30 October 2009

ಸು-ದೀಪ

ಅಂದದ ಬಾಳಿಗೆ ಆಶಾ ದೀಪ
ನೆಂಟರ ಸಾಲಿಗೆ ನಂದಾ ದೀಪ
ಮಡದಿಯ ಪಾಲಿಗೆ ಬಾಳಾ ದೀಪ
ಕಾಲದ ಗಾಲಿಗೆ ದಾರಿ ದೀಪ

ಸ್ನೇಹದ ಕೂಗಿಗೆ ಪ್ರತಿಧ್ವನಿ ಪ್ರದೀಪ
ಚೆಲುವೆಯ ಮಾತಿಗೆ ಕರಗಿದ ಸುದೀಪ
ಕತ್ತಲ ಕೋಣೆಗೆ ಬೆಳಕಿಟ್ಟ ಸಂದೀಪ
ಒಗಟಿನ ಹಾದಿಗೆ ಒದಗಿದ ಮಂದೀಪ

ಪ್ರೀತಿಯ ಕರೆಗೆ ಸಕ್ಕರೆಯ ನುಡಿ
ಚಿಮ್ಮುವ ನಗೆಗೆ ಹಲ್ಲನು ಬಿಡಿ
ಸಿಹಿಯ ಶಾವಿಗೆ ಮಾಡಲು ರೆಡಿ
ಬೇಗನೆ ಬಾಯಿಗೆ ಸುರಿಯುವೆ ತಡಿ

ಬಾಡದ ಹೂವಿಗೆ ಅಂದದ ಮುಡಿ
ಮಂಜಿನ ಮೋಡಿಗೆ ಬಿಸಿಲಿನ ಅಡಿ
ಚಂದದ ಹಣೆಗೆ ಕುಂಕುಮ ಇಡಿ
ಕೋಗಿಲೆ ಹಾಡಿಗೆ ತಾಳವ ಬಡಿ

1 comment: