03 December 2009

ಸಂಶೋಧನಾ ಮನೋಭಾವನೆಯ ಅರ್ಥ

ಸಂಶೋಧನಾಕಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಓದು ಮತ್ತು ಕೆಲಸವನ್ನು ಸಫಲಗೊಳಿಸಲು ಸಂಶೋಧನೆ ಹಾಗು ಅದಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಒಳ್ಳೆಯ ಜ್ಞಾಪಕ ಶಕ್ತಿ ಅವಶ್ಯಕ. ಇತ್ತೀಚಿನ ಕೆಲವು ವರ್ಷಗಳಲ್ಲಿ ಸಂಶೋಧನಾ ಮನೋಭಾವ (Research mindedness) ಮತ್ತು ಸಂಶೋಧನಾ ಸಾಕ್ಷರತೆ (Research literacy) ಇವೆರಡನ್ನು ಸಮಾಜದ ಬೆಳವಣಿಗೆ, ವಿದ್ಯಾಭ್ಯಾಸ, ತರಬೇತಿ ಮತ್ತು ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ.  ಇದಕ್ಕೆ ಸಂಬಂಧಿಸಿದಂತೆ ಸ್ನೇಹಿತರ, ಶಿಕ್ಷಕರ, ವಿದ್ಯಾರ್ಥಿಗಳ, ಸಂಶೋಧಕರ, ಮತ್ತು ಸಮಾಜ ಚಿಂತಕರ ಅಭಿಪ್ರಾಯಗಳು ಈ ರೀತಿ ಇವೆ:
೧. ಒಬ್ಬ ಸಂಶೋಧನಾಕಾರ ತನ್ನ ಸಂಶೋಧನಾ ವಿಷಯದಲ್ಲಿ ಮತ್ತು ಜ್ಞಾನದಲ್ಲಿ ತೀಕ್ಷ್ಣ ಪರ್ಯಾಲೋಚನೆ (critical reflection) ಹೊಂದಿರಬೇಕು. 
೨. ಸಂಶೋಧನೆಯನ್ನು ಸರಿಯಾದ ರೀತಿಯಲ್ಲಿ ತೋರ್ಪಡಿಸುವ, ನಿಷ್ಪಕ್ಷಪಾತವಾಗಿ ತಿಳಿಯಪಡಿಸುವ, ಅದರ ಅನುಕೂಲ, ಅನಾನುಕುಲಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರಬೇಕು. 
೩. ಸಂಶೋಧನೆಯನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ (process of understanding research) ಮತ್ತು ಸಂಶೋಧನೆಯನ್ನು ತನ್ನ ಪ್ರಯತ್ನದಿಂದ ಸಿದ್ಧಾಂತಗೊಳಿಸುವ (Theorise practice) ಒಂದು ಚಾಣಾಕ್ಷತೆ ಉಳ್ಳವನಾಗಿರಬೇಕು. 

ಈ ಮೇಲಿನ ಗುಣಗಳನ್ನು ಪ್ರತಿಯೊಬ್ಬ ಸಂಶೋಧಕರು ತನ್ನಲ್ಲಿ ಅಳವಡಿಸಿಕೊಂಡಲ್ಲಿ ಆವರ ಸಂಶೋಧನೆ ನಿಜವಾದ ಮೌಲ್ಯ ಉಳ್ಳಂತ ಕಾರ್ಯ ಎಂದು ಪ್ರಪಂಚವು ಸ್ವೀಕರಿಸುವುದು.  ಅದಕ್ಕೆ ಪ್ರತಿಯೊಬ್ಬರೂ ತಮ್ಮ ಕೆಲಸದ ವಸ್ತುವಿನ ಮೇಲೆ ಗಮನಹರಿಸ ಬೇಕು ಹಾಗು
ಅದರಿಂದ ಆಗುವ ಅಥವ ಬರುವ ಲಾಭದ ಬಗ್ಗೆ ಚಿಂತಿಸಬಾರದು.  (One should emphsize more on the substance than symbols).  ನಾವು ನೀಡುವ ವಸ್ತು ಉತ್ತಮ ಗುಣಮಟ್ಟದ್ದಾದರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ತಾನಾಗೆ ಒಲಿದುಬರುವುದು.    

3 comments: