01 October 2009

ರಸಾಯನಶಾಸ್ತ್ರ ಬೋಧನೆಗೆ ರಾಜತಂತ್ರ

ರಸಾಯನಶಾಸ್ತ್ರ ವಿಜ್ಞಾನದ ಒಂದು ಭಾಗ.  ಇದರಲ್ಲಿ ಹಲವು ರೀತಿಯ ಪದಪುಂಜಗಳು, ಅರ್ಥಾನುಸಾರಗಳು ಒಳಗೊಂಡಿವೆ.  ಇದನ್ನು ಬೋಧಿಸಲು ಸುಲಭ ಎನಿಸಬಹುದು; ಆದರೆ ಇದನ್ನು ಕಲಿಯುವ ವಿದ್ಯಾಥಿಗಳಿಗೆ ಮನದಟ್ಟು ಮಾಡುವುದು, ಅರ್ಥೈಸುವುದು ಒಂದು ಸಾಹಸವೇ ಸರಿ. ರಸಾಯನಶಾಸ್ತ್ರವನ್ನು ಮೊದಲಿಗೆ ಹಿರಿಯ ಪ್ರಾಥಮಿಕ ಶಾಲೆಯಿಂದಲೇ ಬೋಧಿಸಲು ಆರಂಭಿಸಿದರು, ಅದರ ನಿಜವಾದ ಸತ್ವ ತಿಳಿಯುವುದು ಪದವಿಪೂರ್ವ ಶಿಕ್ಷಣದಲ್ಲಿ.  ಈ ಹಂತದಲ್ಲಿ, ವಿದ್ಯಾರ್ಥಿಗಳಿಗೆ ಮೂಲ ತತ್ವಗಳನ್ನು ತಿಲಿಸಿಕೊದುವುದರೊಂದಿಗೆ ಒಳ್ಳೆಯಾ ಭಾಷಾ ಸಾಮರ್ಥ್ಯವನ್ನು ಬೆಳೆಸುವುದು, ವಿಷಯವನ್ನು ಹೆಚ್ಚು ಕುತೂಹಲಕಾರಿಯನ್ನಾಗಿ ಮಾಡುವುದು ಅಗತ್ಯ.  ಇದನ್ನು ನಿರ್ವಹಿಸಲು ವಿದ್ಯಾರ್ಥಿಗಳ ಮನಸನ್ನು, ಆವರ ಗಮನವನ್ನು ಹಿಡಿತದಲ್ಲಿ ಇಡುವುದು ಒಬ್ಬ ಶಿಕ್ಷಕನ ಜವಾಬ್ದಾರಿ.  ಇದಕ್ಕಾಗಿ, ನವತಂತ್ರಜ್ಞಾನದ ಬಳಕೆ ಅತ್ಯಾವಶ್ಯಕ; ಇದಲ್ಲದೆ ಭಾಷೆಯಮೇಲಿನ ಹಿಡಿತ, ಆ ವಿಷಯದ ಬಗೆಗಿನ ಅಂತರಾಳದ ಅರಿವು ಬಹು ಮುಖ್ಯ.  ಈರೀತಿಯ ಒಂದು ವಾತಾವರಣ ಸೃಷ್ಟಿಯಾದರೆ, ವಿದ್ಯಾರ್ಥಿಗಳು ತಮ್ಮಲ್ಲಿ ವಿಷಯದ ಬಗ್ಗೆ ಆಸಕ್ತಿ ಜೊತೆಯಲ್ಲಿ ಸೃಜನಶೀಲ ಮನೋಭಾವ ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ ಹಾಗು ಆವರ ಬದುಕಿನಲ್ಲಿ ಅತ್ಯುನ್ನತ ಸ್ಥಾನಗಳಿಗೆ ಏರಲು ಒಂದು ಭದ್ರ ಬುನಾದಿ ಸಿಕ್ಕಂತೆ ಆಗುತ್ತದೆ.

2 comments:

  1. ಸಂತೋಷ್,
    ನೀವು ಹೇಳುವುದೇನೋ ಸರಿ ಆದರೆ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಿಂದಾಗಿ ಬಾಲ್ಯದ ಸವಿ ನೆನಪನ್ನು ಕಳೆದುಕೊಳ್ಳುತ್ತಿದ್ದಾರೆ . ಆಟ ಮರೆತೇ ಹೋಗಿದೆ, ನಂಗೆ ಭವಿಷ್ಯದ ಮಕ್ಕಳ ಸ್ಥಿತಿ ನೆನೆದೆ ಭಯವಾಗುತ್ತಿದೆ, ಓದುವುದನ್ನು ಬಿಟ್ಟು ಇನ್ನೇನನ್ನೂ ಮಾಡುತ್ತಿಲ್ಲ,

    ReplyDelete
  2. nimma maatu satya. ee reeti vatavarana srushti aagiruvudu poshakarindale hechhu.

    ReplyDelete