26 September 2009

ಒಂಟಿತನದ ನೆರಳಲ್ಲಿ, ಸ್ನೇಹಿತರ ನೆನಪಲ್ಲಿ

ಇಂದಿಗೆ ನಾನು ಭಾರತವನ್ನು ಬಿಟ್ಟು ಸ್ವೀಡನ್ನಿನ ರಾಜಧಾನಿಯದ ಸ್ತಾಕ್ಹೊಮೆಗೆ ಬಂದು ೨೭ ದಿನಗಳು ಕಳೆದಿವೆ. ಸ್ವೀಡಿಷ್ ಸಂಸ್ಥೆಯಾ ಶಿಷ್ಯವೇತನ ಪಡೆದು ರಸಾಯನಶಾಸ್ತ್ರದಲ್ಲಿ ಸಂಶೋಧನಾ ಕಾರ್ಯವನ್ನು ಮುಂದುವರಿಸಲು ಬಂದಿದ್ದೇನೆ. ಈ ಶಿಷ್ಯವೇತನಕ್ಕೆ ನಿಗದಿಯಾಗಿರುವ ಸಮಯ ಆರು ತಿಂಗಳು. ಇಲ್ಲಿನ ವಿಶ್ವವಿದ್ಯಾಲಯ ವಾರದ ಐದುದಿನ ಮಾತ್ರ ಕೆಲಸ ಮಾಡುತ್ತವೆ. ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ರಜೆಯ ದಿನಗಳು. ಸೋಮವಾರದಿಂದ ಶುಕ್ರವಾರದ ವರೆಗೆ ವಿಶ್ವವಿದ್ಯಾಲಯದ ಕೆಲಸ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದರಿಂದ ೫ ದಿನಗಳು ಕಳೆಯುವುದು ಕಷ್ಟವೇನಲ್ಲ. ಆದರೆ ವಾರದ ಕೊನೆಯಲ್ಲಿ ಕಳೆಯುವ ಎರಡು ದಿನಗಳು ಎರಡು ಯುಗವನ್ನೇ ಕಳೆದಂತೆ ಆಗುತ್ತದೆ. ನನ್ನ ಜೊತೆಯಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಚೀನಾ ಮತ್ತು ರಷ್ಯಾದಿಂದ ಬಂದವರು. ಚೀನಾದವರು ಕೆಲಸವನ್ನು ಬಿಟ್ಟು ಬೇರೆ ಯಾವವಿಷಯದಲ್ಲೂ ಆಸಕ್ತಿ ತೋರುವುದಿಲ್ಲ. ಇನ್ನು ರಷ್ಯಾದವರು, ವಾರದ ಕೊನೆಯಲ್ಲಿ ವಿಶ್ರಾಂತಿ ಬಯಸುವರು, ಹಾಗಾಗಿ ಅವರು ತಮ್ಮ ಮನೆಯನ್ನು ಬಿಟ್ಟು ಎಲ್ಲೂ ಬರುವುದಿಲ್ಲ. ನನಗೆ ಬೇರೆಬೇರೆ ಜಾಗಗಳಿಗೆ ಹೋಗಿ ಅದರ ಬಗ್ಗೆ ತಿಳಿದು ನೋಡಿಬರುವ ಹಂಬಲ. ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ಆಸೆ ನನ್ನದು. ಹೊರಗೆ ಹೋಗಿ ತಿರುಗಾಡಲು ಚಪಲ ಆದರೆ ಒಬ್ಬನೆ ಹೋಗಲು ಬೇಸರ. ಕೆಲವೊಮ್ಮೆ ಗಟ್ಟಿ ಮನಸ್ಸು ಮಾಡಿ ಪ್ರವಾಸನೀಯ ಸ್ಥಳಗಳಿಗೆ ಹೋಗಿಬಂದೆ. ಮನೆಯಲ್ಲಿ ಕೂತು ಸಂಶೋಧನಾ ಲೇಖನಗಳನ್ನು ಬರೆದರು, ಚಲನಚಿತ್ರಗಳನ್ನು ವೀಕ್ಷಿಸಿದರು, ಪುಸ್ತಕ ಓದಿದರು ಸಮಯ ಕಳೆಯುವುದು ಕಷ್ಟವಾಗಿದೆ. ಮನೆಯ ಯೆಜಮಾನಿ ವಯಸ್ಸಾದವರು ಮತ್ತು ಅವರದೇ ಪ್ರಪಂಚದಲ್ಲಿ ಇರುವರು.  ಅವರಿಗೆ ಸರಿಯಾಗಿ ಆoಗ್ಲಭಾಷೆಯು ಬರುವುದಿಲ್ಲ ಹಾಗಾಗಿ ಅವರೊಡನೆ ಮಾತನಾಡುವುದು ಕಷ್ಟದ ಕೆಲಸ. ಹೀಗಿರುವ ಪರಿಸ್ಥಿತಿಯಲ್ಲಿ ನಾನು ನನ್ನ ಸ್ನೇಹಿತರ ಜೊತೆಯಲ್ಲಿ ಕಳೆದ ಮಧುರ ಕ್ಷಣಗಳನ್ನು ಮೆಲಕುಹಾಕುತ್ತಾ, ಅವರ ನೆನಪಲ್ಲಿ ಕಾಲವನ್ನು ಕಳೆಯುತಿದ್ದೇನೆ. ನನಗೆ ಮೊದಲಿನಿಂದಲೂ ನನ್ನ ಸ್ನೇಹಿತರ ಮೇಲೆ ಅಪಾರ ವಿಶ್ವಾಸ ಮತ್ತು ಗೌರವ. ನಾನು ನಡೆದು ಬಂದ ಎಲ್ಲಾ ಹಂತಗಲ್ಲಲಿಯು ನನ್ನ ಜೊತೆಯಲ್ಲಿ ಇದ್ದು ನನ್ನ ಸರಿ ತಪ್ಪುಗಳನ್ನು ತಿದ್ದುತ್ತ ಸರಿಯಾದ ದಾರಿಯಲ್ಲಿ ನಡೆಸಿದ್ದಾರೆ. ಅವರ ಉದಾರ ಮನೋಭಾವ, ಆವರ ಪ್ರೀತಿ, ವಿಶ್ವಾಸಗಳು ನನ್ನು ಅವರಲ್ಲಿಗೆ ಹೆಚ್ಚು ಸೆಳೆಯುತ್ತಿದೆ. ನಾನು ಈ ಶಿಷ್ಯವೇತನ ಪಡೆದಾಗಲು ನನಗಿಂತ ಹೆಚ್ಚು ಸಂಭ್ರಮ ಪಟ್ಟವರು ಅವರೇ. ಅವರ ಜೋತೆಯಲ್ಲಿದಾಗ ಆಡಿದ ಮಾತುಗಳು, ಸಿಡಿಸಿದ ಹಾಸ್ಯ ಚಟಾಕಿಗಳು, ಅವರೊಡನೆ ಕಳೆದ ಸಮಯ, ಅವರ ಸುಖ, ದು:ಖಗಳಲ್ಲಿ ಭಾಗಿಯಾದ ಕ್ಷಣಗಳು ಇಲ್ಲಿ ಕಳೆದುಕೊಳ್ಳುತಿರುವಂತೆ ಭಾಸವಾಗುತ್ತಿದೆ. ಇನ್ನು ಮುಂದಿರುವ ಐದು ತಿಂಗಳು ಕಳೆಯುವುದನ್ನು ನೆನಸಿದರೆ ಮೈಜುಮೆನ್ನುತ್ತದೆ. ಈ ಮೇಲಿನ ಎಲ್ಲಾ ವಿಚಾರಗಳು ನನ್ನ  ಆತ್ಮೀಯ ಸ್ನೇಹಿತರಿಗೆ ಅರ್ಪಿಸುತ್ತಿದ್ದೇನೆ.

ಇಂತಿ ನಿಮ್ಮ ನೆನಪಿನಲ್ಲಿರುವ
ಸಂತೋಷ್

3 comments:

  1. Hey santhosh,

    What you think is nice, try to loose yourself in books. Get some kannda novels from internet, those are betterway to forget everything

    ReplyDelete
  2. Hey Santhosh,
    this is the life style of Swedish people. Try to speak with some Swedish people, initially they will keep some distance but once you overcome this then you will enjoy their company. Dont worry, you will have good time.

    ReplyDelete
  3. maga school kannada text book gnapakakke banthu.,..good one.please continue...it will get things out from ur inside!!!!good way to explore yourself!!

    ReplyDelete