01 November 2009

ಕಾಲದ ಅವತಾರ

ಬಾನಲಿ ಮೂಡಲು ಭರಣಿ
ಕಣ್ಣಲಿ ಕಂಡೆನು ತರುಣಿ
ಹಿಡಿಯಲು ಹೋದೆನು ಹರಿಣಿ
ಕೈಯಿಗೆ ಸಿಕ್ಕಿತು ಬೆರಣಿ

ಕಂಡಿತು ನನಗೆ ವರುಣಿ
ಸೋಲುತ ಬಂದೆನು ಸರಣಿ
ದಾರಿಯ ತೋರಿತು ಧರಣಿ
ಹುಡುಕುತ ಹೋಗುವೆ ಗಿರಣಿ

ವರವನು ಕೊಡುವೆಯ ಕರಣಿ
ಕರುಣಿಸಿ ಕೊಟ್ಟಳು ಪಿರಣಿ
ತಪ್ಪದೆ ನಡೆಯಿತು ಸಿರಣಿ
ಶಂತವ ಆಗಿರು ಅರಣಿ

ಚಲದಲಿ ನಡೆದಳು ವಿರಣಿ
ಕಂಡಿತು ಅವಳಲಿ ತರಣಿ
ಹಠದಲಿ ಹೋದಳು ಚರಣಿ
ಪರಿಚಯ ಆಯಿತು ಶರಣಿ

ಓದುಗರ ಅನುಕೂಲಕ್ಕೆ: ಕಠಿಣ ಪದಗಳ ಅರ್ಥ
(ವರುಣಿ = ಶರಾಬಿನ ದೇವತೆ; ಕರಣಿ = ದುರ್ಗೆಯ ಅವತಾರ; ಪಿರಣಿ = ಕನೋಜದ ಪ್ರಜೆ; ಸಿರಣಿ = ದೇವರ ಪ್ರತಿಜ್ಞೆ;
ಅರಣಿ = ಬೆಂಕಿಯ ದೇವತೆ; ವಿರಣಿ = ಶೌರ್ಯ ಮಹಿಳೆ; ತರಣಿ = ಬೆಳಕಿನ ಕಿರಣ; ಚರಣಿ = ಅಲೆಮಾರಿ;
ಶರಣಿ = ಭೂಮಂಡಲ).

No comments:

Post a Comment