28 September 2009
ವಿಜ್ಞಾನದ ವಿನೋದ, ವಿಸ್ಮಯದ ವಿಲಾಸ
ಇಂದು ದಿನೇ ದಿನೇ ಬೆಳೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರತಿದಿನವೂ ತಿಲಿಯುತ್ತಿರುತ್ತೇವೆ. ಈ ಬೆಳವಣಿಗೆಯ ಸಮೂಹದಲ್ಲಿ, ಅತೀ ವೇಗವಾಗಿ ಮುನ್ನುಗುತ್ತಿರುವುದು ಗಣಕೀಕೃತ ರಸಾಯನಶಾಸ್ತ್ರ. ಒಂದು ಕಾಲದಲ್ಲಿ ಅಣುಗಳನ್ನು, ಅಣು ವಿಜ್ಞಾನವನ್ನು ಕೇವಲ ಕಲ್ಪನೆಯಿಂದ ಕಲಿಯುತ್ತಿದ್ದೆವು; ಅದರ ಓಡಾಟ, ಒಡನಾಟ, ಚಲನವಲನಗಳು ಕೇವಲ ಕಲ್ಪನೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು, ತಂತ್ರಜ್ಞಾನ ಬೆಳೆದಂತೆ ಅನುಗಳನ್ನು ಕಣ್ಣಾರೆ ವೀಕ್ಷಿಸಬಹುದು. ಈವರೆಗೂ ಪ್ರಸಿದ್ಧವಾಗಿರು ಎಷ್ಟೋ ವೈಗ್ನಾನಿಕ ಪ್ರಭಂದಗಳಿಗೆ ಪ್ರಾಯೋಗಿಕ ಸಾಕ್ಷಿಯ ಮೂಲಕ ಇಂದು ಗಣಕೀಕೃತ ರಸಾಯನಶಾಸ್ತ್ರವು ವಿವರಿಸುತ್ತದೆ. ಗಣಕಯಂತ್ರದಲ್ಲಿ ಅನುಗಳನ್ನು ಸೃಸ್ಟಿಸಬಹುದು, ಅದನ್ನು ಮತ್ತೊಂದು ಅಣುವಿನ ಜೊತೆಯಲ್ಲಿ ಸಂದಿಸುವ, ಸ್ಪಂದಿಸುವ ರೀತಿ ನೀತಿಗಳನ್ನು ವೀಕ್ಷಿಸಬಹುದು. ಅವುಗಳನ್ನು ಬೇರೆಬೇರೆ ವಾತಾವರಣಗಳಲ್ಲಿ, ವತ್ತದಗಳಲ್ಲಿ ಪರೀಕ್ಷಿಸಿ ಅಧ್ಯಯನಮಾದಬಹುದು. ಅವುಗಳಿಗೆ ಕೃತಕವಾಗಿ ಚಲನವಲನ ನೀಡಬಹುದು. ಇದನ್ನು ನೋಡುತ್ತಿದ್ದರೆ ಮೈರೋಮಂಚನವಾಗುತ್ತದೆ. ಇತ್ತೀಚೆಗೆ ಪ್ರಕಟವಾಗುತ್ತಿರುವ ಭಾಗಶಃ ಎಲ್ಲಾ ವೈಜ್ಞಾನಿಕ ಲೇಖನಗಳಲ್ಲೂ ಗಣಕೀಕೃತ ರಸಾಯನಶಾಸ್ತ್ರದ ಒಂದು ಭಾಗವನ್ನು ಕಾಣಬಹುದು. ಈ ಹೊಸ ತಂತ್ರಜ್ಞಾನದ ಬೆಳವಣಿಗೆಯಿಂದ ವಿಚಾರವನ್ನು, ವಿಷಯವನ್ನು ಹೆಚ್ಚು ಕುಲಂಕುಶವಾಗಿ ಪರಿಶೀಲಿಸಿ ಅರ್ಥಯಿಸಬಹುದು. ಈ ನವ ತಂತ್ರಜ್ಞಾನದ ಕಲಿಕೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿರುವುದು ಸಂತಸದ ವಿಷಯ.
Subscribe to:
Post Comments (Atom)
Good one Santhosh, I have seen recent article regarding this.
ReplyDeleteGood , keep it up