02 October 2009

ನಾಜೂಕು ನಾಗರೀಕತೆ

ಭಾರತದಲ್ಲಿ ಇರುವ ಪ್ರತಿಯೊಬ್ಬ ಯುವಕನಿಗು ಒಮ್ಮೆಯಾದರೂ ವಿದೇಶಕ್ಕೆ ಹೊಗಿಬರಬೇಕೆಂಬ ಆಸೆ ಇರುತ್ತದೆ.  ಅಲ್ಲಿನ ಪ್ರದೇಶ, ಜನ, ಆವರ ನಡವಳಿಕೆ, ಅಲ್ಲಿನ ವ್ಯವಸ್ಥೆ, ಸಂಸ್ಕೃತಿ ಹೀಗೆ ಇದೆಲ್ಲದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ. ಮೊದಲಬಾರಿಗೆ ವಿದೇಶಿ ಪ್ರಯಾಣ ಮಾಡುವವರು, ತಮ್ಮ ಕಲ್ಪನೆಯ ಲೋಕದಲ್ಲಿ ಸುಂದರ ಚಿತ್ರಣವನ್ನು ಇಟ್ಟುಕೊಂಡಿರುತ್ತಾರೆ.  ಆವರ ಕಲ್ಪನೆಯಲ್ಲಿ ಶೇಕಡಾ ೫೦ ಪ್ರತಿಶತ ನಿಜವಾದರೆ, ಇನ್ನು ೫೦ ಪ್ರತಿಶತ ನಮ್ಮ ಕಲ್ಪನೆಗೆ ಮೀರಿದ್ದಾಗಿರುತ್ತದೆ.  ವಿದೇಶದಲ್ಲಿನ ಪರಿಸರ, ಸ್ವಚತೆ, ಅಲ್ಲಿನ ವ್ಯವಸ್ಥೆಯನ್ನು ಕಂಡು ಸಂತೋಷ ಪಡುತ್ತೇವೆ.  ಇದರ ಜೊತೆಯಲ್ಲಿ ಅಲ್ಲಿನ ಜನರ ನಡತೆ, ಸ್ವಭಾವವನ್ನು ತಳಿಯುವುದು ಕೊಂಚ ತಡವಾಗುತ್ತದೆ.  ಸಾಮಾನ್ಯವಾಗಿ ಜನರು ತಮ್ಮ ತಮ್ಮ ಪ್ರದೇಶಕ್ಕೆ ಅನುಗುಣವಾಗಿ ಬೆಳೆಯುತ್ತಾರೆ.  ಭಾರತದ ಜನರ ನೈಜ ಸ್ವಭಾವದಂತೆ ವಿದೇಶಕ್ಕೆ ಬಂದಾಗ ತಿಳಿದೋ ಅಥವಾ ತಿಳಿದೆಯೋ ಅವರೆದುರು ನಡೆದುಕೊಂಡರೆ ಅಲ್ಲಿಯವರಿಗೆ ಕೆಟ್ಟ ಕೊಪಬರುತ್ತದೆ.  ಏಕೆಂದರೆ, ವಿದೇಶಿಯರು ತುಂಬಾ ಸೂಕ್ಷ್ಮ ಸ್ವಭಾವದವರು, ಆವರ ನಡವಳಿಕೆ ಬಲು ನಾಜುಕಾಗಿರುವಂತಹುದು. ಅವರಿಗೆ ಪ್ರತಿಯೊಂದು ವಸ್ತು, ವಿಷಯ ತುಂಬಾ ಅಚ್ಚುಕಟ್ಟಾಗಿರಬೇಕು.  ಅವರು ತಮಗೆ ವಿದೇಶಿಯರಾದವರು ಇದ್ದಂತ ಸಂದರ್ಭದಲ್ಲಿ ಏನಾದರು ತಪ್ಪು ನಡೆದರೆ ಅದು ವಿದೇಶಿಯರ ಬೇಜವಾಬ್ದಾರಿತನದಿಂದ ಆದದ್ದು ಎಂದು ದೂಷಿಸುವ ಪ್ರಸಂಗ ಎದುರಾಗಬಹುದು.  ಉದಾ: ನಾವು ೧೦ ಬಾರಿ ಉಪಯೋಗಿಸುವ ವಸ್ತುವನ್ನು ಅವರು ಒಂದು ಬಾರಿ ಉಪಯೋಗಿಸಿ ಬಿಸಾಡುತ್ತಾರೆ; ಆವರ ವಸ್ತುವನ್ನು ಯಾವುದೋ ಒಂದು ಸಂದರ್ಭದಲ್ಲಿ ನಾವು ಉಪಯೋಗಿಸಿ ಅದು ಮುಂದೆ ಯಾವುದೋ ಒಂದು ದಿನ ಕೆಟ್ಟರೆ ಅದಕ್ಕೆ ನಾವೇ ಕಾರಣ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ.  ತಮಗೆ ಅರಿವಿಲ್ಲದೆ ಏನಾದರು ನಡೆದರೆ ಅದು ಅವರಿಗೆ ತುಂಬಾ ಕಸಿವಿಸಿ ಉಂಟುಮಾಡುತ್ತದೆ. ಈ ಸಮಯದಲ್ಲಿ ಒಂದು ಅಂಗ್ಲ ಹೇಳಿಕೆ ನೆನಪಿಗೆ ಬರುತ್ತದೆ; (It is easy to be a christian, but it is difficult to live with Jesus christ; It is easy to be a Buddist but it is difficult to live with Buddha because they extract every fibre of our being). ಹೀಗಾಗಿ, ನಾವು ವಿದೇಶಿಯರ ಜೊತೆಯಲ್ಲಿ ಇರುವ ಪ್ರತಿಯೊಂದು ಕ್ಷಣವು ಬಲು ಜಾಗರುಕತೆಯಿಂದ ನಡೆದುಕೊಳ್ಳಬೇಕು.  ನಾವು ವಿದೇಶಿಯರಿಂದ ಕಲಿಯಬೇಕಾದ ವಿಷಯಗಳು ಇರುವಂತೆ ಅವರು ನಮ್ಮಿಂದಲೂ ಕಲಿಯಬೇಕಾದ ವಿಷಯಗಳು ಇವೆ.  ಇದು ನನ್ನ ಸ್ವಂತ ಅಭಿಪ್ರಾಯ ಮತ್ತು ಅನಿಸಿಕೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು.

1 comment:

  1. Good one , i experienced that , sweden is having rich culture,
    We should learn a lot from swedish poeple.

    ReplyDelete