05 May 2011

ತಾರುಣ್ಯದ ತವಕ

ರಸ್ತೆಯ ಎದುರಲಿ ಕಂಡಳು ಚೈತ್ರ 
ಇದ್ದಳು ಅವಳು ಗೋಪುರ ಗಾತ್ರ 
ದಿಟ್ಟಿಸಿ ನೋಡಲು ಅವಳ ನೇತ್ರ
ಕೊಡಲು ಬಂದಳು ಪ್ರೇಮದಿ ಪತ್ರ 

ಹೂವಿನ ಹಿಂದೆ ಅಲೆಯಲು ಕಷ್ಟ
ಒಲಿದು ಬಂದರೆ ಮುಡಿಯಲು ಇಷ್ಟ 
ಚೆಲ್ಲಿದ ಪರಿಮಳ ಆಯಿತು ನಷ್ಟ 
ಕಾಣುವ ಕಣ್ಣಲಿ ಕಾತುರ ಸ್ಪಷ್ಟ 

ಆಡಲು ಹೋದ ಸ್ನೇಹದಿ ಆಟ  
ತುಂಬಿತು ಕಣ್ಣಲಿ ಅವಳ ನೋಟ 
ಹೋಗದು ತಲೆಗೆ ತರಗತಿ ಪಾಠ 
ಸೇರದು ಇನ್ನು ಮನೆಯ ಊಟ

ಕೆಲಸಕೆ ಹೋಗಲು ಕಟ್ಟಿದ ಟೈ 
ಕಾಲಿಯ ಬಸ್ಸನು ಹತ್ತಲು ಸೈ
ತುಂಬಿದ ಬಂಡಿಗೆ ಹೇಳಲು ರೈ
ಕೊಟ್ಟಳು ಪ್ರೇಯಸಿ ಅವನಿಗೆ ಕೈ

16 comments: