04 November 2009

ಸ್ನೇಹದ ಸೆಳೆತ

ಬಾಳಿಗೆ ಬೇಕು ಪ್ರೇಮದ ಸವಿ
ಬೆಸೆಯಲು ಬೇಕು ಸ್ನೇಹದ ಸಹಿ
ಅರಿತರೆ ನಾವು ಸಿಗುವುದು ಸಿಹಿ
ಬೆರೆತರೆ ನೀವು ನೀಗುವುದು ಕಹಿ

ನಂಬಿಕೆ ಒಂದೇ ಅದರ ಅಸ್ತ್ರ
ವಿಶ್ವಾಸವೇ ಇದರ ಸಮವಸ್ತ್ರ
ದಾಖಲೆಗಿಲ್ಲ ಯಾವುದು ಪತ್ರ
ಬಿಡಿಸಲು ಆಗದು ಅದರ ಚಿತ್ರ

ಮಮತೆಯೇ ಒಂದು ಅದರ ಬಲ
ಇರುವುದು ಶಕ್ತಿ ತುಂಬುವ ಛಲ
ನಿನ್ನಲಿ ಕಾಣುವೆ ಪ್ರತಿಯಾ ಸಲ
ಸವಿಯುವೆ ಎಂದೂ ಅದರ ಫಲ

ಸ್ನೇಹವ ಬೆಸೆಯಲು ಇರಲಿ ತಮಸು
ನಡೆಸುವ ಆಸೆ ತರಲಿ ಕನಸು
ಬಿಟ್ಟು ಹೋದರೆ ಒಡೆವುದು ಮನಸು
ಜೋಡಣೆ ಕೆಲಸ ಆಗದು ನನಸು

1 comment:

  1. ಒಳ್ಳೆಯ ಕವನ, ಏನು ಕವಿತೆ ಬರೆಯೋಕೆ ಆರಂಬ ಮಾಡಿದ್ರಿ

    ReplyDelete