15 April 2012

ಸ್ನೇಹಲೋಕ

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಮಾತಿರಲಿ, ಮುನಿಸಿರಲಿ 
ನನ್ನೊಳಗೆ ನೀನಿರುವೆ
ನನ್ನ ಪ್ರೀತಿ ಹೃದಯ ನೀ ತುಂಬಿದೆ
ನಿನ್ನ ಮುದ್ದಾದ ಮಾತಿನಲ್ಲೂ
ನೀನು ಬರಲೆಂದೇ ಕಾಯುವೆನು

ಮನಸಿನ ಮಾತು ಕಣ್ಣಲ್ಲಿ
ಹೃದಯದ ಮಾತು ಹಾಡಲ್ಲಿ
ನನ್ನ ಪುಟ್ಟ ಕನಸು ನೀ ತುಂಬಿದೆ
ನಿನ್ನ ಇಂಪಾದ ರಾಗದಲ್ಲೂ
ನಿನ್ನ ನೆನಪಲ್ಲೇ ಕಾದಿಹೆನು

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಇರುಳ ಚಂದಿರನ ಹಾಗೆ
ಅರಳೋ ಹೂವಿನ ಹಾಗೆ
ನನ್ನ ಬಾಳ ದೀಪ ನೀನಾದೆಯಾ
ನಿನ್ನ ಕಾಲ್ಗೆಜ್ಜೆ ಸದ್ದಿನಲ್ಲೂ
ನಾದ ಸ್ವರವನ್ನೇ ಕೇಳುವೆನು

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಸುಮ್ಮನೆ ಅಲ್ಲಿ ಸ್ನೇಹದ ಅಲೆ
ಸಿಂಚನ ಇಲ್ಲಿ ರಾಗದಾ ಮಳೆ

ಮಾತಿರಲಿ, ಮುನಿಸಿರಲಿ 
ನನ್ನೊಳಗೆ ನೀನಿರುವೆ
ನನ್ನ ಪ್ರೀತಿ ಹೃದಯ ನೀ ತುಂಬಿದೆ
 
 

 

2 comments:

  1. It looks like amurthavarshni's thunthuru alli neera haadu.............

    ReplyDelete
  2. Dear Ravindra,

    Your guess is right. It is in the style of amruthavarshini song.

    ReplyDelete