ಕೆಂಪಾದ ಕೆಂಡದ ಮೇಲೆ
ಕಾವಲಿಯ ಕಾಯಲು ಇಟ್ಟು
ಕೊಬ್ಬರಿಯ ಕಿರಣವ ಕಂಡು
ಕಾಗದವ ಕೊರೆದು ಬಿಟ್ಟ
ಮಂಡಕ್ಕಿ ಮೂಟೆಯ ಹೊತ್ತು
ಮೊಗ್ಗಿನ ಮುತ್ತನು ಕೊಟ್ಟು
ಮಂದಾರ ಮೊಗವ ತೊಟ್ಟು
ಮೊಗುವಿಗೆ ಮುದವ ತಂದ
ಚಿಟಪಟ ಚಿತ್ರವ ಕಂಡು
ಚಂದನ ಚೂರ್ಣವ ತಿಂದು
ಚಿಮ್ಮುತ ಚಲಿಸುತ ಮಿಂದು
ಚಾಚಿದ ಚಾದರ ಹೊದ್ದ
ಅರಳುವ ಅಂದದ ಬಿಂದು
ಅಗ್ಗದ ಆರೈಕೆ ಸಿಂಧು
ಅರಗಿನ ಅಂಜಿಕೆ ಇಂದು
ಅಂಬಲಿ ಅಮಲಲಿ ಮಿಂದ
Again its a very nice poem. The four stanzas indicate four seasons right!!!?
ReplyDeleteContinue further..
Nagaraj,
ReplyDeleteThank you. You guessed it right. Its about different seasons.
ಸಂತೋಷ್ರವರೇ ಕ್ಷಮಿಸಿ ನನಗೆ ಅರ್ಥವಾಗಲಿಲ್ಲ.. ಒಮ್ಮೆ ನಿಮ್ಮ ಸಾಲುಗಳನ್ನು ವಿವರಿಸುತ್ತೀರ Please?
ReplyDeleteSanthosh
ReplyDeleteas Pradeep said, these lines are really confusing,
how they could be different seasons?
Dear Guru Sir and Pradeep,
ReplyDeleteI will write in detail and explain in to you through an email.
ನಿಮ್ಮ ಸುಂದರ ಕವನ ನನಗೆ ಅರ್ಥವಾಗಿರಲಿಲ್ಲ ಆದರೆ ನಿಮ್ಮ ವಿವರಣೆ ಓದಿದ ನಂತರ ನಿಮ್ಮ ಕವನ ನಿಜವಾಗಿಯೂ ಅದ್ಭುತವಾಗಿದೆ ಎನ್ನಿಸಿತು! ಆ ಸಾಲುಗಳು, ಅದರಲ್ಲಿ ಕಂಡು ಬರುವ ವಿವಿಧ ಕಾಲಗಳಲ್ಲಿನ ಪ್ರಕೃತಿಯ ವರ್ಣನೆ ನಿಜವಾಗಿಯೂ ಅತ್ಯುತ್ತಮವಾಗಿದೆ.. ಪ್ರಕೃತಿಯ ರೂಪಗಳಿಗೆ ಇಂಥ ಹೋಲಿಕೆ ನೋಡಿದ್ದು ಬಹಳ ವಿರಳ.. ಬಹಳ ಸಂತೋಷವಾಯಿತು. ಇಂಥ ಕವನಗಳು ನಿಮ್ಮಿಂದ ಹೀಗೇ ಬರುತಿರಲಿ ಎಂದು ಆಶಿಸುವೆ.. ನಿಮಗೆ ಅನಂತ ವಂದನೆಗಳು.
ReplyDeleteಪ್ರದೀಪ್ ಸರ್,
ReplyDeleteವಂದನೆಗಳು