09 February 2010

Some-ಶೋಧನೆ

ಸ್ನೇಹಿತರೆ, ಬಹುದಿನಗಳಿಂದ ಸಂಶೋಧನೆ ಕುರಿತು ಒಂದು ಕವನ ಬರೆಯಬೇಕೆಂದು ಯೋಚಿಸುತ್ತಿದ್ದೆ, ಆದರೆ ಸರಿಯಾದ ಪದ, ಜೋಡಣೆ, ಮತ್ತು ಸಂದರ್ಭ ಸಿಕ್ಕಿರಲಿಲ್ಲ.  ನಿನ್ನೆ ನನ್ನ ಸಹಪಾಠಿ (colleague) ಯ Ph.D Defence ಇತ್ತು.  ಆ ಸಂದರ್ಭದಲ್ಲಿ ಸೆಮಿನಾರ್ ಹಾಲ್ ನಲ್ಲಿ ಕೂತು ಅದನ್ನು ವೀಕ್ಷಿಸುತ್ತಿದ್ದಾಗ ತಟ್ಟನೆ ಈ ಕೆಳಗಿನ ಕವನದ ಸಾಲುಗಳು ಹೊಳೆದವು. ಅದನ್ನು ಈಗ ನನ್ನ ಎಲ್ಲಾ ಸಂಶೋಧನಾ ಸ್ನೇಹಿತರಿಗೆ ಅರ್ಪಿಸುತ್ತಿದ್ದೇನೆ.

ತಾಳಿದೆ ಜನುಮ ಬ್ರಹ್ಮಾಂಡದಲ್ಲಿ
ಹುಡುಕುತ ಹೊರಟೆ ಮೂಲವೆಲ್ಲಿ
ಕಂಡಿತು ಮೊದಲು ಕಾಠಿಣ್ಯದಲ್ಲಿ
ಅರಿಯುತ  ಬಂದೆ ಸುಲಭದಲ್ಲಿ

ಕಂಡೆನು ಕನಸು ಉತ್ಸಾಹದಲ್ಲಿ
ಮಾಡಲು ನನಸು ಪ್ರಯತ್ನದಲ್ಲಿ
ಮೊಳಗಿತು ಚಿಂತೆ ಮಹದಾಸೆಯಲ್ಲಿ
ಹೆಚ್ಚಿತು ವತ್ತಡ ಕಾರ್ಯದಲ್ಲಿ

ನಡೆಯುತ ಬಂದೆನು ಆ ಹಾದಿಯಲ್ಲಿ
ಸವಿಯುತ ಫಲವ ಕಲ್ಲು-ಮುಳ್ಳಲಿ
ಮೂಡಿತು ಒಂದು ಹಂತದಲ್ಲಿ
ಆಗದು ತೊಂದರೆ ಮುಂದೆಯಿಲ್ಲಿ

ಹೊಮ್ಮಿತು ಹರುಷ ಪತ್ರಿಕೆಯಲ್ಲಿ
ಕಾಣುವ ಕಾತುರ ಅಂತ್ಯವಿಲ್ಲಿ
ನೀಡಲು ರೂಪ ಗ್ರಂತದಲ್ಲಿ
ಪಡೆದೆನು ಬಡ್ತಿ ವಿದ್ಯೆಯಲ್ಲಿ.

3 comments: