16 December 2009

ಸಂಶೋಧನೆ ಬಗ್ಗೆ ಏಕೆ ತಿಳಿಯಬೇಕು?

ನಿಮ್ಮ ಪ್ರಯೋಗದ ಒಂದು ಭಾಗವಾಗಿ, ನೀವು ನಿಮನ್ನೇ ಕೇಳಿಕೊಳ್ಳಬಹುದು ಅಥವಾ ನಿಮಗೆ ನಿಮ್ಮ ಸಂಶೋಧನಾ ವಿಷಯದ ಬಗ್ಗೆ ಅಧ್ಯಯನ ಕೈಗೊಳ್ಳಲು ಒಂದು ಅವಕಾಶವನ್ನು ಕೊಟ್ಟರೆ, ಆ ವಿಷಯದ ಬಗ್ಗೆ ಸರಿಯಾದ ಮತ್ತು ನಿಖಟವಾದ ವರದಿಯನ್ನು ವದಗಿಸುವ ಸಾಮರ್ಥ್ಯ ನಿಮ್ಮಲ್ಲಿ ಇರಬೇಕು ಮತ್ತು ಯಾವ ಕಾರಣಕ್ಕೂ ಅದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಬಾರದು. ಸಂಶೋಧನೆ ಮತ್ತು ಸಂಶೋಧನಾ ಮಾರ್ಗಗಳು ನೀವು ಆತಂಕಕ್ಕೆ ಒಳಗಾಗಬೇಕಾದ ಸಂಗತಿಗಳಲ್ಲ.  ಇದಕ್ಕೆ ಸಂಬಂಧಿಸಿದಂತೆ ನೀವು ದಿನನಿತ್ಯದ ಕೆಲಸಗಳಲ್ಲಿ ಎಷ್ಟು ಕುಶಲತೆ ಹೊಂದಿರುತ್ತಿರೋ ಅದರ ಪರಿಕರಗಳು ನಿಮ್ಮ ಸಂಶೋಧನೆಯಲ್ಲಿ ಉಪಯೋಗಕ್ಕೆ ಬರುತ್ತವೆ.  ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕಲೆಹಾಕುವ ಚಾಣಾಕ್ಷತೆಯನ್ನು ಬೆಳಸಿಕೊಂಡಲ್ಲಿ ಒಂದು ಶಿಸ್ತುಬದ್ಧ ಗುಣಾತ್ಮಕ ಸಂಶೋಧನೆ ಮಾಡಲು ಸಾಧ್ಯ.  ಈ ರೀತಿ ಕಾರ್ಯಕ್ಷಮತೆಯನ್ನು ಅಳವಡಿಸಿಕೊಂಡಲ್ಲಿ ಸಂಶೋಧನಾ ಹಾದಿಯಲ್ಲಿ ಎದುರಾಗುವ ಸೂಕ್ಷ್ಮ ಮತ್ತು ಸಂಧಿಗ್ಧ ಪರಿಸ್ತಿತಿಗಳನ್ನು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಸಂಶೋಧನಾಕಾರರಾಗಿ ನೀವು ಅನೇಕ ವಿಷಯಗಳ ಬಗ್ಗೆ ಓದಿ ತಿಳಿದುಕೊಂಡು ಅದರಿಂದ ಕೆಲವು ಸಿದ್ಧಾಂತಗಳಿಗೆ ಬರಬೇಕಾಗುತ್ತದೆ (you need to draw conclusions from what you have understood and analysed).  ಇದು ಕೂಡ ಸಂಶೋಧನೆಯ ಒಂದು ಮುಖ್ಯ ಭಾಗ. ನೀವು ಬೇರೆ ಸಂಶೋಧಕರು ಮಾಡಿದನ್ನು ನೋಡಿ, ಓದಿ ಕಲಿಯಲು ಬಯಸುತ್ತೀರ ಅಥವಾ ಸ್ವತಃ ನೀವೇ ಮಾಡಿ ಕಲಿಯಲು ಬಯಸುತ್ತೀರ ಅದೂ ನಿಮಗೆ ಬಿಟ್ಟದ್ದು (you need to identify whether you want to be a visual learner, auditory learner or kinesthetic learner as differentiated in educational psychology).  ನೀವು ಯಾವುದನ್ನೇ ಆಯ್ದುಕೊಂಡರು ಮೇಲೆ ಹೇಳಿರುವ ಎಲ್ಲಾ ಗುಣಗಳನ್ನು ನಿಮ್ಮಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ; ಏಕೆಂದರೆ ಯಾವ ವಿಷಯ, ವಿಭಾಗಕ್ಕೆ ಸೇರಿದವರಾದರು ಇವು ಮೂಲಭೂತ ಗುಣಗಳು (ಹೇಗೆ ಒಳ್ಳೆ ಜೀವನ ನಡೆಸಲು ಬೇಕಾಗುವ ಲಕ್ಷಣಗಳಿಗೆ ಮಂಕುತಿಮ್ಮನ ಕಗ್ಗ ಆಧಾರವೆನ್ನುತ್ತಾರೋ, ಕಾರ್ಯನಿರ್ವಹಣೆಗೆ ಚಾಣಕ್ಯನ ಅರ್ಥಶಾಸ್ತ್ರವನ್ನು ಹೊಲಿಸುತ್ತರೋ, ಅದೇ ರೀತಿ ಇದು ಮೇಲಿನ ಮಾತುಗಳಿಗೆ ಅವಲಂಭಿತವಾಗಿದೆ).     

2 comments: