08 July 2011

ಒಬ್ಬಂಟಿಯ ಒಡನಾಟ

ಮನಸಿನ ಮಾತು ಕೇಳೆ ಕೇಳೆ
ನನ್ನ ಚೆಲುವೆ, ಮೌನವಾಗಿ ಏಕೆ ಇರುವೆ
ಮಂಜಿನೊಳಗೆ ನೀ ಅಡಗಿ ಕೂತರೆ ಎಷ್ಟು ಚೆನ್ನ
ಮೋಡಕವಿದು ಕತ್ತಲಾಗಿದೆ ಬೇಗ ಬಾರಾ
ಸಾಗಬೇಕಿದೆ ನಮ್ಮ ಜೋಡಿಯು ಇನ್ನೂ ದೂರ
ನೀರಲ್ಲೂ ಕಾಣ್ತಿರುವೆ, ನಿನ್ನ ಮೊಗವ
ಅಲೆಯೊಂದು ಅಲಗಾಡಿ ಅಪ್ಪಳಿಸೀ
ಕದಡುತ್ತಿದೆ ನಮ್ಮೆಲ್ಲಾ ಕಂಬನಿಯಾ|
ನೀನೆ ಉಸಿರು, ಬಾಳ ಹಸಿರು
ಬೇಕೆಂದಿದೆ ನನ್ನ ಹೃದಯಾ
ಓಲೆ-ಜುಮುಕಿಯ ಬೇಡವಾದರೆ ನೀನೆ ಚಿನ್ನ,
ದುಂಬಿಯಂತೆ ಸುತ್ತುವರಿದೆ ನಾನು ನಿನ್ನ
ಮಡಿಲಲ್ಲಿ ಮಲಗಿಸುವೆ, ಮಗುವಂತೆ ಪೋಷಿಸುವೆ
ಕಣ್ಣಲ್ಲಿ ಕಾಣುತ್ತಿದೆ ಮೊಗ್ಗಿನ ಮಂಟಪ
ಅದರಲ್ಲಿರುವುದೇ ಮುತ್ತಿನ ತೋರಣ
ಬೆಳಕು ಹರಿದು ಬಂದಿದೆ ಭೂಮಿಗೆಲ್ಲಾ
ಹಾರಬಲ್ಲ ಹಕ್ಕಿಯಂತೆ ನಾವೀಗ
ಸೇರಬೇಕು ನಮ್ಮ ಗೂಡನ್ನು ಬಾ ಬೇಗ||
ಮನಸಿನ ಮಾತು ಕೇಳೆ ಕೇಳೆ
ನನ್ನ ಚೆಲುವೆ, ಮೌನವಾಗಿ ಏಕೆ ಇರುವೆ................

8 comments: