27 March 2010

ಮನೋಲ್ಲಾಸ

ಹರಿಣಿಯೇ, ಓ ತರುಣಿಯೇ
ನಿನ್ನ ಮೊಗವು ನಾಚಿ ನುಡಿದಿದೆ
ಆ ಕಣ್ಣ ನೋಟ, ಅದು ಮಿಂಚಿನಾಟ
ನನ್ನ ಮನದ ಒಳಗೆ ಸಿಲುಕಿದೆ||

ನಿನ್ನ ಮುದ್ದು ಮುಖವು
ಆ ತುಂಟ ನಗೆಯು
ಸೆಳೆಸೆಳೆದು ಸುಳಿಯಲಿ ಒಯ್ಯ್ದಿದೆ
ಕೆಂಪು ಕೆನ್ನೆಯು, ತೊಂಡೆ ತುಟಿಯು 
ಆಡೋ ಮಾತೆಲ್ಲ ಮುತ್ತದು||

ಆ ಬಿಂಕವು, ಬಿಗುಮಾನವು
ನನ್ನ ನೋಟವ ಬಂದು ನಾಟಿದೆ
ಬೆಕ್ಕು ನಡಿಗೆಯು, ಬಳುಕೊ ಭುಜದಿ 
ಕೈ ನೀಡಿ ಓಲಯಿಸಿದೆ||

ನಿನ್ನ ಮನದ ತವಕ
ಜೊತೆ ಭಯದ ಪುಳಕ
ಅದನ್ನರಿಯೋ ಹೃದಯ ಮಿಡಿದಿದೆ
ಸ್ಮಿತ ವದನ ಬೀರಿದೊಡನೆ
ಮುಗ್ಧ ಮನಸನು ಸೇರಿದೆ||

4 comments:

  1. ninna ella kavanagalali idu nanage thumba ista aythu santhosha, but ninnanu olaisi, ninna manassinali silikida kannugalu yaradendu heluveya?

    ReplyDelete
  2. O..Taruna mahashaya ....chennagide.
    A tunti begane sigali...olleyadagali.

    ReplyDelete
  3. Pavi, adu ennu nanage tilidilla. adu tilida nantara ninage tilisuve.

    ReplyDelete
  4. ಸಂತೋಷ್
    ನಿಮ್ಮ ಕವನ ತುಂಬಾ ಚೆನ್ನಾಗಿದೆ
    ತರುಣಿಯ ಬಗೆಗಿನ ನಿಮ್ಮ ಮಾತುಗಳು
    ರಮಣೀಯ ವಾಗಿವೆ
    ಮುಂದುವರೆಯಲಿ

    ReplyDelete