14 August 2010

ಸ್ವಾತಂತ್ರ್ಯ

ಅಂದಿನ ಆ ದಿನವು
ಕಗ್ಗತ್ತಲ ನಡುವೆ ಇತ್ತು
ಹೋರಾಟದ ಜ್ವಾಲಾಮುಖಿಯು
ಚೆಲ್ಲಿತು ಬಾನಿಗೆ ಬೆಳಕು
ಮಿಂಚಿನ ಬಾವುಟ ನಲಿದು

ಮುಕ್ತವಾಯಿತು ದೇಶ
ಹರಡಿತು ಸಂಭ್ರಮ ಎಲ್ಲೆಡೆ
ಏರಿತು ನೆತ್ತಿಯು ಅದರೆಡೆ
ಧುಮುಕಿತು ಪುಷ್ಪದ ಮಾಲೆ
ಮೊಳಗಿತು ರಾಷ್ಟ್ರೀಯ ಗೀತೆ

ರಾರಾಜಿಸಿತು ರಾಜಕಾರಣ
ಒಂದಾಗಿಸಿತು ಒಡನಾಟ
ರೂಪುಗೊಂಡಿತು ಹೊಸ ನಕ್ಷೆ
ಭೋರ್ಗರೆಯಿತು ಭಾರತದ ಕಕ್ಷೆ
ಚಿಮ್ಮಿತು ಗಂಗೆಯ ನಾಲೆ

ವಿಧ್ಯೆ, ವಿವೇಕ, ವಿಕಾಸವಂತರು
ಕೂಡಿ ಕಟ್ಟಿದ ಭವ್ಯ ಮಂಟಪ
ನಿಲ್ಲಬೇಕು ಬೇರ ಊರಿ
ಕಾಯಬೇಕು ಕವಚದಂತೆ
ಬೆಳೆಸಬೇಕು ಶಿಖರದೆಡೆಗೆ

3 comments: