15 February 2010

ಕಾರ್ಮೋಡ

ಕಲ್ಮಶದಿ ಮನವಿರಲು
ಕಲಕುವುದು ಆಸೆಗಳ
ಕೆಣಕುತಿಹ ದುರ್ಮಾರ್ಗಕೆ
ಕಾತುರವ ಉಲ್ಬಣಿಸಿ

ತೋರುತಿಹ ಕೆಡ್ದವನು
ಬೀಳಿಸಲು ಬಯಸಿ
ಜಾರಿದರೆ ಮನಃ ಸೋತು
ಬೇಡುವೆಯ ಆಹುತಿ

ಏರುತಿಹ ತಳಮಳವು
ಬೆವರುತಿಹ ಮೈಮನವು
ಸೆಳೆಯುತಿರಲು ಬಗೆಬಗೆ ಬಯಕೆ
ಕಾಡುತಿರಲು ತಪ್ಪು ಒಪ್ಪಿನ ಎಣಿಕೆ

ಮಾಡುತಿಹ ನಿಶ್ಚಯದಿ
ಮನಸನ್ನು ಒಲಿಸಿ
ನೀಡುತಿಹ ಜಯವನು
ಬುದ್ದಿಗೆ ನಮಿಸಿ.

2 comments: