02 November 2009

ಧರ್ಮ ದರ್ಶನ

ಚಿಲಿಪಿಲಿ ಹಕ್ಕಿಯ ನಾದವ ಕೇಳು
ತಿಳಿಯುವ ಹಾಗೆ ಸಾರಿ ಹೇಳು
ಅದ್ಭುತ ಇರುವುದು ಭೂಮಿಗೆ ಏಳು
ನಡೆಸುವೆ ನೀನು ನೆಮ್ಮದಿ ಬಾಳು

ವಿದ್ಯೆಗೆ ಗೌರವ ನೀಡುವರೆಲ್ಲ
ಅದನ್ನು ಕದಿಯಲು ಸಾಧ್ಯವೆ ಇಲ್ಲ
ನಿಜವನು ಅರಿತರೆ ಸಿಗುವುದು ಬೆಲ್ಲ
ಕಳೆವುದು ಬಾಳಿನ ತೊಂದರೆ ಎಲ್ಲಾ

ರಥವನು ನಡೆಸಲು ಬಿಟ್ಟರು ಅಂದು
ತಿಳಿಯಲು ಬೇಕು ಕನ್ನಡಿ ಇಂದು
ಆಗುವೆ ನೀನು ಮಾದರಿ ಬಿಂದು
ಲೋಕಕೆ ಆಗಿರು ಒಳಿತು ಎಂದೂ.

ಅಂದದ ಬಾಳಿಗೆ ಚಂದದ ಬೀಡು
ಮನಸಿನ ಒಳಿತಿಗೆ ಸುಂದರ ಹಾಡು
ಕೇಳುವರಾರು ನಿನ್ನಯ ಪಾಡು
ಕಾಣುವೆ ಹೋಗು ಸುಂದರ ಕಾಡು

1 comment:

  1. Really nice articles.You are so creative, continue the same. All the best my dear friend.

    ReplyDelete