17 June 2011

ಕ್ಯಾಸಿನೋಗಳ ಕಾರುಬಾರು

     ಹರಿಯುವ ಹಣದ ಹೊಳೆಗೆ ಅಣೆಕಟ್ಟು ಕಟ್ಟಲು ಸಾಧ್ಯವೇ? ಮನುಷ್ಯನ ಆಸೆಗೆ ಮಿತಿ ಉಂಟೆ? ಈ ರೀತಿ ಪ್ರಶ್ನೆಗಳನ್ನು ನಿಮ್ಮನ್ನು ಏಕೆ ಕೇಳುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಯೋಚನೆಗೆ ಉತ್ತರ ಈಗ ಕೊಡುತ್ತೇನೆ.  ಮೊನ್ನೆ ಬುಧವಾರ ನಾನು ನನ್ನ ಸ್ನೇಹಿತನ ಜೊತೆಯಲ್ಲಿ ಮ್ಯಾಡಿಸನ್ ನಿಂದ ಮಿಲ್ವಾಕೀಗೆ ಯುಕೆ ವೀಸಾಗೆ ಹಸ್ತ ಮುದ್ರೆ ಕೊಡಲು ಹೋಗಿದ್ದೆವು.  ಮ್ಯಾಡಿಸನ್ ನಿಂದ ಮಿಲ್ವಾಕೀಗೆ ಕಾರಿನಲ್ಲಿ ೧.೩೦ ಗಂಟೆ ಪ್ರಯಾಣ.  ರಸ್ತೆಯ ಎರಡು ಬದಿಗಳಲ್ಲಿ ಕೃಷಿ ಭೂಮಿ, ಹುಲ್ಲಿನ ರಾಶಿ, ಮತ್ತು ರಸ್ತೆಯ ಮಧ್ಯದಲ್ಲಿ ರಸ್ತೆ ರಿಪೇರಿಗಳು ಪ್ರಯಾಣಿಕರಿಗೆ ಟಾಟಾ ಮಾಡುತ್ತಿದ್ದವು.   ಮಿಲ್ವಾಕೀಯಲ್ಲಿನ ಯುಎಸ್ ಹೋಂಲ್ಯಾಂಡ್ ಅಂಡ್ ಸೆಕ್ಯೂರಿಟಿ ಕಟ್ಟಡದೊಳಗೆ ಕಾಲಿಟ್ಟೆವು.  ನಾವು ಅಲ್ಲಿ ಕಾಲಿಟ್ಟ ಘಳಿಗೆ ಚನ್ನಾಗ್ಗಿತ್ತೇನೋ! ಎರಡು ನಿಮಿಷದಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ ಒಳಗೆ ಹೋದೆವು.  ಅಲ್ಲಿ ನಮ್ಮ ಪ್ರತಿ ಬೆರಳಿನ ಮುದ್ರಿಕೆ ಸ್ಕ್ಯಾನ್ ಮಾಡಿ, ನಮ್ಮದೊಂದು ಭಾವಚಿತ್ರ ತೆಗೆದು ನಿಮ್ಮ ಕೆಲಸ ಆಯಿತು, ನೀವಿನ್ನು ಹೋಗಬಹುದು ಎಂದು ಹೇಳಿದರು.  ಕೇವಲ ಹತ್ತು ನಿಮಿಷದ ಕೆಲಸಕ್ಕೆ ನಾವು ೩ ಗಂಟೆಗಳ ಹೋಗಿ ಬರೋ ಪ್ರಯಾಣ ಮಾಡಿದೆವು.  ಈಗ ಅಸಲಿ ವಿಷಯಕ್ಕೆ ಬರೋಣ.  ನಮ್ಮ ಕೆಲಸ ಮುಗಿಸಿ ಹಿಂದಿರುಗುವ ರಸ್ತೆಯಲ್ಲಿ ಒಂದು ದೊಡ್ಡ ಕ್ಯಾಸಿನೋ ಇತ್ತು.  ನಮ್ಮ ಜೊತೆ ಬಂದಿದ್ದ ಒಬ್ಬ ಸ್ನೇಹಿತ ಆ ಕ್ಯಾಸಿನೋದಲ್ಲಿ ಹಲವು ಬಾರಿ ಆಟವಾಡಿ ಸಾಕಷ್ಟು ಹಣ ಕಳೆದುಕೊಂಡಿದ್ದ.  ಆದರು ಅಂದು ಕೇವಲ ಆ ಕ್ಯಾಸಿನೋದ ಒಳಗೆ ಹೋಗಿ ಒಂದೆರಡು ಫೋಟೋ ತೆಗೆದುಬರೋಣ ಎಂದು ಹೇಳಿದ.  ನಾನು ಅಲ್ಲಿಯವರೆಗೂ ಯಾವ ಕ್ಯಸಿನೋಗು ಹೋಗಿರಲಿಲ್ಲ ಅಥವಾ ನೋಡಿರಲಿಲ್ಲ.  ನನಗು ಕುತೂಹಲ ಇತ್ತು.  ಕ್ಯಾಸಿನೋ ಎಂದರೆ ಏನು, ಅದು ಹೇಗಿರುತ್ತದೆ, ಅಲ್ಲಿ ಜನ ಹೇಗೆ ಜೂಜು ಆಡುತ್ತಾರೆ, ಇವೆಲ್ಲ ನೋಡುವ ಕಾತುರದಿಂದ ಸರಿ ಹೋಗೋಣ ಎಂದು ಹೇಳಿದೆ.
 

   
ಅದೊಂದು ಅದ್ಭುತ ಕಟ್ಟಡ! ಆ ಕಟ್ಟಡದ ಒಳಗೆ ಹೋಗಲು ೫ ಮಹಡಿ ಏರಬೇಕು.  ಆ ೫ದು ಮಹಡಿ ಕೇವಲ ವಾಹನ ನಿಲ್ದಾಣಕ್ಕೆ ಮೀಸಲು.  (ಈ ಕ್ಯಾಸಿನೋ ಪ್ರಪಂಚದಲ್ಲೇ ಎರಡನೆ ಅತಿ ದೊಡ್ಡ ಕ್ಯಾಸಿನೋ.  ಅತ್ಯಂತ ದೊಡ್ಡ ಕ್ಯಾಸಿನೋ ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ಇದೆ.  ಅದು ಕ್ಯಸಿನೋಗಳಿಗೆ ಹೆಸರುವಾಸಿ).  ಅಲ್ಲಿ ನಿಂತಿದ್ದ ಕಾರಿನ ರಾಶಿ ನೋಡಿ ಆಶ್ಚರ್ಯವಾಯಿತು. ಒಳಗೆ ಹೋದರೆ ಅಲಲ್ಲಿ ಕಾವಲುಗಾರರು, ನಂತರ ಎಡ ಬಲಗಳಲ್ಲಿ ಹೋಟೆಲ್, ಕಾಫಿ ಡೇಗಳು.  ಒಂದು ಬಲ ಭಾಗದಲ್ಲಿ ಟಿವಿಯಲ್ಲಿ ಓಡುತ್ತಿರುವ ನಾಯಿಗಳು, ಕುದುರೆಗಳ ಮೇಲೆ ಹಣ ಕಟ್ಟಿ ಪಂದ್ಯವಾಡುತ್ತಿದ್ದರು.  ಅಲ್ಲಿಂದ ಮುಂದೆ ಬಂದು ಎಸ್ಕಲೇಟರ್ ನಲ್ಲಿ ಕೆಳಗಿಳಿದು ಹೋಗಿ ನೋಡಿದೆ; ಆ ಜನಸಾಗರ ಮತ್ತು ಭದ್ರತೆಯ ವ್ಯವಸ್ಥೆ, ಅಲ್ಲಿರುವ ವಿವಿಧ ಆಟಗಳು, ಜನರನ್ನು ಆಕರ್ಷಿಸುವ ಬಣ್ಣಗಳು, ಎಲ್ಲೆಡೆ ಕ್ಯಾಮೆರಾಗಳು ಅಬಬ್ಬಾ ಎಂಥವರನ್ನು ಮೈಮರೆಸುವಂತದ್ದು.  ಅಲ್ಲಿ ಕೇವಲ ೨೫ ಸೆಂಟ್ ನಿಂದ ೫೦,೦೦೦ ಡಾಲರ್ ವರೆಗೂ ಹಣವಿಟ್ಟು ಆಟ ಆಡಬಹುದು.  ಕೆಲಸದಲ್ಲಿ ಸಂಪಾದಿಸಿದ ಹಣವನ್ನು, ಪೂರ್ವಿಕರ ಆಸ್ತಿಯನ್ನು, ಸಾಲಪಡೆದದ್ದನ್ನು ಇಷ್ಟು ಸಲೀಸಾಗಿ ನೀರಿನಂತೆ ಸುರಿದು ಜುಜಿನಲ್ಲಿ ಕಳೆಯುತ್ತಾರಲ್ಲ ಎಂದು ತುಂಬಾ ದುಃಖವಾಯಿತು.  ಅಲ್ಲಿ ಇದ್ದ ಜನಸಾಗರವನ್ನು ನೋಡಿ ಇವರಿಗೆ ಮಾಡುವುದಕ್ಕೆ ಬೇರೆ ಕೆಲಸವೇ ಇಲ್ಲವೇ ಅನಿಸುತ್ತದೆ.  ಅಲ್ಲಿ ನೆರದಿದ್ದ ಜನರಲ್ಲಿ ಹೆಚ್ಚು ಮಂದಿ ವಯಸ್ಸಾದವರು.
 
