03 April 2010

ಹಸಿರು-ಉಸಿರು

ಹಸಿರು ಎಲೆಗಳ ಮರಗಳೇ
ತಂಪು ನೀಡುವ ತಂಗಾಳಿಯೇ 
ಈ ಭೂತಾಯಿಗೆ ನೀ ತಂಪೆರೆವೆ
ಹೂವಿನ ಹಾಸಿಗೆ ನಿನ್ನದೇನೆ||

ಮಕ್ಕಳಿಗೆ ಉಯ್ಯಾಲೆಯೇ
ಹೆಜ್ಜೇನಿಗೆ ಮಂದಾರವೇ
ನಮ್ಮಯ ಉಸಿರಿಗೆ ಮೂಲವೆ ನೀ
ಹಣ್ಣು ಕಾಯಿಯ ಭಂಡಾರವೇ||


ಸುಂದರ ಸೊಬಗಿನ ಸೋಜಿಗವೇ
ವನ್ಯ ಮೃಗಕೆ ಆಧಾರವೇ
ಹಾರೊ ಹಕ್ಕಿಗೆ ಆಶ್ರಯ ನೀ 
ವಾನರ ಸೈನ್ಯಕ್ಕೆ ವಾಸ್ತವ್ಯವೇ ||


ಕಾಲ ಚಕ್ರಕ್ಕೆ ಕನ್ನಡಿಯೇ
ಕಂಬನಿ ತೋರಿ ಕೈ ನೀಡುವೆ
ನಮ್ಮಯ ಬಾಳಿಗೆ ಸ್ಪೂರ್ತಿಯೇ 
ನಿನ್ನಯ ಸೇವೆಗೆ ವಂದನೆಯೇ ||

3 comments:

  1. ಉಯ್ಯಲೆಯೇ thappu.. adu uyyaaleye aagbeku. kavana chennagide, we humans are destroying our motherland. If something goes wrong with the nature we blame nature again. One should think of this.

    Save, preserve nature to live happilly

    ReplyDelete
  2. Thanks nagaraj, i have corrected the spelling mistake.

    ReplyDelete