ಪ್ರಿಯ ಸ್ನೇಹಿತರೆ,
ಈ ನನ್ನ ನೆಚ್ಚಿನ ಬ್ಲಾಗ್ ನಲ್ಲಿ ಕಥೆ, ಕವನ, ಹಾಡುಗಳನ್ನು ಬರೆದು ಸುಮಾರು ಒಂದು ವರುಷವೇ ಆಗಿರಬೇಕು. ಇದಾವುದರ ಸಂಪರ್ಕವೇ ಇಲ್ಲದೆ ಬರೀ ಜೀವನ ಗುದ್ದಾಟ, ಕೆಲಸದ ಹುಡುಕಾಟದ ನಡುವೆ ಇದರ ಸವಿಯನ್ನು ಉಂಡಿರಲಿಲ್ಲ. ಇಂದು ಗಟ್ಟಿ ಮನಸ್ಸಿನಿಂದ ಯಾವ ಗೋಜು ಇಲ್ಲದೆ ತಂತ್ರಜ್ಞಾನದ ಅಡಿಯಾಳಾಗಿರುವ ಮನುಷ್ಯ ಜೀವನದ ಒಂದು ನೈಜ ಸ್ಥಿತಿಯನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಅಪ್ಪ-ಅಮ್ಮ ಯಾರು ಈಗ ಬೇಕಾಗಿಲ್ಲ
ಗಂಡ-ಹೆಂಡತಿ ಅನ್ನೋ ಬಂಧ ಕೇಳ್ತಾಯಿಲ್ಲ
ಮಕ್ಕಳನ್ನು play homeನಲ್ಲೆ ಬಿಡುವರೆಲ್ಲಾ
ಪ್ರೀತಿ-ಪ್ರೇಮ ಅನ್ನೋ ಪದ ಗೊತ್ತೆಯಿಲ್ಲಾ॥
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಬಂಧು-ಬಳಗವೆಲ್ಲ ಈಗ computerರಯ್ಯಾ
ಮದುವೆ-ಮುಂಜಿ ಎಲ್ಲಾ ಈಗ onlineಅಯ್ಯಾ
ಸ್ನೇಹವೆಂಬ ಸರಪಳಿ ಎಲ್ಲೂ ಸಿಗೊಲ್ಲಯ್ಯಾ
ಬಂತ ನೋಡು requestಟು facebookನಲ್ಲಿ
ಮಾತು-ಕಥೆ ಎಲ್ಲವೂ whatsappನಲ್ಲಿ
ಸುಖ-ದುಃಖ ಕಾಣೋದೆಲ್ಲಾ skypeನಲ್ಲೇ
ಒಡನಾಟ ತಿಳಿಯುವುದು viberನಲ್ಲೇ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಕಳೆಯುವುದು ತಾರುಣ್ಯ twitterನಲ್ಲಿ
ಮೋಜು-ಮಸ್ತಿ ಮಾಡುವುದು tangoದಲ್ಲೇ
ಕೊಳ್ಳುವರು ಮಕ್ಕಳನ್ನು ebayನಲ್ಲಿ
ಕಳಿಸುವರು ಅವರನ್ನು gmailನಲ್ಲಿ
ಬೇಡವಾದರವರು ಇವರ ಜೀವನದಲ್ಲಿ
ಮಾರಿ ಬಿಡುವರೆಲ್ಲಾ ಇಂದು OLXನಲ್ಲಿ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಏನೆ ಬೇಕು ಅಂದ್ರು ನೋಡು googleನಲ್ಲಿ
ಬೇಗ ಬೇಕು ಅಂದ್ರೆ ಹೇಳು 3Gಯಲ್ಲಿ
ತೋರುವುದು ಬ್ರಹ್ಮಾಂಡ earthತಿನಲ್ಲಿ
ನೋಡಬಹುದು ಚಿತ್ರವೆಲ್ಲಾ youtubeನಲ್ಲೇ
ಚಲಿಸುವರು ರಸ್ತೆಯೆಲ್ಲಾ mapಪಿನಲ್ಲೇ
