17 April 2011

ವಧು-ವರ

ಸ್ನೇಹಿತರೆ, ನಿಮ್ಮೊಂದಿಗೆ ಒಂದು ಶುಭ ಸಂದೇಶವನ್ನು ಹಂಚಿಕೊಳ್ಳ ಬಯಸುತ್ತೇನೆ. ಬರುವ ಅಕ್ಟೋಬರ್ ೧೭ನೇ ತಾರೀಕಿಗೆ ನನ್ನ ತಂಗಿಯ ವಿವಾಹ ನಿಶ್ಚಯವಾಗಿದೆ.  ಆಕೆಯ ವಾಗ್ಧತ್ತ ವರ (fiance) ನ ಹೆಸರು ರಾಜೀವ ಎಂದು.  ಆತ ಬೆಂಗಳೂರಿನ IBM ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿವಾಹದ ಸಂದರ್ಭದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ತಾಳಿ ಕಟ್ಟಿ ಆದಮೇಲೆ ಗಂಡನ ಬಾಯಲ್ಲಿ ಹೆಂಡತಿಯ ಹೆಸರು ಮತ್ತು ಹೆಂಡತಿಯ ಬಾಯಲ್ಲಿ ಗಂಡನ ಹೆಸರು ಹೇಳಿಸುವ ವಾಡಿಕೆ ಕೆಲವು ಕಡೆ ಬೆಳೆದು ಬಂದಿದೆ.  ಅದರಂತೆ, ಆ ಸಂದರ್ಭಕ್ಕಾಗಿ ನೇರವಾಗಿ ಹೆಸರು ಹೇಳುವ ಬದಲು ಒಂದು ಕವನದ ರೂಪದಲ್ಲಿ ಹೇಳಿದರೆ ಅದು ತೂಕಬದ್ದವಾಗಿರುತ್ತದೆ ಮತ್ತು ಕೇಳುವವರಿಗೂ  ಕೊಂಚ ವಿಶೇಷವಾಗಿರುತ್ತದೆ.  ಆದ್ದರಿಂದ, ಆ ಸಂದರ್ಭಕ್ಕೆ  ನಾನು ಅವರಿಬ್ಬರಿಗಾಗಿ ಒಂದು ಗ್ರಾಮಾಂತರ ಸೊಗಡಿನ ಪುಟ್ಟ ಕವನ ರಚಿಸಿದ್ದೇನೆ.  ಇದು ಅವರ ಹೆಸರು ಮತ್ತು ಗುಣಾಗಣಗಳುಳ್ಳ ನನ್ನ ಕಲ್ಪನೆಯಷ್ಟೇ.    

ವಧುವಿಗೆ 
ಕಮಲದ ಕಣ್ಣೋನೆ, ನೀಲಿಯ ಬಣ್ದೋನೆ
ಹುಣ್ಣಿಮೆ ಚಂದ್ರಾನೆ, ನನ್ನನ್ನ ಬಲ್ಲೌನೆ
ತೋರ್ತ್ತಾನೆ ಅಂದನ, ಬೀರ್ತ್ತಾನೆ ಬಿಂಬಾನ
ಕಾರಲ್ಲಿ ಬರ್ತಾನೆ, ಕರಕೊಂಡು ಹೋಗ್ತಾನೆ
ನನ್ನ ಜೀವದ ರಾಜ, ಅವನೇ ರಾಜೀವ.


ವರನಿಗೆ
ಗುಂಡು ಮೊಗದೌಳೆ, ತುಂಟು ನಗೆಯೌಳೆ
ಮನಸನ್ನ ಕದ್ದೌಳೆ, ಮನೆಯನ್ನ ಬೆಳಗೌಳೆ
ಕೈಯ್ಯನ್ನ ಹಿಡಿದೌಳೆ, ಕೂಸನ್ನ ಹಡಿತಾಳೆ
ಮುತ್ತಿನ ಮಾತನ್ನ, ಇಂಪಾಗಿ ಆಡ್ತಾಳೆ 
ನನ್ನಿಸ್ಟದ ರತಿ ಔಳೇ, ಶ್! ಶ್ರುತಿ 

13 comments:

  1. good le...loved it!!! not just because u chose such beautiful words...i loved it bcz of the gesture of ur's.... This is wat makes LOVE so special... u alwys think hard and different just to make the person you love...HAPPY...that defines ur character.!! People are so busy in achieving their personal dreams that they have no time for others even their own siblings.. but to spend a little time on the person u love and make an effort to keep them happy is what makes us stand out in the crowd... Proud of u...appreciate it!! i alwys like to praise ppl who r not selfish and self centred...

    ReplyDelete
  2. Dear Sumi,

    Thanks a lot. In fact, this is kind of living I learnt through my various journeys and from great people.

    ReplyDelete
  3. Dear Nagaraj,

    Thank you. Keep visiting.

    ReplyDelete
  4. Dear Santhosh,
    good one
    my best wishes to your sisters marriage.
    God Bless Them.

    ReplyDelete
  5. Santhosha really good one, keep writing these kind of poems. these poems take us from imagination world to reality. i liked very much. i can give 10 out of 10.

    ReplyDelete
  6. Its very nice, convey my wishes to ur sister.

    ReplyDelete
  7. Dear Pavi and Prashanth,

    Thank you for your encouraging words. Keep visiting.

    ReplyDelete
  8. Chennagittu sir....ishtra tanka neev bardadralli tumba ishta addaddu iduve. sahodarige nanna abhinandanegalu.

    ReplyDelete
  9. Dear Appu,

    Thank you for the comments. Keep visiting.

    ReplyDelete
  10. ಕವನ ತುಂಬಾ ಚೆನ್ನಾಗಿದೆ ಸಂತೋಷ್.. ಅವರಿಗೆ ಶುಭವಾಗಲಿ.

    I wish them a happy married life.

    ReplyDelete
  11. Dear Mr. Pradeep,

    Thank you for the wishes and comments. Keep visiting.

    ReplyDelete