31 October 2009

ಸವಾರಿ

ಬಣ್ಣದ ಬದುಕಿನ ಬೆನ್ನೇರಿ
ನುಡಿಸುತ ಸಾಗುವೆ ತಂಬೂರಿ
ಜೊತೆಯಲಿ ಊದುವೆ ತುತ್ತೂರಿ
ಓಡುತ ಬಂದನು ಚಿನ್ನಾರಿ

ನಿದ್ದೆಯ ಗುಂಗಲಿ ಸೋಮಾರಿ
ತುಂಬಿತು ದು:ಖವು ಕಣ್ಣೆeರಿ
ಕಲಿಯುವ ಹಂಬಲ ನನ್ನೇರಿ
ಹತ್ತಲು ಹೋಗುವೆ ಅಂಬಾರಿ

ಉಬ್ಬಿತು ಮನವು ರಂಗೇರಿ
ಹರಿಯುತ ಸಾಗಿತು ಕಾವೇರಿ
ಕರಗಿತು ಮೋಡವು ಬಾನೇರಿ
ಕುಣಿಯುತ ನಿಂದಳು ಮಯೂರಿ

ಹೋಗಲು ಆಗದು ಬಂದಾರಿ
ಮಿಕ್ಕಿತು ನನಗೆ ಒಂದಾರಿ
ಕಲಿಕೆಗೆ ಆಗುವೆ ಪೂಜಾರಿ
ಹುಡುಕುತ ನಡೆವನು ಸಂಚಾರಿ

No comments:

Post a Comment