03 July 2010

ಮನೋವ್ಯಾಧಿ

ಸ್ನೇಹಿತರೆ, ಕಳೆದ ಎರಡು ತಿಂಗಳು ಈ ಬ್ಲಾಗಿಗೆ ಬರಲು ಸಾಧ್ಯವಾಗಿರಲಿಲ್ಲ.  ಇದಕ್ಕೆ ಕ್ಷಮೆಯಿರಲಿ.  ಇತ್ತೀಚಿನ ದಿನಗಳಲ್ಲಿ ಮನೋರೋಗದಿಂದ ಬಳಲುವ ಜನ ಅಲ್ಲಲ್ಲಿ ಕಾಣುತ್ತಾರೆ.  ಅದು ಬೇರೆ ಬೇರೆ ಕಾರಣದಿಂದ ಇರಬಹುದು.  ಆದರೆ ಒಮ್ಮೆ ಅದು ನಮ್ಮನ್ನು ಆವರಿಸಿದರೆ ಯಾವರೀತಿ ತೊಂದರೆಗಳು ಉಂಟಾಗುತ್ತದೆ ಎಂಬುದನ್ನು ಈ ಕೆಳಗಿನ ಕವನದ ಮುಖಾಂತರ ಚಿತ್ರಿಸಿದ್ದೇನೆ.  ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಬೇಕಾಗಿ ನನ್ನ ವಿನಂತಿ .


ತಂದಿತು ನೆಮ್ಮದಿ ನಿದಿರೆಯಲ್ಲಿ
ಕಂಡಿತು ಕನಸು ಭಾವನೆಯಲ್ಲಿ
ಬಿಡಿಸಿತು ಚಿತ್ರ ರೂಪದಲ್ಲಿ
ಮೂಡಿತು ಅಚ್ಚು  ಮನಸಿನಲ್ಲಿ

ಬೆಳೆಯಿತು ಚಿಗುರು ಬೆಟ್ಟದಂತೆ
ಹರಡಿತು ಎಲ್ಲೆಡೆ ರೋಮದಂತೆ
ಕಾಡಿತು ದಿನವು ಬೆಂಬಿಡದಂತೆ
ಕೊರೆಯಿತು ಬಾವಿಯ ಆಳದಂತೆ

ನುಸುಳಿತು ಕಾರ್ಯ ವೈಖರಿಯಲ್ಲಿ
ಆಗದು ಯಾವುದು ಕೆಲಸವಿಲ್ಲಿ
ತನ್ನನು ತಾನು ಕಾಣದಿಲ್ಲಿ
ಉರುಳಿತು ಸಮಯ ನಿಶ್ಶಬ್ಧದಲ್ಲಿ

ಗುರುತಿನ ಶಕ್ತಿ ಕಾಣದಂತೆ
ಊಟ-ತಿಂಡಿ ಬೇಡದಂತೆ
ಮನಸಿನ ಭಾರ ಹೆಚ್ಚಿದಂತೆ 
ಜೀವನ ಒಂದು ನಶ್ವರದಂತೆ.

8 comments:

  1. Nice 1..honestly speaking...ur thoughts are nice but the poems dosen't convey them with the same power.. Its high time u shud change ur way of writing!! al poems sound the same , only words being different!! Bannada tagadina tuttri,
    kaasiga kondanu kasthuri!! EE thara anstide odthidre....No offence ..this is what i felt.u need to grow up!! Think!

    ReplyDelete
  2. ಯಾರ್ ಆ ಹುಡುಗಿ ಹೇಳುವೆಯ ಗೆಳೆಯ

    ReplyDelete
  3. Ganesha,

    Edu hudugiya vyaadhi alla, janasaamaanyara vyaadhi

    ReplyDelete
  4. Sumanth,

    Thank you for your comments. I shall definitely try to improvise upon these aspects and inculcate in my future articles.

    ReplyDelete