ಆಡುವರು ಆಟವನ್ನು joystickನಲ್ಲೀ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಈ ನನ್ನ ನೆಚ್ಚಿನ ಬ್ಲಾಗ್ ನಲ್ಲಿ ಕಥೆ, ಕವನ, ಹಾಡುಗಳನ್ನು ಬರೆದು ಸುಮಾರು ಒಂದು ವರುಷವೇ ಆಗಿರಬೇಕು. ಇದಾವುದರ ಸಂಪರ್ಕವೇ ಇಲ್ಲದೆ ಬರೀ ಜೀವನ ಗುದ್ದಾಟ, ಕೆಲಸದ ಹುಡುಕಾಟದ ನಡುವೆ ಇದರ ಸವಿಯನ್ನು ಉಂಡಿರಲಿಲ್ಲ. ಇಂದು ಗಟ್ಟಿ ಮನಸ್ಸಿನಿಂದ ಯಾವ ಗೋಜು ಇಲ್ಲದೆ ತಂತ್ರಜ್ಞಾನದ ಅಡಿಯಾಳಾಗಿರುವ ಮನುಷ್ಯ ಜೀವನದ ಒಂದು ನೈಜ ಸ್ಥಿತಿಯನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಅಪ್ಪ-ಅಮ್ಮ ಯಾರು ಈಗ ಬೇಕಾಗಿಲ್ಲ
ಗಂಡ-ಹೆಂಡತಿ ಅನ್ನೋ ಬಂಧ ಕೇಳ್ತಾಯಿಲ್ಲ
ಮಕ್ಕಳನ್ನು play homeನಲ್ಲೆ ಬಿಡುವರೆಲ್ಲಾ
ಪ್ರೀತಿ-ಪ್ರೇಮ ಅನ್ನೋ ಪದ ಗೊತ್ತೆಯಿಲ್ಲಾ॥
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಬಂಧು-ಬಳಗವೆಲ್ಲ ಈಗ computerರಯ್ಯಾ
ಮದುವೆ-ಮುಂಜಿ ಎಲ್ಲಾ ಈಗ onlineಅಯ್ಯಾ
ಸ್ನೇಹವೆಂಬ ಸರಪಳಿ ಎಲ್ಲೂ ಸಿಗೊಲ್ಲಯ್ಯಾ
ಬಂತ ನೋಡು requestಟು facebookನಲ್ಲಿ
ಮಾತು-ಕಥೆ ಎಲ್ಲವೂ whatsappನಲ್ಲಿ
ಸುಖ-ದುಃಖ ಕಾಣೋದೆಲ್ಲಾ skypeನಲ್ಲೇ
ಒಡನಾಟ ತಿಳಿಯುವುದು viberನಲ್ಲೇ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಕಳೆಯುವುದು ತಾರುಣ್ಯ twitterನಲ್ಲಿ
ಮೋಜು-ಮಸ್ತಿ ಮಾಡುವುದು tangoದಲ್ಲೇ
ಕೊಳ್ಳುವರು ಮಕ್ಕಳನ್ನು ebayನಲ್ಲಿ
ಕಳಿಸುವರು ಅವರನ್ನು gmailನಲ್ಲಿ
ಬೇಡವಾದರವರು ಇವರ ಜೀವನದಲ್ಲಿ
ಮಾರಿ ಬಿಡುವರೆಲ್ಲಾ ಇಂದು OLXನಲ್ಲಿ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
ಏನೆ ಬೇಕು ಅಂದ್ರು ನೋಡು googleನಲ್ಲಿ
ಬೇಗ ಬೇಕು ಅಂದ್ರೆ ಹೇಳು 3Gಯಲ್ಲಿ
ತೋರುವುದು ಬ್ರಹ್ಮಾಂಡ earthತಿನಲ್ಲಿ
ನೋಡಬಹುದು ಚಿತ್ರವೆಲ್ಲಾ youtubeನಲ್ಲೇ
ಚಲಿಸುವರು ರಸ್ತೆಯೆಲ್ಲಾ mapಪಿನಲ್ಲೇ
ಆಡುವರು ಆಟವನ್ನು joystickನಲ್ಲೀ
ಪಾಪಿ ಕಲಿಗಾಲ ಬಂದಾಯ್ತಯ್ಯಾ
ಮನುಜನಿಗೆ mobileಲೇ ದೇವರಾಯ್ತಯ್ಯಾ॥
Nice!!!
ReplyDeleteDear Nagaraja,
ReplyDeleteThank you for the comment.
laptop, tablet, i-pad, ta-pho, drop box, etc.... to be used in coming stanzas.
ReplyDeleteDear Venky,
ReplyDeleteThanks for your suggestion. Will use them in the future.