28 March 2011

ಅವಾಂತರಗಳ ನಡುವೆ ಅಮೇರಿಕ ಪಯಣ

ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಅಮೇರಿಕ ಪಯಣ ಕೊನೆಗೂ ಬಂದೇಬಿಟ್ಟಿತು.  ದಿನಾಂಕ ೨೮-೦೩-೨೦೧೧ ಮಧ್ಯಾನ ೩.೦೦ ಘಂಟೆಗೆ ನನ್ನ ಮನೆಯ ೬ ಮಂದಿ ಮತ್ತು ಏನ್. ಐ. ಟಿ. ಕೆ ಇಂದ ಬಂದಿದ್ದ ನನ್ನ ಇಬ್ಬರು ಆತ್ಮೀಯ ಸ್ನೇಹಿತರೊಡನೆ ಬೆಂಗಳೂರಿನ ದೇವನಹಲ್ಲಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಹೊರೆಟೆವು.  ಬೆಂಗಳೂರಿನ ಬಿರುಸಿನ ಸಂಚಾರದ ನಡುವೆ ನಿಧಾನವಾಗಿ ಸಂಜೆ ೪.೩೦ಕ್ಕೆ ವಿಮಾನ ನಿಲ್ದಾಣವನ್ನು ಸೇರಿದೆವು.  ನಂತರ ಸುಮಾರು ಒಂದು ಘಂಟೆ ಕಾಲ ಅಲ್ಲೇ ಮಾತನಾಡುತ್ತ ನಿಂತಿದ್ದೆವು.  ಸಂಜೆ ೫.೨೫ ಕ್ಕೆ ನಾನು ಎಲ್ಲರಿಗೂ ವಿದಾಯ ಹೇಳಿ ಒಳಗೆ ನಡೆದೆ.  ಅಲ್ಲಿ ಕ್ರಮಭದ್ದವಾಗಿ ಎಲ್ಲಾ ತಪಾಸನೆಗಳನ್ನು ಮುಗಿಸಿ ಗೇಟ್ - ೫ ರ ಬಳಿ ಹೋಗಿ ಕುಳಿತು ಕೆಲವು ಸ್ನೇಹಿತರಿಗೆ ಕರೆ ಮಾಡಿ ನಾನು ಅಮೆರಿಕಾಕ್ಕೆ ಹೊರಡುತ್ತಿರುವ ವಿಚಾರ ತಿಳಿಸಿದೆ.  ಈ ದೂರವಾಣಿ ಕರೆಗಳು ಮುಗಿಸುವ ವೇಳೆಗೆ ಜೆಟ್ ವಿಮಾನದ ಗಗನ ಸಖಿಯರು ಒಳಗೆ ಬರುವಂತೆ ಸೂಚಿಸಿದರು.  ವಿಮಾನ ಆಗಸದಲ್ಲಿ ಮೇಲೇರುತ್ತಿದ್ದಂತೆ ಸುಂದರ ಮೊಗದ ಗಗನ ಸಖಿಯರು ರಾತ್ರಿ ಭೋಜನ ನೀಡಿದರು.  ಆ ಭೋಜನ ಮುಗಿಸುತ್ತಲೇ ನವದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಬಂದೇಬಿಟ್ಟಿತು.  ಅಲ್ಲಿಂದ ಹೊರಬಂದು ಅಮೆರಿಕನ್ ವಿಮಾನದ  ಸಾಲಲ್ಲಿ ನಿಂತು ಬೋರ್ಡಿಂಗ್ ಪಾಸು ಪಡೆದು ಇಮ್ಮಿಗ್ರೇಶನ್ ತಪಾಸನೆಗೆಂದು ಒಳಗೆ ನಡೆದೆ.  ಅಲ್ಲಿದ್ದ ಅಧಿಕಾರಿಯು ನನಗೆ ಕೆಲವು ಪ್ರಶ್ನೆಗಳನ್ನು ಹಾಕಿ ಒಂದು ಫಾರಂ ಭರ್ತಿಮಾಡಲು ಹೇಳಿದರು.  ಆತನಿಗೆ ನಾನು ನನ್ನ ಬೋರ್ಡಿಂಗ್ ಪಾಸು ಮತ್ತು ಪಾಸ್ಪೋರ್ಟ್ ಕೊಟ್ಟಿದ್ದೆ.  ನಾನು ಫಾರಂ ಭರ್ತಿ ಮಾಡುವಷ್ಟರಲ್ಲಿ ಆ ಅಧಿಕಾರಿಯು ನನ್ನ ಬೋರ್ಡಿಂಗ್ ಪಾಸನ್ನು ಕಳೆದುಹಾಕಿದ್ದರು ಮತ್ತು ಆ ತಪ್ಪನ್ನು ನನ್ನ ಮೇಲೆ ಹೊರಿಸಿ ತಾನು ಜಾರಿಕೊಳ್ಳಲು ನೋಡಿದರು.  ಕೊನೆಗೆ ಮತ್ತೊಂದು ಬೋರ್ಡಿಂಗ್ ಪಾಸನ್ನು ಕೇಳಿ ತರಲು ಹೇಳಿದರು.  ಈ ರೀತಿ ಅವಾಂತರ ಆದ ನಂತರ ಮುಂದೆ ನಡೆದು ತಪಾಸನೆಗಳನ್ನು ಮುಗಿಸಿ ವಿಮಾನ ಏರಿಯೇಬಿಟ್ಟೆನು.  ವಿಮಾನ ಮೇಲೇರಿದ ಸ್ವಲ್ಪ ಹೊತ್ತಿನಲ್ಲೇ ಸಸ್ಯಾಹಾರಿ ಊಟ ವಿತರಿಸಿದರು.  ಅದರಲ್ಲಿ ಒಂದು ಸಲಾಡ್ ಮೇಕಪ್ ಎಂಬ ಪೊಟ್ಟಣವಿತ್ತು.  ಅದನ್ನು ನಾನು ಸ್ವಲ್ಪ ಹರಿದು ಹೆಚ್ಚಿದ ತರಕಾರಿಗಳ ಮೇಲೆ ಹಾಕಲು ಒತ್ತಿದೆ.  ಅದು ಸರ್ರನೆ ಎದುರಿನ ಮಹಿಳೆಯು ಕುಳಿತ್ತಿದ್ದ ಸೀಟಿನ ಕೊನೆಗೆ ಹಾರಿತು.  ಅದು ಹಾರಿದ್ದು ಆಕೆಗೆ ತಕ್ಷಣಕ್ಕೆ ಗೊತ್ತಾಗಲಿಲ್ಲ.  ಹಾಗಾಗಿ ನಾನು ಏನೂ ಗೊತ್ತಿಲ್ಲದವನಂತೆ ಬೇರೆ ಪದಾರ್ಥವನ್ನು ತಿನ್ನಲು ಆರಂಭಿಸಿದೆ.  ಕೆಲವು ನಿಮಿಷದ ಬಳಿಕ ಆಕೆಗೆ ಆ ದ್ರವ್ಯದ ತೇವ ಅನುಭವಕ್ಕೆ ಬಂದ ನಂತರ ನನ್ನೆಡೆಗೆ ಒಮ್ಮೆ ನೋಡಿದರು.  ಆದರೆ ನಾನು ಆಕೆ ನನ್ನನ್ನು ಗಮನಿಸಿದ್ದನ್ನು ತಿಳಿದು ನನಗೆ ಏನೂ ತಿಳಿದಿಲ್ಲವಂತೆ ನಟನೆ ಮಾಡಿದೆ.  ನಂತರ ಆಕೆ ಅದನ್ನು ಒಂದು ಕಾಗದದಲ್ಲಿ ಒರೆಸಿ ಬಿಸಾಡಿದರು.  ಸದ್ಯ ಆಕೆಯಿಂದ ಬೈಗುಳ ತಿನ್ನುವುದು ತಪ್ಪಿತು ಎಂದುಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.  ಇದಾದ ಸ್ವಲ್ಪ ಹೊತ್ತಿನ ನಂತರ ಊಟ ಮುಗಿಸಿ ಮಲಗಲು ನನ್ನ ಸೀಟನ್ನು ಹಿಂದಕ್ಕೆ ತಳ್ಳಿದೆ.  ಆಗ ನನ್ನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ವಯಸ್ಸಾದ ವ್ಯಕ್ತಿಯು ತನ್ನ ಊಟದ ಮೇಜಿನ ಮೇಲೆ ಒಂದು ನೀರಿನ ಲೋಟವನ್ನು ಇಟ್ಟಿದ್ದರು.  ಅದು ಅವರ ಮೇಲೆ ಮತ್ತು ಮೇಜಿನ ಕೆಳಗೆ ಚೆಲ್ಲಿತು.  ಆತ ನನ್ನನ್ನು ಕರೆದು ತನ್ನ ನೀರಿನ ಲೋಟ ಚೆಲ್ಲಿದರಬಗ್ಗೆ ಹೇಳಿದರು.  ನಾನು ಆತನ ಬಳಿ ತಿಳಿಯದೆ ಆದ ತಪ್ಪಿಗೆ ಕ್ಷಮೆ ಕೋರಿದೆ.  ಆತ ಅವರ ಹೆಂಡತಿಯ ಬಳಿ "he is a funny guy" ಎಂದು ಹೇಳಿದರು.  ಹೀಗೆ ಅವಾಂತರಗಳ ನಡುವೆ ಕೊನೆಗೂ ಚಿಕಾಗೋಗೆ ಬಂದು ಸೇರಿದೆನು.  ಅಲ್ಲಿಂದ ಅವರ ಕ್ರಮಭದ್ದ ವಿಚಾರಣೆಯನ್ನು ಮುಗಿಸಿ ಮ್ಯಾಡಿಸನ್ ಗೆ ಬಸ್ಸನ್ನು ಏರಿ ಕುಳಿತೆ.  ಅದು ಮೂರುವರೆ ಘಂಟೆಗಳ ಕಾಲ ಚಲಿಸಿ ಮ್ಯಾಡಿಸನ್ ಮೆಮೋರಿಯಲ್ ಯುನಿಯನ್ ಗೆ ಬಂದು ಸೇರಿತು.  ಆಲ್ಲಿ ಒಬ್ಬ ವಿದ್ಯಾರ್ಥಿಯ ಸಹಾಯದಿಂದ ನಾನು ಆಗಾಗೆ ಸಂಪರ್ಕಿಸುತ್ತಿದ್ದ ರೋಹಿತ್ ಎಂಬ ಗೆಳೆಯನಿಗೆ ದೂರವಾಣಿ ಕರೆಮಾಡಿ ನಾನಿದ್ದ ಸ್ತಳಕ್ಕೆ ಬರುವಂತೆ ಸೂಚಿಸಿದೆ.  ಅವನು ಅಲ್ಲಿಗೆ ಬಂದು ಒಂದು ಟಾಕ್ಸಿಯಲ್ಲಿ ಅವನ ಮನೆಗೆ ಕರೆದುಕೊಂಡು ಹೋದ.  ಮನೆಯನ್ನು ಸೇರಿದ ಬಳಿಕ ಸ್ನಾನ ಮಾಡಿ ಮಲಗಿದೆ.          

