11 January 2011

ಪ್ರಕೃತಿ ಪ್ರಣಯ

ಮಲ್ಲಿಗೆಯ ಮೋಡದಲ್ಲಿ ಮೊಗ್ಗಾದ ಮಳೆಹನಿಯೇ 
ಮುದುಡಿದ ಮನಸ್ಸಿಗೆ ತಂಪೆರೆದ ತಾವರೆ 
ಕಾರ್ಮುಗಿಲ ಕನ್ನಡಿಗೆ ಬೆಳಕಿನ ಬೆಳದಿಂಗಳು 
ಹೆಮ್ಮರದ ಹಾವಿಗೆ ಹೂವಾದ ಹೊಂಬಿಸಿಲು

ಕಾಡ್ಗಿಚ್ಚ ಕೆಂಡಕ್ಕೆ ಕರಗಿದ ಕಣ್ಣಿರು
ಚೈತ್ರದ ಚಿಲುಮೆಗೆ ಬಣ್ಣದ ಓಕುಳಿ 
ಜೇನಿನ ಹೊಳೆಗೆ ಮಧುವಿನ ಮಕರಂದ
ತೆಂಗಿನ ನೀರಿಗೆ ತವರಾದ ತಂಗಾಳಿ

ಬಿದುರಿನ ಬಾಗಿನಕ್ಕೆ ಬೆಂಡಾದ ಬಾಂಧವ್ಯ
ಕುಂಕುಮದ ಕಾಂತಿಗೆ ಮಮತೆಯ ಮಾಧುರ್ಯ  
ಹಬ್ಬದ ಹುಮ್ಮಸ್ಸಿಗೆ ಹೂವಿನ ತೋರಣ
ಸೊಗಸಾದ ಸಂಜೆಗೆ ಸ್ನೇಹದ ಸಂಕೋಲೆ 

ಹವಳದ ಹೊಳಪಿಗೆ ಹೊನ್ನಿನ ಹರುಷ
ಗಂಧದ ಗರಡಿಗೆ ಗಾಜಿನ ಗೋಪುರ
ಹುಲ್ಲಿನ ಹಸಿರಿಗೆ ಹಾಲಿನ ಲೇಪನ
ಬದುಕಿನ ಬಂಡಿಗೆ ಸ್ಪೂರ್ತಿಯ ಸೊಭಗು

4 comments:

  1. Santhosh
    i must say very nice
    one of your best poem i read
    you explained nature in your own way with beauty

    ReplyDelete
  2. Guru Sir,

    Thank you for your encouraging words. Keep visiting.

    ReplyDelete
  3. hi santosh,
    its very nice, keep going

    ReplyDelete