14 January 2011

ಪಲ್ಲವಿ-ಅನುಪಲ್ಲವಿ

ಪದಗಳ ವೀಣೆ ನುಡಿದಾಗ
ಪಲ್ಲವಿ ಒಂದು ಮೂಡಿತು
ತವರಿನ ತೇರು ಸೆಳೆದಾಗ
ಕರುಳಿನ ಕೂಗು ಕೇಳಿತು

ಮಧುವಿನ ಸ್ವರವೂ ಮಿಡಿದಾಗ
ಹೂವಿನ ಹೃದಯ ಹಾಡಿತು
ಮೋಡದ ಮಾತು ಮೀಟಿದಾಗ
ಮಳೆಯು ಧರೆಗೆ ಇಳಿಯಿತು

ಮಗುವಿನ ಮನಸು ಕರೆದಾಗ
ಮಮತೆಯ ಮೋಹ ಮೆರೆಯಿತು
ಮರುಳಿನ ಮಮತೆ ಮರೆತಾಗ 
ಸಾಗರ ಬಂದು ಸೇರಿತು

ಒಲವಿನ ಉಡುಗೊರೆ ನೀಡಿದಾಗ
ಪ್ರೀತಿಯ ಕಹಳೆ ಮೊಳಗಿತು
ಬಾಳಿನ ಬಂಡಿ ಬೆಸೆದಾಗ
ಸಾರವು ಎಲ್ಲೆಡೆ ಸುಳಿಯಿತು

4 comments:

  1. Very nice, ಮರುಳಿನ ಮಮತೆ ಮರೆತಾಗ
    ಸಾಗರ ಬಂದು ಸೇರಿತು idara artha nange gottaglilla?

    ReplyDelete