27 October 2010

ಮೊದಲ ಮಿಲನ

ಅಮ್ಮನ ಆಸೆ ಸೆಳೆಯುತ ಭಾಷೆ
ಕರೆದರೆ ಬರುವೆ ನೋಡಲು ಅವಳನ್ನೆ
ಮಿಡಿಯುತ ಮನವು ನಡಗುತ ಕರವು
ಹೆಚ್ಚಲು ಅವನ ಕಾತುರವೆ

ಹೊರಡಿತು ಬಂಡಿ ಜುಮುಜುಮು ಥಂಡಿ
ಎದೆಯಲಿ ಪುಳಕ ಮೈಯೆಲ್ಲಾ ಜಳಕ
ನಿಂತಿತು ಮನೆಯ ಮುಂದೇನೆ
ಕರೆದರೆ ಬಾರಾ ಸರಿಯಲು ದೂರ
ನಡೆಯಲಿ ಮುಂದಿನ ರಾಯಭಾರ

ಹೋಗಲು ಒಳಗೆ ಬೆಳೆಯಲು ಸಲುಗೆ
ಮಾಡಲು ಪರಿಚಯ ಸುಮ್ಸುಮ್ನೆ 
ಕಂಡಿತು ಛಾಯೆ ಆದಳು ಮಾಯೆ
ಎಲ್ಲವೂ ಎದುರಿನ ಕನ್ನಡಿಯಲ್ಲೇ

ಕರೆಸಲು ಮುಂದೆ ಬಯಸಲು ಅಂದೇ
ನೋಡಲು ಅವಳ ಮೊಗವನ್ನೇ
ಮೂಡಿತು ಮಾತು ಕಳೆಯಿತು ಹೊತ್ತು
ಮೆಚ್ಚಲು ಅವಳ ಗುಣವನ್ನೇ

ಹೊರಟನು ಮನೆಗೆ ಹೋದಳು ಒಳಗೆ
ಟಾ ಟಾ ಮಾಡಲು ಬಾರದೆ
ದಾರಿಯಲ್ಲೋಪ್ಪಿಗೆ ನೀಡಿದ ತೆಪ್ಪಗೆ
ಮೊಳಗಿಸೋ ಮಂಗಳ ವಾದ್ಯಕ್ಕೆ

14 comments:

  1. Truly a simple but effective manifestation of pure and virgin ideas. All the poems are worth reading and enjoying. All poem could be projected in the form of a collection of great poems, in due course of time. Let all youngsters emulate this passion. Best wishes to the poet, author, scientist.
    Upendra

    ReplyDelete
  2. Thank you very much. Your encouragement will be a great support to write different articles.

    ReplyDelete
  3. Nice one.

    Thumba chennagi express madidira nimma bhavanegalanna!!!!!!!

    ReplyDelete
  4. Kothi congrates kano dumma. Yaravalu?

    ReplyDelete
  5. Nagaraj,

    Thank you for your comment and appreciation. Keep visiting.

    ReplyDelete
  6. Pavi,

    Adu secret. Eega heloke agalla

    ReplyDelete
  7. ಸಂತೋಷ್ ಚನ್ನಾಗಿದೆ...ಸಾಗರದಾಚೆಯ ಇಂಚರವೂ ಇದೇ ನುಲಿಯುತಿದೆ..ಅಮ್ಮನ ನೆನಪು ಬೇರೊಂದು ರೂಪದಲ್ಲಿ...

    ReplyDelete
  8. Jalanayana,

    Thank you and keep visiting

    ReplyDelete
  9. ಚಂದದ ಕವನ.. ಧನ್ಯವಾದಗಳು

    ReplyDelete
  10. Dear Mr.Pradeep,

    Thank you. Keep visiting

    ReplyDelete