24 November 2014

ಪರೋಪಕಾರಿ

ಮೋಡದ ಮೇಲಿನ ಕಾಮನಬಿಲ್ಲನು 
ಭೂಮಿಗೆ ತಂದ ಮೊಗ್ಗಿನ ಎಲೆಯೇ 

ಬಣ್ಣದ ರೇಖೆಯ ನವಿರಾಗಿ ಗೀಚಿ 
ಹರುಷವ ತಂದು ಹಿಗ್ಗುವ ಹೂವೆ  

ಬೀಸುವ ಗಾಳಿಗೆ ಸೋಪಾನ ನೀಡಿ 
ಸುಗಂಧ ಚೆಲ್ಲಲು ನುಗ್ಗುವ ಕರವೇ 

ಮೇಘವ ಕರೆದು ಬಾಗಿಲು ತೆರೆದು 
ವರುಷವ ಹರಿಸಿ ಸುಗ್ಗಿಯ ತರುವೆ  

ಹಣ್ಣನು ತೋರಿ ಆಸೆಯ ಕೋರಿ
ಸವಿಯ ಉಣಿಸೋ ಹಗ್ಗದ ನಡುವೆ 

ನೆರಳನ್ನು ನೀಡಿ ಮುದವನ್ನು ತೋರಿ 
ಮಂಗನ ಭಾರಕ್ಕೆ ಬಗ್ಗುವ ಮರವೇ

ಕೊಂಬೆಯ ಕೆಡವಿ ಕಟ್ಟಿಗೆ ಮಾಡಿ
ಬೆಂಕಿಗೆ ಬೆವರೋ ಅಗ್ಗದ ದರವೇ

ಇದ್ದಷ್ಟು ದಿನ ಉಪಕಾರ ಮಾಡಿ 
ಮುಕ್ತಿಯ ನೆನಸಿ ಬಗ್ಗಿದ  ಜಡವೆ 

3 comments:

  1. No Comment is the Best Comment! I am an alien to Kannada language. But the First one to comment on your blog. I must be rewarded with a Chocolate!

    ReplyDelete
  2. ಇದೇ ಹೆಸರಲ್ಲಿ ನೀನೇ ಇನ್ನೊಂದು ಕವನ ಬರೆದಿದ್ದ ನೆನಪು ನನಗೆ. ಇದು ಚೆನಾಗಿದೆ

    ReplyDelete
  3. ನಿಮ್ಮ ಕವನಗಳು ಮತ್ತು ನೀವು ಬರೆದಿರುವ ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೆಯೇ ಮುಂದುವರಿಸಿ ಕೊಂಡು ಮುನ್ನಡೆಯಿರಿ ಮತ್ತು ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ .

    ReplyDelete