31 December 2009

ಹೊಸ ವರುಷ

ಹೊಸದು ವರುಷವು ನಮ್ಮೆದುರಿರಲು
ಸ್ವೀಕರಿಸಲು ಹೊಸಿಲಲಿ ಕಾಯುತಲಿರಲು
ಉತ್ಸಾಹವು ಮನವೆಲ್ಲ ತುಂಬಲು
ಚೈತನ್ಯ ನಮ್ಮಲಿ ಉಕ್ಕುತಲಿರಲು

ರೋಷ ದ್ವೇಶವ ಕಿತ್ತು ಒಗೆಯಲು
ಶಾಂತಿ ಸಹನೆಯು ಮೂಡುತಲಿರಲು
ಸ್ನೇಹ ಸೌಧವ ಕಟ್ಟುತಲಿರಲು
ಪ್ರೀತಿ ಮಮತೆಯು ಹರಿದುಬರಲು

ಬಂಧು ಬಾಂಧವರೆಲ್ಲ ಸೇರಲು
ತಿಂಡಿ ತಿನಿಸುಗಳ ಹಂಚಿಕೊಳ್ಳಲು
ಮನೆಯಲೆಲ್ಲ ಬೆಳಕು ಮೂಡಲು
ಕ್ಷಣ ಗಣನೆಯು ಆರಂಭವಾಗಲು

ಮೊಳಗಿತು ಕಹಳೆ ಹೊಸಹೆಜ್ಜೆಯನಿಡಲು
ಸಂಭ್ರಮದಿಂದ ಸಾರಿ ಹೇಳಲು
ಶುಭವನೆಲ್ಲಾ ಸೇರಿ ಕೋರಲು
ಹರುಷದಿ ವರುಷವ ಮುನ್ನಡೆಸಲು.

3 comments:

  1. ಹೊಸ ವರ್ಷವು ನಿಮಗೆ ಶುಭವನ್ನೂ, ಸುಖವನ್ನೂ ತರಲಿ

    ReplyDelete
  2. Really good article continue it.....

    ReplyDelete
  3. really good article contine it....

    ReplyDelete