ಸಾಕ್ರೆಟಿಸ್ ಕಾಲದ ಅಥೆನ್ಸ್, ರಿನೈಸಾನ್ಸ್ ಕಾಲದ ಫ್ಲೋರೆನ್ಸೆ, ಮತ್ತು ಗುಪ್ತರ ಕಾಲದ ನಳಂದ ನಗರಗಳು ಮಾಹಿತಿ, ಜ್ಞಾನ, ಸಂಪ್ರದಾಯ, ಶಿಕ್ಷಣ ಮತ್ತು ಕೌಶಲ್ಯ ಶ್ರೀಮಂತವಾಗಿದ್ದ ಸಮಾಜಗಳು. ನಾವು ಆ ಕಾಲದ ವೈಭವ, ಹಿರಿಮೆಗಳಿಗೆ ತೃಪ್ತಿಪಟ್ಟರೆ ಸಾಕೆ? ನಮ್ಮ ಮುಂದಿನ ಜನಾಂಗದವರು ಸಂಪ್ರದಾಯ, ಸಂಸ್ಕೃತಿಗಳ ಆಧಾರದಮೇಲೆ ತಮ್ಮ ಶಿಕ್ಷಣವನ್ನು ರೂಪಿಸಿಕೊಳ್ಳುವಂತ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು. ಹಾಗಾದರೆ, ನಾವು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡಬೇಕು ಮತ್ತು ಏನನ್ನು ಕಲಿಸಬೇಕು? ಮೊದಲನೆಯದಾಗಿ, ನಾವು ನಮ್ಮ ಸಮಾಜದ ಅತ್ಯಂತ ಮುಖ್ಯವಾದ ಒಂದು ವಿಷಯ ಅಥವ ಭಾಗವನ್ನು ಗುರುತಿಸಬೇಕು. ನಂತರ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ರೂಪಿಸಲು ಅದರ ಪಾತ್ರವೇನೆಂದು ನಿರ್ಧರಿಸಬೇಕು. ಉದಾ: ಒಬ್ಬ ವ್ಯಕ್ತಿ ಹೇಗೆ ಪೋಷಕನಾಗಿ, ಸನ್ಯಾಸಿಯಾಗಿ, ಕವಿಯಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಾನೋ, ಹಾಗೆ ಸರ್ವರಿಗೂ ಅನುಕೂಲವಾಗುವಂತ ಒಂದು ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು. ಈ ಹಾದಿಯಲ್ಲಿ ಯೋಚಿಸಿದಾಗ, ಒಬ್ಬ ಸದ್ಗುಣಶೀಲ ವ್ಯಕ್ತಿಯಾಗಿ, ಉತ್ತಮ ಜೀವನ ನಡೆಸಲು ಏನೆಲ್ಲಾ ಜ್ಞಾನವನ್ನು ಸಂಪಾದಿಸಬೇಕು ಎಂಬುದು ಅರಿವಾಗುತ್ತದೆ. ಆರಿಸ್ಟಾಟಲ್ ಮತ್ತು ನ್ಯೂಟೋನಿಯನ್ ಕಾಲದ ಭೌತಶಾಸ್ತ್ರಜ್ಞರು, ಭೌತಶಾಸ್ತ್ರವನ್ನು ಅರ್ಥಮಾಡಿಕೊಂಡು ಅನ್ವಯಿಸಿದ ರೀತಿ ಹೇಗೆ ಬೇರೆ ಬೇರೆಯೋ ಹಾಗೆ ಒಬ್ಬ ಯುವಕ ಮತ್ತು ಹಿರಿಯ ವಿದ್ವಾಂಸರ ಅಧ್ಯಯನ ಕೌಶಲ್ಯಗಳು ಬೇರೆ ಬೇರೆಯಾಗಿರುತ್ತದೆ. ಹೀಗೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನಗಳಿಂದ ಪಡೆದ ಜ್ಞಾನ ಮಾನವ ಮತ್ತು ಮಾನವ ಸಮಾಜದ ನಮ್ಮ ಕಲ್ಪನೆಯನ್ನು ಬದಲಿಸಿದೆ. ಅಂತೆಯೇ, ತಿಳಿವಳಿಕೆ ಮತ್ತು ಜ್ಞಾನದ ಮಟ್ಟ ಕಾಲದ ಜೊತೆ ಬದಲಾಗುತ್ತಿರುವುದು ಹೆಚ್ಚಿನ ಮಟ್ಟದಲ್ಲಿ ಅಭಿವ್ಯಕ್ತವಾಗಿದೆ. ಯಾವ ವ್ಯಕ್ತಿ ವಿಷಯ ಜ್ಞಾನವನ್ನು ಚನ್ನಾಗಿ ಅರ್ಥೈಸಿಕೊಳ್ಳುತ್ತಾನೋ, ಅವನು, ಅದನ್ನು ಸ್ವಲ್ಪದಷ್ಟಾದರೂ ಕಾರ್ಯರೂಪಕ್ಕೆ ತರುವಂತ ಸಾಮರ್ಥ್ಯ ಹೊಂದಿರುತ್ತಾನೆ. ಆದ್ದರಿಂದ, ಒಂದು ಪೂರ್ವನಿಯೋಜಿತ ಸಮಾಜವು ಸಂವೇದನಾ ಜ್ಞಾನ, ಸಾಂಕೇತಿಕ ಜ್ಞಾನ ಮತ್ತು ಜಾನಪದ ವ್ಯಾಖ್ಯಾನಗಳ ಸಮ್ಮಿಲನವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಆಧುನಿಕ ವಿದ್ವತ್ಪೂರ್ಣ ಸಮಾಜದಲ್ಲಿ ಅರಿವು ಮತ್ತು ತಿಳುವಳಿಕೆಗಳಿಗೆ ತೊಡಕುಗಳು ಉಂಟಾಗುತ್ತದೆ. ಇದು ನಿರ್ದಿಷ್ಟವಾದ ಕಲ್ಪನೆ, ಪರಿಕಲ್ಪನೆಗಳನ್ನು ಮತ್ತು ಶತಮಾನಗಳಿಂದ ಒಳಗೆ ವಿಕಾಸಗೊಂಡ ಶಿಸ್ತು ಮತ್ತು ಸಮ್ಯಮದ ವಿಧಾನಗಳನ್ನು ಒಳಗೊಂಡಿರುತ್ತದೆ. ಈ ವಿದ್ವತ್ಪೂರ್ಣ ಮತ್ತು ಶಿಸ್ತಿನ ರೂಪಗಳನ್ನು ತಿಳಿಯುವ ಮೊದಲು, ಭಾಗಶಃ ನಮೂನೆಗಳನ್ನು ಸಮನ್ವಯಗೊಳಿಸಬೇಕಾಗುತ್ತದೆ; ಇಲ್ಲದಿದ್ದರೆ, ಶಾಲೆಗಳ ಮತ್ತು ವಿಚಾರಗಳ ನಡುವೆ ಹಾನಿಕರ ಅಸಾಮರಸ್ಯ ಉಂಟಾಗುತ್ತದೆ. ಇದೆಲ್ಲದರ ನಡುವೆ, ಯಾವುದೇ ಸಂಕೀರ್ಣ ಸಮಾಜವು ಕುಶಲ ನಿರ್ವಹಣೆ, ಸಮೃದ್ಧ ಮಾಹಿತಿ, ಮತ್ತು ಆಳವಾದ ತಿಳುವಳಿಕೆಯ ಸಮ್ಮಿಲನವಾಗಿರಬೇಕು. ನಮ್ಮ ಹಿಂದಿನ ಸಮಾಜಗಳು ಬಿಂಬಿತವಾದ ರೂಪವನ್ನು ಗಮನಿಸಿದರೆ, ಆ ಮೌಲ್ಯಾಧಾರಿತ ಸಮಾಜದ ಸಾಮರ್ಥ್ಯಗಳಲ್ಲಿ ಆದ ಅಗಾಧ ಬದಲಾವಣೆಗಳು ಸ್ಪಷ್ಟವಾಗಿ ಕಾಣುತ್ತದೆ. ಒಂದು ಸರಿಯಾದ ಸಮತೋಲನ ಸಾಧಿಸುವುದು ಸವಾಲಿನ ಸಂಗತಿಯೇ; ಆದರೆ ಬಹುತೇಕ ಸಂಘಗಳು ಸಮಾಜದ ಮೌಲ್ಯ ಮತ್ತು ಬೇಡಿಕೆಗಳ ಮಿಶ್ರಣ ಸಾಧಿಸುವ ಬದಲು, ಒಂದರಿಂದ ಇನ್ನೊಂದರೆಡೆಗೆ ಕಾಲಕ್ರಮೇಣ ಪಲಾಯನ ಹೊಂದುತ್ತಿವೆ. ಈ ರೀತಿಯ ಬೆಳವಣಿಗೆ ಸಮಾಜಕ್ಕೆ ಮತ್ತು ಶಿಕ್ಷಣಕ್ಕೆ ಮಾರಕವಾಗುತ್ತಿದೆ. ಇನ್ನೊಂದೆಡೆಯಲ್ಲಿ ಚಿಂತಾಜನಕವಾಗಿರುವುದೇನೆಂದರೆ, ಯುವಕರಿಗೆ ಯಾವ ರೂಪದಲ್ಲಿ ವಿಷಯ ಜ್ಞಾನವನ್ನು ತಲುಪಿಸಬೇಕು ಮತ್ತು ಅದನ್ನು