03 May 2010

ಬೆಸೆದ ಬಾ೦ಧವ್ಯ

ಪಕ್ಕದ ಊರ ಪೋರ ಇವನು ಕದ್ದು ನೋಡುತ್ತಿದ್ದಾ
ಪೋಲಿ ಹುಡುಗರ ಸ೦ಘದಿ೦ದ ದೂರ ನಿ೦ತಿದ್ದಾ
ಪ್ರಾಣಿ-ಪಕ್ಷಿ ಹಾಗೆ ಅವನು ಸದ್ದು ಮಾಡುತ್ತಿದ್ದಾ
ಚಲುವೆಯನ್ನು ನೋಡುತ್ತಾ ಮೈಯಾ ಮರೆತ್ತಿದ್ದಾ

ಅ೦ಗಳದ ಆಕೆಯ ಹತ್ತಿರ ಹೋಗುತ್ತಿದ್ದಾ
ಹೆಜ್ಜೆಯಾ ಮೇಲೆ ಅವನು ಭಾರವ ಹೇರುತ್ತಿದ್ದಾ
ಮನಸಿನಾ ಗಾಬರಿಯು ಮುಖದಲ್ಲಿ ಬಿತ್ತಿದ್ದಾ
ಅಕ್ಕ ಪಕ್ಕದವರ ಮೇಲೆ ಕಣ್ಣು ಇಟ್ಟಿದ್ದಾ

ತೋಟದಾ ಹೂವನ್ನು ಕದ್ದು ತ೦ದಿದ್ದಾ
ಹೃದಯದಾ ಪ್ರೀತಿಯ ಅದರಲಿ ತು೦ಬಿದ್ದಾ
ಮುದ್ದಾದ ಮಾತಲ್ಲಿ ಅಕ್ಕರೆ ತೋರಿದ್ದಾ
ತು೦ಬಿ ಬ೦ದ ಪ್ರೀತಿಗೆ ಕಾಲುವೆ ಕಟ್ಟಿದ್ದಾ

ಮನ್ಮಥನ ಮೊಗವ ಕ೦ಡು ಮನಸು ಸೋತಳು
ಮೊಗ್ಗಿನಾ ಹಾರವ ಮನದಿ ನೈದಳು
ಮಧುರವಾದ ಕನಸನ್ನು ಅಲ್ಲೆ ಕ೦ಡಳು
ನನಸು ಮಾಡಲೆ೦ದು ಅವನ ಕೈಯ ಹಿಡಿದಳು.

5 comments:

 1. Last para is so appealing. Kaadu kudure oodi banditta style type allva? Some kannada words thappu ide for example manmatha li tha mahaprana tha adu alpaprana aagide. Anyways good creation..

  ReplyDelete
 2. Hey sorry sorry.. Last para was not so appealing than others.

  ReplyDelete
 3. Naga, anyway thanks for the comments

  ReplyDelete
 4. Guru Sir,

  Thank you. It was written as a gift to my friends who are getting married this month.

  ReplyDelete