05 November 2009

ಸುಂದರ ಸೊಬಗು

ನಾಡಿಗೆ ಬೇಕು ಪ್ರಕೃತಿ
ಉಳಿಸಲು ಒಳ್ಳೆ ಸಂಸ್ಕೃತಿ
ಅದಕೆ ಇಲ್ಲ ಆಕೃತಿ
ಅರಿಯದಿರೆ ಎಲ್ಲಾ ವಿಕೃತಿ


ಬೀಸಲು ಗಾಳಿಯ ತಂಪು
ಕೇಳುವೆ ಕೋಗಿಲೆ ಇಂಪು
ಸೆಳೆಯುವ ಹೂವಿನ ಕಂಪು
ನಡುವೆಯೇ ಸೂರ್ಯನ ಕೆಂಪು


ಹರಿಯುವ ನೀರಿನ ಸದ್ದು
ನೊಂದ ಮನಸ್ಸಿಗೆ ಮದ್ದು
ಹೋಗು ನೀ ಎದ್ದು
ಬರುವೆ ಪ್ರಪಂಚವ ಗೆದ್ದು


ಕಾಣುವೆ ಸುಂದರ ಬಣ್ಣ
ಹಚ್ಚಲು ಆಗದು ಸುಣ್ಣ
ತುಂಬಿಕೋ ನಿನ್ನಯ ಕಣ್ಣ
ಸುಖದಿ ಸೇರುವೆ ಮಣ್ಣ  

No comments:

Post a Comment