24 March 2010

ಬಿಸಿಲು ಕುದುರೆ

ಸಾಗುವೆ ದೂರಾ ದೂರ
ಹತ್ತಿರ ಬೇಗ ಬಾರಾ
ನೋವನು ನುಂಗುವೆ ತೀರ
ಕಲಿಯುತ ಮೇಲಕೆ ಏರ

ಬಿಡು ನೀ ನಿನ್ನಯ ಗೂಡ
ನಗುತಾ ಜೊತೆಯಲಿ ಆಡ
ಮನಸಿಗೆ ಬಾಣವ ಹೂಡ
ರೋಷ ದ್ವೇಷವ ಬೇಡ

ಪ್ರೀತಿ ಮಮತೆಯ ತೋರ
ಶಾಂತಿ ಮಂತ್ರವ ಹಾಡ
ಗುರಿಯ ಮುಟ್ಟಲು ನೋಡ
ಬೇಗನೆ ಹೋಗಿ ಸೇರ

ಆಗು ನೆರಳಿನ ಮರ
ತಂಪು ಇಂಪಿನ ಸ್ವರ
ಕಪ್ಪು ಬಿಳುಪಿನ ತರ
ಹಾಕು ಗೆಲುವಿನ ಗರ

4 comments:

  1. ಬಹಳ ಸುಂದರವಾದ ಸಾಲುಗಳು.

    ReplyDelete
  2. Rhyming words...musical too...
    Chennagi moodide chaupadi...

    ReplyDelete
  3. Good!!!!
    But don't go behind rhyming words only.

    Good use of words, Keep it up

    ReplyDelete
  4. kelavu "sudden jumps" bitre concept ishta aytu.
    Shubhavagali.

    ReplyDelete