14 January 2010

ಬಣ್ಣದ ಭಂಡಾರ

ಸ್ನೇಹಿತರೆ, ಇದು ನನ್ನ 25 ನೆ ಲೇಖನ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರಋಣಿ.  ಮುಂದೆಯೂ ಇದು ಹೀಗೆ ಮುಂದುವರಿಯಲಿ ಎಂದು ಬಯಸುತ್ತೇನೆ.

ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಇರುವ ನಮ್ಮ ಮುದ್ರಣಾಲಯಕ್ಕೆ ಈ ವರ್ಷ 2010 ಸುವರ್ಣ ಮಹೋತ್ಸವದ ಸಂಭ್ರಮ ಮತ್ತು ಸಡಗರ. ಇದರ ನಿಮಿತ್ತ, ಅದರ ಏಳಿಗೆಗೆ ದುಡಿದ ಎಲ್ಲರಿಗೂ ಈ ಕೆಳಗಿನ ಪುಟ್ಟ ಕವನವನ್ನು ಅರ್ಪಿಸುತ್ತಿದ್ದೇನೆ.

ಬಿಳೀಯ ಹಾಳೆಯ ಭಂಡಾರ
ನೀಡಲು ಅದಕೆ ಚಿತ್ತಾರ
ಯೋಚನೆ ಮಾಡಲು ಹುನ್ನಾರ
ಹೊಳೆಯಿತು ಥಟ್ಟನೆ ಪರಿಹಾರ

ಕೊಟ್ಟರು ಅದಕೆ ಚೌಕಟ್ಟು
ತೆಗೆದರು ಅದರ ಬುಡಕಟ್ಟು
ತಟ್ಟಿದರ್ ಅದರ ಮೈಕಟ್ಟು
ಬಿಡಿಸಲು ಅದರಲಿ ನುಡಿಗಟ್ಟು

ಯಂತ್ರಕೆ ಮೈಯ್ಯನು ಒಡ್ಡಿದರು
ಬಣ್ಣವ ಅದರಲಿ ಚೆಲ್ಲಿದರು
ಚಾಲನೆ ಅದಕೆ ನೀಡಿದರು
ಮೂಡಿದ ಕಲೆಯ ಮೆಚ್ಚಿದರು

ಸೂಜಿಯ ಹೊಲಿಗೆ ಹಾಕಿದರು
ಗೋoದನು ಬೆನ್ನಿಗೆ ಹಚ್ಚಿದರು
ಸುತ್ತಲು ಪರದೆಯ ಹಾಸಿದರು
ಸುಂದರ ರೂಪವ ಕೆತ್ತಿದರು.

5 comments:

  1. SANTHOSH...
    ABHINANDANEGALU..NIMMA E 25 LEKHANAGALU MUNDE SANKHYEGALANNU MEERI MUNDUVARIYALI..SAHITHYALOKADALLI NIMMA HESARU BELAGALI..BELAKAAGISALI.

    ReplyDelete
  2. Thank you Appu for your encouragement.

    ReplyDelete
  3. ಸಂತೋಷ್,
    ನಿಮ್ಮ ಮುದ್ರಣಾಲಯದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ
    ನಾವೂ ಭಾಗಿ
    ಅಭಿನಂದನೆಗಳು
    ಒಂದು ಮುದ್ರಣಾಲಯ ೨೫ ವರ್ಷ ಪೂರೈಸಲು ಎಷ್ಟೊಂದು ಕಷ್ಟ ಪಡಬೇಕು ಎನ್ನುವುದು ಊಹಿಸಲು ಸಾದ್ಯವಿಲ್ಲ
    ಮತ್ತೊಮ್ಮೆ ಚಂದದ ಕವನಕ್ಕೆ ಅಭಿನಂದನೆಗಳು

    ReplyDelete
  4. wish you all the best for your work sir..nice poem..carry on

    ReplyDelete