10 October 2009

ಬೆಡಗಿನ ಸಮಾರಂಭಕ್ಕೆ ಬೆಡಗಿಯರ ಸಿಂಚನ

ಸ್ತಾಕ್ಹೊಮೆನಲ್ಲಿ ಸ್ವೀಡಿಷ್ ಸಂಸ್ಥೆಯ ಅಥಿತಿ ಶಿಷ್ಯವೇತನ ಪಡೆದು ಬೇರೆ ರಾಷ್ಟ್ರಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಒಂದು ಸಮಾವೇಶ ಏರ್ಪಡಿಸಿದ್ದರು.  ಅಲ್ಲಿಗೆ ತಾ| ೦೯/೧೦/೨೦೦೯ ಬೆಳಿಗ್ಗೆ 8.30 ರ ಹೊತ್ತಿಗೆ ಹೋಗಿ ತಲುಪಿದೆನು.  ಮುಖ್ಯ ದ್ವಾರದಲ್ಲಿ ಬಂದಂತ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಆರಂಭವಾಗಿತ್ತು.  ನೋಂದಣಿ ಸಮಯದಲ್ಲಿ ಎಲ್ಲರಿಗೂ ಒಂದು ಷರತ್ತನ್ನು ವಿಧಿಸಿದರು. ಪ್ರತಿಯೊಬ್ಬರೂ ತಮ್ಮ ಹೆಸರಿನ ನಾಮಫಲಕವನ್ನು ಬಿಟ್ಟು ಬೇರೆ ಯಾವ ಹೆಸರಿನ ನಾಮಫಲಕವನ್ನು ಬೇಕಾದರೂ ಆರಿಸಬಹುದು.  ಈ ಒಂದು ಸಮಾರಂಭವು ಬೆಳಗಿನಿಂದ ಸಂಜೆಯವರೆಗೂ ನಡೆಯುವುದರಿಂದ ಅಷ್ಟರಲ್ಲಿ ಬೇರೆ ರಾಷ್ಟ್ರದ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಮಾತನಾಡಿ ತಮ್ಮ ಹೆಸರಿನ ನಾಮಫಲಕವನ್ನು ಗುರುತಿಸಿ ತೆಗೆದುಕೊಳ್ಳಬೇಕೆಂದು ಆವರ ಉದ್ದೇಶವಾಗಿತ್ತು. ಅದರಂತೆ ನನಗೆ ಒಂದು ಭಾರತೀಯ ಹುಡುಗಿಯ ನಾಮಫಲಕ ಸಿಕ್ಕಿತು.  ನನ್ನ ನಾಮಫಲಕವು ಒಂದು ಪಾಕಿಸ್ತಾನದ ಹುಡುಗಿಯ ಬಳಿ ಇದ್ದುದನ್ನು ಕೆಲವೇ ನಿಮಿಷಗಳಲ್ಲಿ ಗುರುತಿಸಿ ನನ್ನದನ್ನು ಪಡೆದುಕೊಂಡೆ.  ಅಲ್ಲಿ ಬರುತ್ತಿದ್ದ ಪ್ರತಿಯೊಬ್ಬರನ್ನು ಗಮನಿಸುತ್ತಾ ಕೆಲಹೊತ್ತು ನಿಂತಿದ್ದೆ ನಂತರ ಒಳಗೆ ಹೋಗಿ ಕುಳಿತೆ.  ಅಲ್ಲಿಗೆ ಬರುತ್ತಿದ್ದ ಹುಡುಗಿಯರ ಬೆಡಗನ್ನು ಕಂಡು ಬೆರಗಾಗಿ ನಿಂತೆನು.  ನಿನ್ನೆಯವರೆಗೂ ಆ ರೀತಿಯ ಸುಂದರಿಯರನ್ನು ನಾನು ಕಂಡಿರಲಿಲ್ಲ.  ಆವರ ಎತ್ತರ ಮಾವಿನ ಮರದಿಂದ ಅಡಿಕೆ ಮರದ ನಡುವೆ ಇತ್ತು, ಹಣೆಯು ವಿಮಾನನಿಲ್ದಾಣದ ಓಡು ದಾರಿಯಂತೆ ನೆರವಾಗಿತ್ತು, ಕಣ್ಣುಗಳು ಮಿನುಗುವ ನಕ್ಷತ್ರದಂತಿತ್ತು; ಮೂಗು ಮಂದಹಾಸದಂತಿತ್ತು;  ತುಟಿಗಳು ತಾವರೆ ಹೂವಿನoತಿತ್ತು,  ಕೆನ್ನೆಯ ಮೇಲಿನ ಗುಳಿಗಳು ನೀರಿನ ಸುಳಿಯಂತಿತ್ತು, ಕಿವಿಗಳು ಕನಕಾಂಬರದಂತಿತ್ತು;  ಮೊಗವು ಹುಣ್ಣಿಮೆಯ ರಾತ್ರಿಯಂದು ಹೊಳೆಯುವ ಚಂದ್ರನಂತಿತ್ತು;  ಸೊಂಟವು ಸೂಜಿಯ ದಾರದಂತೆ ಬಳುಕುತ್ತಿತ್ತು; ಕೆಶರಾಶಿಯು ರೇಷ್ಮೆ ನೂಲಿನಂತೆ ಫಳಫಳನೆ ಹೊಳೆಯುತ್ತಿತ್ತು; ಕಾಲುಗಳು ಗಂಧ ತೇಯುವ ಸಾಣೆಯನ್ತಿದ್ದವು; ಒಟ್ಟಿನಲ್ಲಿ, ಆವರ ಇಡೀ  ದೇಹವು ಶಿಲಾಬಾಲಿಕೆಯರ ಸಾಕ್ಷಾತ್ ಸ್ವರೂಪವಾಗಿತ್ತು.  ಇದುವರೆಗೂ ರಂಭೆ, ಊರ್ವಶಿ, ಮೆನಕೆಯರನ್ನು ಕಲ್ಪನೆಯಲ್ಲಿ ಕಂಡ ನನಗೆ ಆ ಕನಸು ನನಸಾದಂತೆ ಭಾಸವಾಯಿತು. ನಂತರ ಸಮಾರಂಭ ಪ್ರಾರಂಭವಾಯಿತು. ಮೊದಲಿಗೆ ಆ ಸಂಸ್ಥೆಯ ಅಧಿಕಾರಿಗಳನ್ನು ಪರಿಚಯ ಮಾಡಿಕೊಡಲಾಯಿತು, ಸ್ವೀಡನ್ನಿನ ಸಂಸ್ಕ್ರುತಿಯಬಗ್ಗೆ ವಿಚಾರಗಳು, ವಿಮರ್ಶೆಗಳು ನಡೆದವು.  ನಡುವಿನ ಕಾಫಿ ಸಮಯದಲ್ಲಿ ಕೆಲ ಬೇರೆ ರಾಷ್ಟ್ರದ ಹುಡುಗ, ಹುಡುಗಿಯರನ್ನು ಪರಿಚಯಮಾಡಿಕೊಳ್ಳುತ್ತ ಅವರೊಂದಿಗೆ ಮಾತುಕಥೆಗಳು ನಡೆದವು.  ಊಟದ ನಂತರ ಸಾಂಸ್ಕೃತಿಕ ವಿಭಿನ್ನಗಳ ಬಗ್ಗೆ ಒಂದು ವಿಚಾರ ವಿಮರ್ಶೆ ನಡೆಯಿತು.  ಇದರ ಕೊನೆಯಲ್ಲಿ ಅವರವರ ರಾಷ್ಟ್ರಗಳ ಸಂಸ್ಕೃತಿಯನ್ನು ಬಿಂಬಿಸುವ ಒಂದು ಪದ ಮತ್ತು ಒಂದು ಚಿತ್ರವನ್ನು ಬರೆಸಿಕೊಂಡು ಅದನ್ನು ದೊಡ್ಡ ಪರದೆಯಮೇಲೆ ಬಿಂಬಿಸಲಾಯಿತು ಹಾಗು ಪ್ರತಿಯೊಂದು ಚಿತ್ರ, ಪದ ಬರೆದ ಆ ರಾಷ್ಟ್ರದ ಒಬ್ಬ ವಿದ್ಯಾರ್ಥಿಯನ್ನು ನಿಲ್ಲಿಸಿ ಅದಕ್ಕೆ ವಿವರಣೆ ನೆಡುವಂತೆ ಕೇಳಿದರು.  ಭಾರತದ ಬಗ್ಗೆ ವಿವರಣೆ ನೀಡಲು ಬಂದ ಅವಕಾಶ ನನಗೆ ಒಲಿದಾಗ ಅದನ್ನು ಸಮರ್ಥವಾಗಿ ನಿಭಾಯಿಸಿದೆ.  ಸಂಜೆ ಕಾರ್ಯಕ್ರಮ ಮುಗಿದಮೇಲೆ ಎಲ್ಲರಿಗೂ ಸ್ವೀಡನ್ನಿನ ಊಟ, ತಿಂಡಿಗಳ ಬಗ್ಗೆ ಒಂದು ಪುಸ್ತಕ, ಒಂದು ಲೇಖನಿ, ಒಂದು ಬರೆಯುವ ಪುಸ್ತಕ ಮತ್ತು ಬೇರೆ ಬೇರೆ ರಾಷ್ಟ್ರಗಳ ಬಗ್ಗೆ ವಿವರಣೆ ನೀಡುವ ಒಂದು ಪುಸ್ತಕವನ್ನು ಕೊಟ್ಟು ಎಲ್ಲರಿಗೂ ಶುಭಕೋರಿ ಕಳಿಸಿಕೊಡಲಾಯಿತು.  ಆ ಇಡಿಯ ದಿನ ಕಳೆದ್ದದೆ ಗೊತ್ತಾಗಲಿಲ್ಲ.  ಹಿಂತಿರುಗಿ ಬರುವಾಗ ಕೆಲವರ ಮಿಂಚಂಚೆ ಮತ್ತು ಕೆಲವರ ದೂರವಾಣಿ ಸಂಖ್ಯೆಗಳನ್ನು ಪಡೆದು ಬಂದೆ.

4 comments:

  1. Maga Kavi thara hudigarannu varnisalu kuda barutthe ninage....... Ondu select madko til march ..... u can roam around have some nice time...

    well wat was u r expaination about india.... which picture u made?????

    ReplyDelete
  2. Well the phrase was unity in diversity and the picture was TajMahal

    ReplyDelete
  3. ಸಂತೋಷ
    ಹೊಸದಾಗಿ ಸ್ವೀಡನ್ನಿಗೆ ಬಂದ ಯುನಿವರ್ಸಿಟಿಯ ಸಂಶೋಧಕರನ್ನು ಕರೆದು ಔತಣ ಕೂಟ ಏರ್ಪಡಿಸುವುದು ಸ್ವೀಡನ್ನಿನ ಸಂಪ್ರದಾಯಗಳಲ್ಲೊಂದು. ಇದು ಸ್ವೀಡನ್ನಿನ ಪ್ರತಿಯೊಂದು ಕಡೆ ಯೂ ಅತ್ಯಂತ ವೈಭವದಿಂದ ನಡೆಸುತ್ತಾರೆ.
    ಅಂತ ಕೂಟದ ನಿಮ್ಮ ವಿವರಣೆ ಚೆನ್ನಾಗಿದೆ.

    ReplyDelete