12 comments:

  1. ha ha ha mestray tumba channagiedey really u ra funny guy he he he
    enna alli yeanu yeanu awantara aguwado kadu nodona

    ReplyDelete
  2. Hi Santosh.. its really funny to read your experience! & great to hear you got exported to US! ha ha ha.. By the way I work as Network engineer for AT&T (American Telephone & Telegraph). We manage networks remotely from Bangalore. I think you will be using many AT&T phones & internet connections over there?

    ReplyDelete
  3. All the best for your stay at states.. have a nice time..

    ReplyDelete
  4. Dear Mahesh,

    Thank you very much.

    ReplyDelete
  5. Dear Rajeev,

    Thank you for the comments. Keep visiting. Lets hope those avantaras will be in good sense only.

    ReplyDelete
  6. Dear Pradeep Sir,

    Thank you for the comments. Yes, indeed most of them use the AT&T service for their mobile phones. Its good that you work for such a good company.

    ReplyDelete
  7. Dear Shivu,

    Thank you and keep visiting.

    ReplyDelete
  8. Innu enenu avantara madikollalikke baaki ideyo? Sadya yawudadroo avantara madikondu bili jirale na kattikondu barade idre saaku.

    Anyways keep in touch.

    ReplyDelete
  9. Dear Nagaraj,

    Don't worry. Haagella aagolla

    ReplyDelete
  10. Santhosh
    wish you all the best for your future work

    "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.

    ReplyDelete
  11. Dear Guru Sir,

    Thank you and wish you the same.

    ReplyDelete