30 July 2014

ಸಾಚಾತಾನದ ಸೋಜಿಗ


ಗುರುಗಳು ತೋರಿದ ದಾರಿಯಲಿ
ಏರುತ ಹೊರಟನು ಶಿಖರವನು
ಕಂಡನು ಆಗಲೇ ಎದುರಿನಲಿ
ಹೂವು-ಮುಳ್ಳಿನ ಹೊದಿಕೆಯನು

ಆರಿಸಿ ಇಡಲು ಹೆಜ್ಜೆಯನು
ನಡಿಗೆಯು ನೀಡಿತು ನಡುಕವನು
ನಿಂತು ನೋಡಲು ಕಳವಳದಿ
ಜುಳು-ಜುಳು ಕೇಳಿತು ಕಾಂಚಣದಿ

ಲಜ್ಜೆಯೇ ಇಲ್ಲದೆ ಕೇಳಿದರು
ಕಟ್ಟಲು ಬೆಲೆಯನು ಕಾಯಕದಿ
ಗೋಚರವಾಯಿತು ಗೋಮುಖವು
ತೂರಿಬಂದನು ಆ ಲಕ್ಷದಿ

ಹಳಸಿ ಹೋಯಿತು ನೈತಿಕವು
ಜಾರುತ ಇಳಿಯಿತು ತಿಳಿವುಗಳು
ಕಳೆದರು ಕಾಲವ ನಿಂದಿಸುತ
ಹೆಣೆದರು ಜಾಲವ ರೂಪಿಸುತ

ಬೇರೆಡೆ ಬಂದರು ಹುಡುಕುತಲಿ
ಸಿಕ್ಕನು ಸಾಚಾ ಸೋಜಿಗದಿ
ರೂಪಿಸಿ ಕೊಟ್ಟರು ಮಂಟಪದಿ
ಬೆಳೆಸುತ ಹೋದನು ಭೋಗದಲಿ


2 comments: