪುಟಗಳ ಪುಸ್ತಕವನ್ನು ಕೂತು ಸ್ವತಃ ಬರೆದಿದ್ದರು.  ಅವರು ಭೋದನೆ ಮಾಡುತಿದ್ದ ಯಾವ ವಿಷಯವಾದರೂ ಅದರ ವಿವರಣೆಗಳನ್ನು (notes) ಬರೆದು ಒಂದು ಫೈಲ್ ನಲ್ಲಿ ಇಟ್ಟು ನಂತರ ವಿದ್ಯಾಥಿಗಳಿಗೆ ನೀಡುತ್ತಿದ್ದರು.  ನನಗೆ ಮೊದಲ ಬಾರಿ ಭಾರತೀಯ ವಿಜ್ಞಾನ ಸಂಸ್ಥೆ (IISC) ಯಲ್ಲಿ  ಒಂದು conference ನಲ್ಲಿ ಭಾಗವಹಿಸಿ ಸಂಶೋಧನಾ ಲೇಖನವನ್ನು ವಿವರಿಸಲು ಅವಕಾಶ ಮಾಡಿಕೊಟ್ಟಿದ್ದರು.  ನಂತರ ಒಮ್ಮೆ ಪರೀಕ್ಷೆಯಲ್ಲಿ ನನಗೆ ಕಡಿಮೆ ಅಂಕ ಬಂದಾಗ ನನಗಿಂತಲೂ ಹೆಚ್ಚು ಅವರು ನೊಂದು ಅದನ್ನು ತರಗತಿಯಲ್ಲೇ ವ್ಯಕ್ತಪಡಿಸಿದರು.  ನಂತರ ಅವರಿಗೆ ನೋವನ್ನು ತರಬಾರದು ಎಂದು ಚನ್ನಾಗಿ ಓದಿ ಪ್ರಥಮ ದರ್ಜೆಯಲ್ಲಿ ಪಾಸುಮಾಡಿದಾಗ ಅವರಿಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ೭-೧೧-೨೦೦೯ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಥಿತಿ ಉಪನ್ಯಾಸಕ್ಕೆ ಬಂದಿದ್ದ ಅವರು ಅವರಿಗೆ ಗೊತ್ತು ಮಾಡಿದ್ದ  ಹೋಟೆಲ್ ಒಂದರಲ್ಲಿ ವಿಶ್ರಾಂತಿ ಪಡೆದು ತಯಾರಾಗುವ ವೇಳೆ ತೀವ್ರ ಹ್ರುದಯಾಗಾತದಿಂದ ಸಾವನಪ್ಪಿದರು.  ಅವರಿಗೆ ೬೮ ವರುಷ ವಯಸ್ಸಾಗಿತ್ತು.  ೬ ಅಡಿ ಎತ್ತರದ ಅಜಾನುಬಾಹು, ವಿದ್ಯಾಥಿಗಳ ಪ್ರೀತಿಯ ಶಿಕ್ಷಕ ನಮನ್ನು ಬಿಟ್ಟು ಅಗಲಿದರು.  ಕೇವಲ ೧೫ ದಿನಗಳ ಕೆಳಗೆ ಆವರ ಮಗಳಿಗೆ ಮಾಡುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿದ್ದರು.  ಒಂದು ವಾರದ ಹಿಂದೆ ಆವರ ತಮ್ಮ ತೀರಿಕೊಂಡ ಕಾರಣ ಆವರ ಕಾರ್ಯಗಳನ್ನು ಇವರೇ ಮಾಡಿದ್ದರು.  ಇದಕ್ಕೂ ಹಿಂದೆ ಒಂದು ವರ್ಷದ ಕೆಳಗೆ ೨ ಬಾರಿ ಅಪಘಾತವಾಗಿ ವಿಶ್ರಾಂತಿ ಪಡೆದು ಸ್ವಲ್ಪ ಚೇತರಿಸಿಕೊಂಡ ಬಳಿಕ ಮತ್ತೆ ಭೋದನೆ ಮಾಡುತ್ತಿದ್ದರು.  ನಾನು ಅಮ್ಸ್ತೆರ್ದಂ ಗೆ ಹೋಗಿದ್ದಾಗ ಭಾನುವಾರ ಮುಂಜಾನೆ ನನ್ನ ಒಬ್ಬ ಸ್ನೇಹಿತ ದೂರವಾಣಿ ಮೂಲಕ ಈ ಆವರ ಸಾವಿನ ಸುದ್ದಿ ತಿಳಿಸಿದ.  ಆಗ ನನಗೆ ದು:ಖ ಉಕ್ಕಿಬಂದು ಆವರ ನೆನಪು ಗೋಚರಿಸಿತು.  ಆ ಭಗವಂತನು ಆವರ ಆತ್ಮಕ್ಕೆ ಶಾಂತಿ ಕೊಡಲೆಂದು ಬೇಡುವ ಆವರ ಪ್ರೀತಿಯ ವಿದ್ಯಾರ್ಥಿ ಬಳಗದ ಪರವಾಗಿ ಈ ಒಂದು ಲೇಖನ.

1 comment:

  1. ಶೇಷಾದ್ರಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡೋಣ,
    ಅವರೊಬ್ಬ ಮಹಾನ್ ಶಿಕ್ಷಕ ಎನ್ನುವುದರಲ್ಲಿ ಎರಡು ಮಾತಿಲ್ಲ

    ReplyDelete