06 December 2009

ಜ್ಞಾನ ದೇಗುಲ

ಜ್ಞಾನವು ಒಂದು ಮಾಯಾಜಾಲ
ಅಡಗಿಸಿ ಇಡುವುದು ಅಂತರ್ಜಾಲ
ಹೊರಗೆಳೆಯಲು ಬೇಕು ಇಂದ್ರಜಾಲ 
ಗುರುವಿಗೆ ಅದುವೇ ಲೀಲಾಜಾಲ

ಶಾಲೆಯು ಒಂದು ಸುಂದರ ತಾಣ
ಕಲಿಯುವ ಮನಸಿಗೆ ಹೂವಿನ ಬಾಣ
ಆಗುವೆ ನೀನು ಬದುಕಲಿ ಜಾಣ
ಕಂಡರೆ ಅದರಲಿ ಅರಿವಿನ  ಉಗ್ರಾಣ

ಬದುಕಿನ ದಿಕ್ಕನು ತಿಳಿಸುವ ಮೂಲ
ಮರೆಯಲು ಆಗದು ಮೋಜಿನ ಕಾಲ
ತೋರಲು ನಿನಗೆ ಬಿಳಿಯ ಹಾಲ
ಚಿಗುರುವ ಕೊರಳಿಗೆ ಪುಷ್ಪದ ಮಾಲ

ಓಡುವ ಮನಸಿಗೆ ಮೂಗಿನ ದಾರ
ಅನಿಸದು ಎಂದೂ ಅದುವೇ ಭಾರ
ವಿದ್ಯೆಗೆ ಗೌರವ ಕೊಡುವುದು ಊರ
ತಿಳಿಯುವೆ ಮುಂದೆ ಅದರ ಸಾರ

4 comments:

  1. Hey santhosha adu moola kano, matte koneya pyara astu artha aglilla.

    ReplyDelete
  2. yavaga thilisthiya mundina saravannu?

    ReplyDelete
  3. Chennagi baritiya maraya..kelavondu shabdhagalu a jaagadalli sookta howdo aalavo anta nange anumana!
    first paradalli "ಅಡಗಿಸಿ" annodakkinta bere padada balake iddiddare chennagittu.
    Murane parada ella saalu ondondu dikkinatta saaagide anta anisitu.but tumba chennagide.
    "ವಿದ್ಯೆಗೆ ಗೌರವ ಕೊಡುವುದು ಊರ" artha aaglilla.ello eno gondala kanditu.
    But tumba chennagi baritiya...yochana sarani chennagide.Shubhavagali.

    ReplyDelete