22 June 2011

ಕನ್ಯಾಯಣ

ಸ್ನೇಹಿತರೆ, ಇಂದು ನನ್ನ ಆತ್ಮೀಯ ಗೆಳೆಯರಾದ ಚಿ. ರೈ. ರವಿ (ಉಜಿರೆ) ಮತ್ತು ಚಿ. ಸೌ. ಸುಮನ್ (ಉಡುಪಿ) ಇವರ ವಿವಾಹ.  ನಾನು ಉಜಿರೆಯಲ್ಲಿ ಇದ್ದಾಗ ರವಿಯವರು ನನ್ನ ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಕೆಲಸಕಾರ್ಯಗಳಲ್ಲಿ ನೆರವಾಗಿದ್ದರು.  ಒಮ್ಮೆ ಉಜಿರೆಯಲ್ಲಿ ನಾನು ಬೆನ್ನು ನೋವಿನಿಂದ ಆಸ್ಪತ್ರೆಯಲ್ಲಿ ಇದ್ದಾಗ ನನ್ನ ಸಕಲ ಸುಶ್ರೂಷೆ ಮತ್ತು ಆರೈಕೆ ಮಾಡಿದ್ದರು.  ಇಂದು ಅವರ ವಿವಾಹದ ಶುಭ ಸಂದರ್ಭದಲ್ಲಿ ನಾನು ಭಾಗವಹಿಸಲು ಆಗುತ್ತಿಲ್ಲವಲ್ಲ ಎಂದು ಬೇಸರವಿದ್ದರೂ, ಈ ಕೆಳಗಿನ ಕವನವನ್ನು ಅವರಿಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ. 
 ಕಾಡಿಗೆ ಕಪ್ಪನ್ನು ಕಣ್ಣಲ್ಲಿ ಇಟ್ಟು
ಮಿಂಚುವ ಅಂಚನ್ನು ಸವರಿ ಬಿಟ್ಟು
ಅಂದದ ಅರಿಶಿನ ಅರಿಯಲು ಕೊಟ್ಟು 
ಕಂಕಣ ಭಾಗ್ಯವ ಕನ್ಯೆಗೆ ತಂತು

ಶೃಂಗಾರ ರತ್ನವ ಶೋಭಿಸಲೆಂದು 
ಸಿಂಗಾರಿ ಮೊಗವು ಹೊಳೆಯೋ ಬಿಂದು 
ಬೊಂಬೆಯ ಬಾಗಿನ ಬೀಗರಿಗಿಟ್ಟು
ಓಲಗ ವಾದ್ಯವ ನುಡಿಸಿ ಬಿಟ್ರು

ತವರಿನ ತೇರನ್ನು ತೇಲಲು ಬಿಟ್ಟು 
ಹಬ್ಬ, ಹುಣ್ಣಿಮೆಗೆ ಹರಿದು ಬಂದು 
ಕಬ್ಬು, ಕಾಯನ್ನು ಕೈಯಲ್ಲಿ ಇಟ್ಟು 
ಜಂಬು ಸವಾರಿಗೆ ಚಾಲನೆ ಕೊಟ್ರು 

 ಸುಂದರ ಸಂಸಾರ ಸಾಗುತ್ತಲಿತ್ತು 
ಮೊಗ್ಗಿನ ಮಕರಂದ ಹೀರಲು ಬಂತು 
ಮುದ್ದಿನ ಮಾತನ್ನು ಆಲಿಸುತ್ತಿತ್ತು 
ಮನೆಮಂದಿಗೆಲ್ಲಾ ಸಂತಸ ತಂತು.

4 comments:

  1. Hi Santosh, lovely poem, 2nd para dalli bindu aagabeku, bindhu aagide
    tumba chennagide poem

    ReplyDelete
  2. Guru Sir,

    Thanks for the correction and comment. I have now corrected it. Keep reading.

    ReplyDelete