23 September 2009

ನೊಬೆಲ್ ನಾಡಿನ ನೈಜ ಕಥೆ

ಸ್ವೀಡನ್ನಿನ ರಾಜಧಾನಿ ಆದಂತ ಸ್ತಾಕ್ಕ್ಹೊಮೆನಲ್ಲಿ ಪ್ರತಿ ವರ್ಷವೂ ನೊಬೆಲ್ ಪ್ರಶಸ್ತಿ ನೀಡುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದರ ಸಂಭ್ರಮ ಹಾಗು ವೈಶಿಷ್ಟ್ಯತೆಯ ಬಗ್ಗೆ ನಿಮಗೆ ತಿಳಿಸುವ ಹಂಬಲ ನನ್ನದು. ಡಿಸೆಂಬರ್ ೧೦, ಪ್ರಶಸ್ತಿ ನೀಡುವ ದಿನ ಎಂದು ನಿಗದಿ ಮಾಡಲಾಗಿದೆ ಏಕೆಂದರೆ ಅಂದು ಅಲ್ಫ್ರೆಡ್ ನೊಬೆಲ್ ಕಾಲವಾದ ದಿನ. ಅವನ ಜ್ಞಾಪಕಾರ್ತವಾಗಿ ಅಂದೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ವಿಷಯಕ್ಕೆ ತಲಾ ೧೦ ಮಿಲಿಯನ್ ಸ್ವೀಡಿಷ್ ಕ್ರೋನರ್ಗಳನ್ನು ನೀಡಲಾಗುವುದು. ಪ್ರತಿಯೊಬ್ಬ ವಿಜೇತನಿಗೂ ಅವರ ಜೊತೆಯಲ್ಲಿ ೧೬ ಜನರನ್ನು ಕರೆತರಲು ಅವಕಾಶ ಇರುತ್ತದೆ. ಆ ಎಲ್ಲರಿಗೂ ಬಹುಮಾನ ಪಡೆದವನಿಗೆ ನೀಡುವ ಆಥಿತ್ಯ ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಬದ ನಂತರ ಎಲ್ಲರಿಗೂ ಭೋಜನ ಕೂಟ ಏರ್ಪಡಿಸಲಾಗುತ್ತದೆ. ಪ್ರತಿಯೊಬ್ಬ ವಿಜೇತನಿಗೂ ನಗದು, ಬಿತ್ತಿಪತ್ರ, ಮತ್ತು ೨೪ ಕಾರಟ್ ಅಪ್ಪಟ ಚಿನ್ನದಲ್ಲಿ ಮಾಡಿದ ಅಲ್ಫ್ರೆಡ್ ನೊಬೆಲ್ ಚಿತ್ರವಿರುವ ಒಂದು ಮೆಡಲ್ ನೀಡಲಾಗುವುದು. ಮುಂದೆ ನಡೆಯುವ ಸಂಬ್ರಮದ ವಿವರಣೆಗಾಗಿ ಕಾದುನೋಡಿ.

1 comment: