09 March 2011

ಋತುಮಾನ

ಕೆಂಪಾದ ಕೆಂಡದ ಮೇಲೆ
ಕಾವಲಿಯ ಕಾಯಲು ಇಟ್ಟು
ಕೊಬ್ಬರಿಯ ಕಿರಣವ ಕಂಡು 
ಕಾಗದವ ಕೊರೆದು ಬಿಟ್ಟ 

ಮಂಡಕ್ಕಿ ಮೂಟೆಯ ಹೊತ್ತು 
ಮೊಗ್ಗಿನ ಮುತ್ತನು ಕೊಟ್ಟು 
ಮಂದಾರ ಮೊಗವ ತೊಟ್ಟು 
ಮೊಗುವಿಗೆ ಮುದವ ತಂದ 

ಚಿಟಪಟ ಚಿತ್ರವ ಕಂಡು 
ಚಂದನ ಚೂರ್ಣವ ತಿಂದು 
ಚಿಮ್ಮುತ ಚಲಿಸುತ ಮಿಂದು 
ಚಾಚಿದ ಚಾದರ ಹೊದ್ದ 

ಅರಳುವ ಅಂದದ ಬಿಂದು 
ಅಗ್ಗದ ಆರೈಕೆ ಸಿಂಧು
ಅರಗಿನ ಅಂಜಿಕೆ ಇಂದು
ಅಂಬಲಿ ಅಮಲಲಿ ಮಿಂದ  

7 comments:

  1. Again its a very nice poem. The four stanzas indicate four seasons right!!!?

    Continue further..

    ReplyDelete
  2. Nagaraj,

    Thank you. You guessed it right. Its about different seasons.

    ReplyDelete
  3. ಸಂತೋಷ್‍ರವರೇ ಕ್ಷಮಿಸಿ ನನಗೆ ಅರ್ಥವಾಗಲಿಲ್ಲ.. ಒಮ್ಮೆ ನಿಮ್ಮ ಸಾಲುಗಳನ್ನು ವಿವರಿಸುತ್ತೀರ Please?

    ReplyDelete
  4. Santhosh
    as Pradeep said, these lines are really confusing,
    how they could be different seasons?

    ReplyDelete
  5. Dear Guru Sir and Pradeep,

    I will write in detail and explain in to you through an email.

    ReplyDelete
  6. ನಿಮ್ಮ ಸುಂದರ ಕವನ ನನಗೆ ಅರ್ಥವಾಗಿರಲಿಲ್ಲ ಆದರೆ ನಿಮ್ಮ ವಿವರಣೆ ಓದಿದ ನಂತರ ನಿಮ್ಮ ಕವನ ನಿಜವಾಗಿಯೂ ಅದ್ಭುತವಾಗಿದೆ ಎನ್ನಿಸಿತು! ಆ ಸಾಲುಗಳು, ಅದರಲ್ಲಿ ಕಂಡು ಬರುವ ವಿವಿಧ ಕಾಲಗಳಲ್ಲಿನ ಪ್ರಕೃತಿಯ ವರ್ಣನೆ ನಿಜವಾಗಿಯೂ ಅತ್ಯುತ್ತಮವಾಗಿದೆ.. ಪ್ರಕೃತಿಯ ರೂಪಗಳಿಗೆ ಇಂಥ ಹೋಲಿಕೆ ನೋಡಿದ್ದು ಬಹಳ ವಿರಳ.. ಬಹಳ ಸಂತೋಷವಾಯಿತು. ಇಂಥ ಕವನಗಳು ನಿಮ್ಮಿಂದ ಹೀಗೇ ಬರುತಿರಲಿ ಎಂದು ಆಶಿಸುವೆ.. ನಿಮಗೆ ಅನಂತ ವಂದನೆಗಳು.

    ReplyDelete
  7. ಪ್ರದೀಪ್ ಸರ್,
    ವಂದನೆಗಳು

    ReplyDelete