 "ಯಾವುದೋ ದುಡ್ಡು ಎಲ್ಲಮ್ಮನ ಜಾತ್ರೆ" ಗಾದೆಗೆ ಹೇಳಿಮಾಡಿಸಿದ ಉದಾಹರಣೆ.  ಒಂದೇ ದಿನದಲ್ಲಿ ಕೊಟ್ಯಾದೀಶ್ವರನಾಗುವ ಬಯಕೆಯಿಂದ ಜನರು ಅಲ್ಲಿಗೆ ಬಂದು ಹಣ ಸುರಿಯುತ್ತಾರೆ ಆದರೆ ಹೆಚ್ಚಿನವರು ತಂದ ಹಣವನೆಲ್ಲ ಕಳೆದುಕೊಂಡು ಹೋಗುತ್ತಾರೆ.  ಕೆಲವರು ಕೊಂಚ ಲಾಭ ಮಾಡಿದರೆ ಅದೇ ಆಸೆಯಿಂದ ಮಾರನೆದಿನವು ಬರುತ್ತಾರೆ.  ಹೀಗೆ ಒಂದಿಲ್ಲೊಂದು  ರೀತಿಯಲ್ಲಿ ತಮ್ಮ ಸಂಪಾದನೆಯನ್ನು ಅಡವಿಟ್ಟು ಬರಿಯ ಕೈಯಲ್ಲಿ ಮನೆಗೆ ಹಿಂದಿರುಗುತ್ತಾರೆ.  Potawatomi ಎನ್ನುವುದು ಒಂದು ಅಲ್ಪಸಂಖ್ಯಾತರ ಒಂದು ಪಂಗಡ.  ಇಲ್ಲಿ ಆ ರೀತಿಯ ಹಿಂದುಳಿದ ಪಂಗಡದವರಿಗೆ ಮಾತ್ರ ಕ್ಯಸಿನೋಗಳನ್ನು ನಡೆಸಲು ಅಧಿಕಾರವಿರುತ್ತದೆ.  ನನ್ನ ಸ್ನೇಹಿತ ಕೂಡ ಕೇವಲ ಒಳಗೆ ಹೋಗಿ ಫೋಟೋ ತೆಗೆದು ನೋಡಿ ಬರೋಣ ಎಂದವನು ಅಲ್ಲಿ ಒಂದು ಸುತ್ತು ಹಾಕುತ್ತಿದ್ದಂತೆ ೫ ಡಾಲರ್ ಕೊಟ್ಟು ಒಂದು ಆಟಕ್ಕೆಂದು ಕುಳಿತ.  ಮೊದಲನೇ ಆಟದಲ್ಲಿ ಒಂದು ಡಾಲರ್ ಗೆದ್ದ, ಅದನ್ನು ಮತ್ತೊಂದು ಆಟಕ್ಕೆ ಕಟ್ಟಿದ, ಅದರಲ್ಲೂ ಒಂದು ಡಾಲರ್ ಗೆದ್ದ, ಮೂರನೇ ಆಟಕ್ಕೆ ಅದನ್ನು ಕಟ್ಟಿದ; ಅತಿ ಆಸೆ ಗತಿ ಕೇಡು ಎನ್ನುವ ಹಾಗೆ ಕಟ್ಟಿದ್ದು, ಗೆದ್ದದ್ದು ಎಲ್ಲ ಹೋಯಿತು.  ನಂತರ ಸೋತ ಮುಖವನ್ನು ಹೊತ್ತು ಹಿಂತಿರುಗಿ ನಮ್ಮೊಡನೆ ಬಂದ.   ಈ ರೀತಿ ಮೊದಲು ಆಸೆ ತೋರಿಸಿ ನಂತರ ಇರುವುದೆಲ್ಲವನ್ನು ದೋಚುವ ಇಂತಹ ಕ್ಯಸಿನೋಗಳಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವುದು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.  ಇದೆಲ್ಲ ನಮ್ಮ ಜೀವನದಲ್ಲಿ ಒಂದು ರೀತಿ ಪಾಠವಿದ್ದಂತೆ. ಇದನ್ನು ಅರಿತು ಸನ್ಮಾರ್ಗದಲ್ಲಿ ನಡೆಯೋಣ.  

