12 July 2010

ಇಬ್ಬನಿ ಕರಗಿದಾಗ

ಮಿಂಚಿನ ಹೊಳಪೂ, ಹಸಿರ ಮೇಲೆ
ಅಂಚಿನ ಸಂಚೂ, ಜಾರಿಸೋ ಹಾಗೆ
ಕಂಡು ಬಂದಿದೆ ಮೋಹಕ ನೃತ್ಯ
ಮರೆತ ಹಾಗಿದೆ ಲೋಕದ ಸತ್ಯ

ಕಣ್ಣಿನ ಅಂಚೂ, ಕರಗಿಸೋ ಬೆಳಕೂ
ತಂದಿತು ತಂಪೂ, ಭೂಮಿಗೆ ಇಂದೂ
ಮೊದಲು ನೀಡಿತು ಮಾತೆಗೆ ಮುತ್ತು
ಕರಗಿ ಹೋಯಿತು ಕೆಂಡದ ಕೆಂಪೂ

ಮೋಹದ ನಗೆಯೂ, ಬೀರಿತು ಮನವೂ
ಸೇರಿತು ಮಡಿಲೂ, ಬಯಸಲು ಒಲವೂ
ಹಿಡಿದ ಕೈಯ್ಯನು ಬಿಡೆನು ಎಂದೂ
ಗೆಲುವು ಕಂಡಿತು ಬಾಡಿದ ಬುಡವೂ  

ಚಿಮ್ಮಿತು ಚೆಲುವೂ, ಹೊಮ್ಮಿತು ನೆರಳೂ,
ಮೂಡಿತು ಬೆಳಕೂ, ಎಲ್ಲೆಡೆ ಭಾನೂ
ಹೆಜ್ಜೆ ಹಾಕಿದೆ ಹೂವಿನ ಹೊನಲೂ
ತೃಪ್ತಿ ತಂದಿದೆ ತನ್ನಯ ಸೂರೂ

10 comments:

  1. Nice!! Chenagide, elloo koratheyagilla, just beautiful like mother nature.

    ReplyDelete
  2. Nange thumba ista aythu, ninna kalpane thumba chennagide. bt i need some clarifications. i will discuss with you.

    ReplyDelete
  3. ಬಹಳ ಚೆನ್ನಾಗಿದೆ.

    ReplyDelete
  4. Nagaraj,

    Thank you for your comments. Your previous suggestions have helped me to improvise.

    ReplyDelete
  5. nice lines..keep writing.
    Raaghu.

    ReplyDelete