ಅವರಿಗೆ ಹೇಗೆ ತಿಳಿಯಪಡಿಸುವುದೆಂದು. ಇಲ್ಲಿ ವಿವಿಧ ಸಮಾಜಗಳು ಎರಡು ಪರ್ಯಾಯ ಮಾರ್ಗಗಳಿಗೆ ಒತ್ತು ನೀಡಿವೆ. ಮೊದಲನೆಯದು ಅನುಕರಣಶೀಲ ಶಿಕ್ಷಣ; ಇದರಲ್ಲಿ, ಶಿಕ್ಷಕ ತೋರಿಸಿಕೊಟ್ಟಿದ್ದನ್ನು, ವಿದ್ಯಾರ್ಥಿ ಬಲು ನಿಷ್ಠೆಯಿಂದ ಪಾಲಿಸಿ ಅನುಕರಣೆ ಮಾಡುತ್ತಾನೆ. ನಿಖರ ಮಾಹಿತಿ ಅಥವಾ ಮಾದರಿಗಳ ಆಧಾರದ ಮೇಲೆ ಅನುಕರಣೀಯ ವಿಧಾನ ಒಂದಿರುತ್ತದೆ; ಅದರಿಂದೀಚೆಗೆ ಕೊಂಚ ಸರಿದರೂ ಅದನ್ನು ಆಪೆಕ್ಷಿಸಿ ತಿರಸ್ಕರಿಸುತ್ತಾರೆ. ಇಂತಹ ಪದ್ಧತಿಗಳು ಬೆಲೆಕೊಡುವುದು ಕೇವಲ ಅನುಕರಣೆ ಮತ್ತು ಸಾಂಪ್ರದಾಯಿಕ ಪ್ರದರ್ಶನಾ ಮೌಲ್ಯಗಳಿಗೆ ಮಾತ್ರ. ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಪರಿವರ್ತಕ ವಿಧಾನವನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ವಿಧಾನದಲ್ಲಿ, ಬಯಸಿದ ವರ್ತನೆಯನ್ನು ರೂಪಿಸುವುದಕ್ಕಿಂತ, ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಒಬ್ಬ ಮಾದರಿ, ಗುರು, ಸೌಕರ್ಯವ್ಯಕ್ತಿ, ಸ್ನೇಹಿತ, ತತ್ವಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾನೆ. ಕೆಲವು ಸಂದರ್ಭಗಳನ್ನು ಸೃಷ್ಟಿಸುವ ಮೂಲಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ಪರಿಯನ್ನು ತಿಳಿಸುತ್ತಾರೆ. ಹಾಗೆಯೇ ವಿವಿಧ ರೀತಿಯ ಪರೀಕ್ಷೆಗಳನ್ನು ನೀಡಿ, ಅದನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು ನೀಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿ, ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುತ್ತಾರೆ ಮತ್ತು ತಮ್ಮದೇ ಆದ ಸೃಜನಶೀಲ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಅವಕಾಶ ನೀಡುತ್ತಾರೆ. ನಾವು ಮೂಲ ಕೌಶಲ್ಯಗಳಿಗೆ ಒತ್ತು ನೀಡಿ ಕೆಲವು ಕಲೆಗಳಲ್ಲಿ ಪ್ರಭುತ್ವವನ್ನು ಸಾಧಿಸುವ ಅಗತ್ಯವಿದೆ. ಒಂದು ಸೃಜನಶೀಲ ನಿಲುವಿನೆಡೆಗೆ ಯಾರು