9 comments:

 1. Nice Article..

  Nimmava,
  Raghu.

  ReplyDelete
 2. Gambling..if played for fun its ok..but if u dream of making a fortune out of it..then u r the biggest loser!! the thing that attracts ppl is the "beginners luck"..thats the only reason y ppl waste thier money here! good one maga

  ReplyDelete
 3. Raghu,

  Thank you. Keep visiting.

  ReplyDelete
 4. Sumi,

  You are right! Initial win leads us to huge loss. Thanks for the comments. Keep visiting.

  ReplyDelete
 5. ವಾವ್! ನಿಮ್ಮ ಕ್ಯಾಸಿನೋ ವಿವರಣೆ ಕೇಳಿ ಮೈಯೆಲ್ಲ ನವಿರೇಳಿತು.. ಕ್ಯಾಸಿನೋ ಎಂದರೇನು ಎಂದೇ ಗೊತ್ತಿರಲಿಲ್ಲ! ಈಗ ತಿಳಿದುಕೊಂಡೆ.. ಬರಿ ವಾಹನ ನಿಲುಗಡೆಗೆ ಐದು ಮಹಡಿಗಳೆ? ಅಬ್ಬಬ್ಬಾ!

  ReplyDelete
 6. Pradeep Sir,

  Thank you very much. In fact, I too went with the same intention to know about the Casino.

  ReplyDelete
 7. Hi Santhosh,

  Neevoo ond kai nododallva? Bari cricket aadidre dodda aatagaara aagolla. Adu illi maatra. America dalli nijavada aatagaara andre casino aatagara!! Hats off to your friend. Better luck next time.

  ReplyDelete
 8. Naga,

  Cricket aadure duddu kalkolalla. Casinoge hodre full shave aagutte.

  ReplyDelete
 9. Adroo ond kai nodabahudittu

  ReplyDelete