02 February 2011

ಸತಿ ಸುಪ್ರಭಾತ

ಅಡುಗೆ ಮನೆಯ ಅಂಗಳದಾಕೆ
ಬಂದಳು ಸರಸರ ಎಬ್ಬಿಸಲೆಂದೇ
ತಾಳಲು ಆಗದೆ ಗೊರಕೆ ನಿದ್ದೆ
ತಿವಿಯಲು ಕುಂಭ ಕರ್ಣನ ಮಂಡೆ

ಮುದುರಿದ ಮೈಯ್ಯ ಮಂಚದ ಮೇಲೆ
ಸರಿಸುತ ಹೊದಿಕೆಯ ನಿಂತಳು ಅಲ್ಲೇ
ಸುಪ್ರಭಾತವ ಹಾಡುತ ನಲ್ಲೆ
ಹುಡುಕುತ ಹೊರಟಳು ಬಾಣಲೆ ಬಿಲ್ಲೆ

ಬೇಸರದಿಂದ ಏಳುತ ಬಂಡ
ಬಚ್ಚಲ ಕಡೆಗೆ ನಡೆಯುತ ಕಂಡ
ಮಡದಿ ಮೊಗವ ತುಂಬಾ ಕೆಂಡ
ಮಾಡಿದ ಅಡುಗೆ ಎಲ್ಲಾ ದಂಡ

ನೆಟ್ಟಗೆ ಮೊರೆಯ ಸೊಟ್ಟಗೆ ಮಾಡಿ
ಪಾತರೆ ಪಡುಗವ ನೆಗ್ಗಿಸಿ ನೋಡಿ
ಮಾತಿನ ಸರಪಳಿ ನೇಯುತ ಹಾಡಿ
ಹೋದರು ಕೊನೆಗೆ ಹೋಟಲಿಗ್ ಓಡಿ 

6 comments:

  1. Aa sathi yaaru anta namagoo swalpa helappa, santhoshappa...

    ReplyDelete
  2. Nag,

    ellara mane young generation sati kate edu.

    ReplyDelete
  3. ಹ್ಹ ಹ್ಹಾ! ತಮಾಷೆಯಾಗಿದೆ.. ಚೆನ್ನಾಗಿದೆ!

    ReplyDelete
  4. Pradeep,

    Thank you. Keep visiting and reading.

    ReplyDelete