ಹೆಚ್ಚು ಒಲವು ತೋರಿಸುತ್ತಾರೋ ಅವರು ಶಿಕ್ಷಣವನ್ನು ಒಂದು ಅವಕಾಶವನ್ನಾಗಿ ಪರಿಗಣಿಸಿ ಜ್ಞಾನದ ಆವಿಷ್ಕಾರಕ್ಕೆ ತಮ್ಮ ಹಿಂದಿನ ಅನುಭವಗಳಲ್ಲಿ ಎದುರಾದ ಸಮಸ್ಯೆಗಳಿಗೆ ಹೊಸ ಉಪಾಯಗಳನ್ನು ಹುಡುಕುತ್ತಾ, ಕಲ್ಪನೆ, ಪರಿಕಲ್ಪನೆಗಳನ್ನು ತಮ್ಮ ಸಾಮರ್ಥ್ಯದ ಮಾನದಂಡವಾಗಿ ಉಪಯೋಗಿಸಿ ಸಾಮೂಹಿಕ ಜ್ಞಾನಕ್ಕೆ ಕಾರಣರಾಗುತ್ತಾರೆ. ಇದೆಲ್ಲದರಿಂದ, ನಾವು ಶೈಕ್ಷಣಿಕ ಪರಿಸರಗಳ ಸೃಷ್ಟಿಕರ್ತರಾಗಿ ನಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವಂತವರಾಗಬೇಕು. ಇದನ್ನು ರೂಪಾಂತರಗೊಳಿಸಲು ಹಲವು ನಿಲುವುಗಳು, ಆಯ್ಕೆಗಳು ನಿರ್ಧಾರಗಳ ಅಗತ್ಯವಿದೆ. ಆದರೆ ಇದು ಹೆಚ್ಚು ಕ್ಲಿಷ್ಟವಾದದ್ದೆನಲ್ಲ ಏಕೆಂದರೆ, ಒಂದಿಲ್ಲೊಂದು ಶೈಕ್ಷಣಿಕ ವಿಧಾನಗಳು ಯಾವಾಗಲು ಸಿದ್ಧವಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶೈಕ್ಷಣಿಕ ಪರಿಸರ ಬೆಳದಲ್ಲಿ ನಮ್ಮ ಸಮಾಜವು ಪ್ರಗತಿಯ ಹಾದಿಯಲ್ಲಿ ಮುಂದುವರೆಯುವುದು ಸುಲಭವಾಗುತ್ತದೆ.
ಇಂದಿನ ಶಿಕ್ಷಣದಲ್ಲಿ ಮೌಲ್ಯಗಳನ್ನು ದೂರಕ್ಕೆ ತಳ್ಳಲಾಗಿದೆ. ಶಿಕ್ಷಣದ ಏಕೈಕ ಉದ್ದೇಶ ನೌಕರಿಯನ್ನು ಹಿಡಿಯುವುದಾಗಿದೆ. ಆಲ್ಬರ್ಟ್ Einstein ಒಂದು ಕಡೆ ಹೇಳ್ತಾರೆ "ವಿಜ್ಞಾನ ನನ್ನ ಆತ್ಮತೃಪ್ತಿಗಲ್ಲದೆ ಹಣಗಳಿಸುವ ಹುದ್ದೆಗಾಗಿ, ಹೊಟ್ಟೆ ಹೊರೆಯುದಕ್ಕಾಗಿ ಬಳಸುವುದಕ್ಕೆ ನನಗೆ ದುಃಖವಾಗುತ್ತಿದೆ".
ReplyDeleteಆದರೂ ನಮ್ಮ ಸಮಾಜದ ಆಧಾರ ಸ್ತಂಭಗಳೆನಿಸಿದ ಶಿಕ್ಷಕರು ಮನಸ್ಸು ಮಾಡಿದರೆ ಶಿಕ್ಷಣದ ಜೊತೆ ಜೊತೆಗೆ ಮೌಲ್ಯಗಳನ್ನೂ ಬೆಳೆಸಬಹುದು.
Timely article, nicely written
ReplyDeleteDear Nagaraj,
ReplyDeleteThank you for your quick comment. True as you said, thats the way education is heading. Its a pity but have to create a revolution.
Dear Guru Sir,
ReplyDeleteThank you for your quick response.